50 ಸಾವಿರದ ಸನಿಹಕ್ಕೆ ಷೇರುಪೇಟೆ
Team Udayavani, Jan 13, 2021, 6:59 AM IST
ಮುಂಬಯಿ: ಸತತ 3 ದಿನಗಳಿಂದಲೂ ಮುಂಬಯಿ ಷೇರುಪೇಟೆಯು ಸಾರ್ವಕಾಲಿಕ ದಾಖಲೆ ನಿರ್ಮಿಸುತ್ತಿದ್ದು, ಮಂಗಳವಾರ ಸಂವೇದಿ ಸೂಚ್ಯಂಕ 247.79 ಅಂಕಗಳ ಏರಿಕೆ ದಾಖಲಿಸಿ, ಮತ್ತೂಂದು ದಾಖಲೆಯ ಮೂಲಕ 49,517.11ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ಗಳ ಷೇರುಗಳು ಭಾರೀ ಪ್ರಮಾಣದಲ್ಲಿ ಖರೀದಿಯಾಗಿವೆ.
ಇದೇ ವೇಳೆ, ನಿಫ್ಟಿ 78.70 ಅಂಕ ಏರಿಕೆಯಾಗಿ, ದಿನಾಂತ್ಯಕ್ಕೆ 14,563.45ರಲ್ಲಿ ಅಂತ್ಯಗೊಂಡಿದೆ. ವಹಿವಾಟಿನ ಮಧ್ಯಾಂತರದಲ್ಲಿ ಇದು 14,590.65ಕ್ಕೆ ತಲುಪಿತ್ತು. 2021ರಲ್ಲಿ ಬ್ಯಾಂಕುಗಳ ಅನುತ್ಪಾದಕ ಆಸ್ತಿ ಹೆಚ್ಚಾಗಲಿದೆ ಎಂಬ ಆರ್ಬಿಐನ ಎಚ್ಚರಿಕೆಯ ನಡುವೆಯೂ ಷೇರುಪೇಟೆಯಲ್ಲಿ ಖರೀದಿ ಭರಾಟೆ ಜೋರಾಗಿಯೇ ನಡೆದಿದೆ.
ಮಂಗಳವಾರದ ಸೆನ್ಸೆಕ್ಸ್ ಚಾರ್ಟ್ನಲ್ಲಿ ಎಸ್ಬಿಐ ಅತೀ ಹೆಚ್ಚು ಲಾಭಗಳಿಸಿದ್ದು, ಷೇರು ಮೌಲ್ಯ ಶೇ.3.65ರಷ್ಟು ಏರಿಕೆ ಕಂಡಿದೆ. ಭಾರ್ತಿ ಏರ್ಟೆಲ್, ರಿಲಯನ್ಸ್ ಇಂಡಸ್ಟ್ರೀಸ್, ಎಚ್ಡಿಎಫ್ಸಿ ಬ್ಯಾಂಕ್, ಐಟಿಸಿ, ಆಕ್ಸಿಸ್ ಬ್ಯಾಂಕ್ ಮತ್ತು ಎನ್ಟಿಪಿಸಿಗಳೂ ಲಾಭ ಪಡೆದಿವೆ. ಇನ್ನು, ಏಷ್ಯನ್ ಪೈಂಟ್ಸ್, ಎಚ್ಯುಎಲ್, ನೆಸ್ಲೆ ಇಂಡಿಯಾ, ಟೈಟಾನ್, ಕೋಟಕ್ ಬ್ಯಾಂಕ್, ಸನ್ ಫಾರ್ಮಾ ನಷ್ಟ ಅನುಭವಿಸಿವೆ.
ಚಿನ್ನದ ಬೆಲೆ ಏರಿಕೆ: ಹಳದಿ ಲೋಹದ ಬೆಲೆ ಸತತ 2ನೇ ದಿನ ಹೆಚ್ಚಳವಾಗಿದ್ದು, ದಿಲ್ಲಿ ಚಿನಿವಾರ ಮಾರುಕಟ್ಟೆಯಲ್ಲಿ 297 ರೂ. ಏರಿಕೆಯಾಗಿ, 10 ಗ್ರಾಂಗೆ 48,946 ರೂ. ಆಗಿದೆ. ಬೆಳ್ಳಿ ಬೆಲೆ 1,404 ರೂ. ಹೆಚ್ಚಳವಾಗಿ, ಕೆಜಿಗೆ 65,380 ರೂ.ಗೆ ಏರಿದೆ. ಇನ್ನು, ಡಾಲರ್ ಎದುರು ರೂಪಾಯಿ ಮೌಲ್ಯ ಮಂಗಳವಾರ 15 ಪೈಸೆ ಏರಿಕೆಯಾಗಿ, 73.25ಕ್ಕೆ ತಲುಪಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.