ದನದ ಮಾಂಸ ಆರೋಗ್ಯಕರವೆಂದು ಶ್ಲೋಕದಲ್ಲೇ ಹೇಳಿದ್ದಾರೆ, ಆದರೆ ನಾನು ತಿಂದಿಲ್ಲ: ಸಿದ್ದರಾಮಯ್ಯ
Team Udayavani, Jan 13, 2021, 2:49 PM IST
ಮೈಸೂರು: ದನದ ಮಾಂಸ ತಿನ್ನುವ ಬಗ್ಗೆ ಶ್ಲೋಕವಿದೆ. ಒಳ್ಳೆಯ ದನದ ಮಾಂಸ ತಿಂದರೆ ಆರೋಗ್ಯ ಚೆನ್ನಾಗಿರುತ್ತದೆ ಎಂದು ಆ ಶ್ಲೋಕದಲ್ಲಿ ಹೇಳಿದ್ದಾರೆ. ಆದರೆ ನಾನು ದನದ ಮಾಂಸ ತಿಂದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ನನಗೆ ಆ ಶ್ಲೋಕ ನೆನಪಾಗುತ್ತಿಲ್ಲ. ಆಮೇಲೆ ನೆನಪು ಮಾಡ್ಕೊಂಡು ಹೇಳುತ್ತೇನೆ. ಸಂಸ್ಕೃತ ಗೊತ್ತಿರುವವರೇ ಶ್ಲೋಕ ಬರೆದಿರುತ್ತಾರೆ. ಹಾಗಾದರೆ ಶ್ಲೋಕದಲ್ಲಿ ತಪ್ಪು ಇದೆಯಾ ಎಂದು ಪ್ರಶ್ನಿಸಿದರು.
ಒಳ್ಳೆಯ ದನದ ಮಾಂಸ ತಿಂದರೆ ಆರೋಗ್ಯ ಚೆನ್ನಾಗಿರುತ್ತೆ ಅಂತ ಆ ಶ್ಲೋಕದಲ್ಲಿ ಹೇಳಿದ್ದಾರೆ. ಸದ್ಯಕ್ಕೆ ಆ ಶ್ಲೋಕ ನೆನಪಾಗುತ್ತಿಲ್ಲ. ಮತ್ತೆ ಮೈಸೂರಿಗೆ ಬಂದಾಗ ಆ ಶ್ಲೋಕ ಹೇಳುತ್ತೇನೆ. ಈಗ ಹೇಳಿರದೆ ಅದನ್ನು ವಿವಾದ ಮಾಡಿಬಿಡುತ್ತಾರೆ. ನಾನು ಹೇಳಿದ ವಿಚಾರ ಬಿಟ್ಟು ಬೇರೆ ಅರ್ಥದಲ್ಲಿ ಅದನ್ನು ಹೇಳಿಬಿಡುತ್ತಾರೆ. ಅದಕ್ಕೆ ಶ್ಲೋಕವನ್ನು ಸರಿಯಾಗಿಯೇ ಹೇಳುತ್ತೇನೆ ಎಂದರು.
ನಾನು ಇಲ್ಲಿಯವರೆಗೆ ಗೋಮಾಂಸ ತಿಂದಿಲ್ಲ. ಆದರೆ ತಿನ್ನಬೇಕು ಅನಿಸಿದ್ರೆ ತಿನ್ನುತ್ತೇನೆ. ಅದನ್ನು ಕೇಳಲು ಇವರ್ಯಾರು? ಆಹಾರ ನನ್ನ ಹಕ್ಕು ಅದನ್ನು ಪ್ರಶ್ನಿಸೋಕೆ ಇವರ್ಯಾರು ಎಂದು ಕುಟುಕಿದರು.
ಇದನ್ನೂ ಓದಿ:ಮಂತ್ರಿಗಿರಿಗಾಗಿ CD ಬ್ಲ್ಯಾಕ್ ಮೇಲ್, ಹಣಕೊಟ್ಟು ಸಚಿವಸ್ಥಾನ ಪಡೆದಿದ್ದಾರೆ: ಯತ್ನಾಳ್ ಆರೋಪ
ನಾನು ಈವರೆಗೆ ಗೋಮಾಂಸ ತಿಂದಿಲ್ಲ. ನಾನು ಹಂದಿ ಮಾಂಸ ತಿಂದಿಲ್ಲ. ನಾನು ತಿಂದಿರುವುದು ಕೋಳಿ ಮಾಂಸ, ಕುರಿಮಾಂಸ, ಆಡಿನ ಮಾಂಸ ಮಾತ್ರ. ಆದರೆ ನಮ್ಮ ಆಹಾರ ಪದ್ದತಿ ಪ್ರಶ್ನಿಸುವ ಹಕ್ಕು ಇಲ್ಲಿ ಯಾರಿಗೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಗೋಮಾಂಸ ತಿನ್ನುವುದೇ ಸಾಧನೆ ಎಂದು ಹೇಳಿದ್ದಾನೆ. ಆದರೆ ನಾನೇನು ಅವನ ಥರ ಸೋಪ್ಪು ತಿನ್ನಲಾ? ನಾನು ಸೊಪ್ಪು ಬೇಕು ಅಂದ್ರೆ ಸೊಪ್ಪು ತಿನ್ನುತ್ತೇನೆ. ಮಾಂಸ ಬೇಕು ಅಂದ್ರೆ ಮಾಂಸ ತಿನ್ನುತ್ತೇನೆ. ನಾನೇನಾದರೂ ನಿಂಗೆ ಮಾಂಸ ತಿನ್ನು ಎಂದು ಹೇಳಿದ್ದೀನಾ? ಮತ್ತೇ ತಿನ್ನುವವರಿಗೆ ಸುಮ್ಮನೆ ಯಾಕೇ ಪ್ರಶ್ನೆ ಮಾಡ್ತೀಯಾ? ಜಗತ್ತಿನಲ್ಲಿ ಮಾಂಸಹಾರಿಗಳೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಚೀನಾದಲ್ಲಿ ನಾಲ್ಕು ಕಾಲಿನ ಮಂಚವೊಂದನ್ನು ಬಿಟ್ಟು ಇನ್ನೆಲ್ಲವನ್ನು ತಿಂತಾರೆ ಗೊತ್ತಾ ನಿಮಗೆ. ಅಮೇರಿಕಾ, ಇಂಗ್ಲೆಂಡ್, ಬ್ರಿಟನ್ ಸೇರಿದಂತೆ ಬೇರೆ ದೇಶದಲ್ಲಿರೋರು ದನ ತಿಂತಾರೆ. ಹಾಗಾದರೆ ಅವರೆಲ್ಲಾ ಪ್ರಾಣಿಗಳಾ? ನಿಮಗೆ ಸೊಪ್ಪುಇಷ್ಟ ಇದ್ದರೆ ತಿನ್ನಿ. ಬೇರೆಯವರಿಗೆ ಏನು ಇಷ್ಟ ಇದೆಯೋ ಅದನ್ನು ತಿನ್ನಲು ಬಿಡಿ ಎಂದು ಬಿಎಸ್ವೈ ವಿರುದ್ದ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ
Hubli: ಪ್ರಿಯಾಂಕ್ ಖರ್ಗೆಗೆ ಎಫ್ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
MUST WATCH
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.