ಪಾಲಿಟಿಕ್ಸ್‌ ಎಂಟ್ರಿಗೆ ರೈತ ಹೋರಾಟ ಇಬ್ಭಾಗ?ಬಹಿರಂಗ ವಾಗ್ವಾದಕ್ಕಿಳಿದ ರೈತ ಮುಖಂಡರು

5ಎ ಕಾಲುವೆ ಜಾರಿಗೆ ಆಗ್ರಹಿಸಿ ಕಳೆದ 12 ವರ್ಷಗಳಿಂದ ರೈತರ ಹೋರಾಟ ನಡೆದಿದೆ.

Team Udayavani, Jan 13, 2021, 6:19 PM IST

ಪಾಲಿಟಿಕ್ಸ್‌ ಎಂಟ್ರಿಗೆ ರೈತ ಹೋರಾಟ ಇಬ್ಭಾಗ?ಬಹಿರಂಗ ವಾಗ್ವಾದಕ್ಕಿಳಿದ ರೈತ ಮುಖಂಡರು

ಮಸ್ಕಿ: ಸತತ 53 ದಿನಗಳಿಂದ ನಡೆದ ನಾರಾಯಣಪುರ ಬಲದಂಡೆ 5ಎ ಕಾಲುವೆ ಹೋರಾಟದಲ್ಲಿ ಪಾಲಿಟಿಕ್ಸ್‌ ನುಸುಳಿದ್ದು, ಚಳವಳಿಯ ಗುಂಪು ಚದುರುವ ಸನ್ನಿವೇಶ ನಿರ್ಮಾಣವಾಗಿದೆ!. 5ಎ ಕಾಲುವೆ ಹೋರಾಟ ಸಮಿತಿ ಹೊರತಾಗಿ ಮತ್ತೂಂದು ರೈತರ ಗುಂಪು ನಂದವಾಡಗಿ ಏತ ನೀರಾವರಿ ಬೇಕು ಎನ್ನುವ ವಾದ, ರೈತ ಚಳವಳಿ ಇಬ್ಭಾಗಕ್ಕೆ ಕಾರಣವಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಮಂಗಳವಾರ ಭ್ರಮರಾಂಭ ದೇವಿ ಕಲ್ಯಾಣ ಮಂಟಪದಲ್ಲಿ ಎರಡು ರೈತರ ಗುಂಪಿನ ನಡುವೆ ನಡೆದ ವಾಗ್ವಾದ ಚರ್ಚೆ, ಆಕ್ಷೇಪ, ಆಕ್ರೋಶ ಇದನ್ನು ಪುಷ್ಠಿàಕರಿಸಿದ್ದು, 5ಎ ಕಾಲುವೆ ಹೋರಾಟ ಹಾದಿ ತಪ್ಪುತ್ತಿದೆಯಾ? ಎನ್ನುವ ಅನುಮಾನ ನಿಜ ಮಾಡಿದೆ.

ಆಗಿದ್ದೇನು?: 31ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ನೀರು ಒದಗಿಸುವ 5ಎ ಕಾಲುವೆ ಜಾರಿಗೆ ಆಗ್ರಹಿಸಿ ಕಳೆದ 12 ವರ್ಷಗಳಿಂದ ರೈತರ ಹೋರಾಟ ನಡೆದಿದೆ. ಆದರೆ
ಕಳೆದ 53 ದಿನಗಳಿಂದ ರೈತರು ಚಳವಳಿ ತೀವ್ರವಾಗಿದ್ದು, 5ಎ ಕಾಲುವೆ ಹೋರಾಟ ಸಮಿತಿಯಿಂದ ಅನಿರ್ದಿಷ್ಟ ಧರಣಿ ಪಾಮನಕಲ್ಲೂರಿನಲ್ಲಿ ಆರಂಭವಾಗಿದೆ.

ಈ ಯೋಜನೆ ಬಾಧಿತ ಹಳ್ಳಿಗರ ಶಕ್ತಿ ಪ್ರದರ್ಶನ, ಮಠಾ ಧೀಶರ ಬೆಂಬಲ, ಒಗ್ಗಟ್ಟು ಪ್ರದರ್ಶನದ ಮೂಲಕ 30 ಹಳ್ಳಿಗಳ ಗ್ರಾಪಂ ಚುನಾವಣೆ ಬಹಿಷ್ಕಾರ, ಮಸ್ಕಿ ಬಂದ್‌ ಸೇರಿ ಹಂತ-ಹಂತದ ಹೋರಾಟ ನಡೆದು ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗಿತ್ತು.

ರೈತರ ಈ ಹೋರಾಟಕ್ಕೆ ಮಣಿದ ಸರ್ಕಾರ ಈ ಹಿಂದೆ ಈ ಯೋಜನೆ ಜಾರಿ ಸಾಧ್ಯವೇ ಇಲ್ಲ ಎಂದು ಮತ್ತೂಮ್ಮೆ ಪರಿಶೀಲನೆಗೆ ತಾಂತ್ರಿಕ ಸಲಹಾ ಸಮಿತಿ ನೇಮಕ ಮಾಡಿತ್ತು. ಆದರೀಗ ಇದರ ಬೆನ್ನಲ್ಲೇ ರೈತರ ನಡುವೆ ಭಿನ್ನಮತ ಬಯಲಾಗಿದೆ.

ಮಾತಿನ ಸಂಘರ್ಷ: 5ಎ ಜಾರಿವರೆಗೂ ನಂದವಾಡಗಿ ಏತ ನೀರಾವರಿ ಮೂಲಕವೇ ನೀರು ಕೊಡಿ ಎಂದು ಕೆಲ ರೈತರು ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆ ಇಟ್ಟು ಮಂಗಳವಾರ ಮಸ್ಕಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಆದರೆ ಈ ಸುದ್ದಿ ತಿಳಿದ ಮತ್ತೂಂದು ರೈತರ ಗುಂಪು ಹೋರಾಟ ಸ್ಥಳ ಪಾಮನಕಲ್ಲೂರಿನಿಂದ ಮಸ್ಕಿಗೆ ದೌಡಾಯಿಸಿ, ಸುದ್ದಿಗೋಷ್ಠಿ ನಡೆಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ವ್ಯತಿರಿಕ್ತ ಹೇಳಿಕೆ ಮೂಲಕ ರೈತರ ಹೋರಾಟ ದಾರಿ ತಪ್ಪಿಸುವುದು ಸರಿಯೇ?, ರೈತರ ಧರಣಿ ವೇದಿಕೆಯಲ್ಲೇ ಇವೆಲ್ಲವನ್ನೂ ಚರ್ಚೆ ಮಾಡಬೇಕು. ಆದರೆ ಎಲ್ಲ ಬಿಟ್ಟು ಹೀಗೆ ಇನ್ನೊಬ್ಬರ ಮಾತು ಕೇಳಿ ಹೋರಾಟ ಹೊಡೆಯಬೇಡಿ ಎಂದು ಮನವಿ ಮಾಡಿದರು. ಈ ವೇಳೆ ಎರಡು ರೈತರ ಗುಂಪಿನ ನಡುವೆ ಆರಂಭದಲ್ಲಿ ಮಾತಿನ ಚರ್ಚೆ, ಪರಸ್ಪರ ವಾಗ್ವಾದ ನಡೆಯಿತು. ಬಳಿಕ ಆವೇಶ, ಆಕ್ರೋಶದ ಮೂಲಕ ರೈತರು ಎರಡು ಬಣಗಳಾಗಿ ಚದುರಿದರು.

ತೆರೆಮರೆ ಪಾಲಿಟಿಕ್ಸ್‌
ರೈತರ ಹೋರಾಟ ಹೀಗೆ ಇಬ್ಭಾಗವಾಗಲು ರಾಜಕೀಯ ಎಂಟ್ರಿಯೇ ಕಾರಣ ಎನ್ನುವುದು ಸ್ಪಷ್ಟವಾಗಿದೆ. 5ಎ ಕಾಲುವೆ ಹೋರಾಟಕ್ಕೆ ಕಾಂಗ್ರೆಸ್‌ ಬೆಂಬಲಿಸಿದೆ ಎನ್ನುವ ಗುಮಾನಿ ಆರಂಭದಿಂದಲೂ ಇತ್ತು. ಆದರೆ ಮಸ್ಕಿ ಬಂದ್‌ ವೇಳೆ ಕಾಂಗ್ರೆಸ್‌ನವರೇ ಇದನ್ನು ಬಹಿರಂಗಪಡಿಸಿ ಹೋರಾಟದಲ್ಲೂ ಭಾಗಿಯಾದರು. ಆದರೆ ಇದಕ್ಕೆ ಪ್ರತಿಯಾಗಿಯೇ ಬಿಜೆಪಿ ಗುಂಪು ಪ್ರತಿ ದಾಳ ಉರುಳಿಸಿದೆ ಎನ್ನುವುದು ಸ್ಪಷ್ಟವಾಯಿತು.

ಬಿಜೆಪಿ ಮುಖಂಡರು, ಪದಾಧಿಕಾರಿಗಳು ಇರುವ ರೈತರ ಗುಂಪೇ ನಂದವಾಡಗಿ ಏತ ನೀರಾವರಿ ಬೇಡಿಕೆ ಪುನರುತ್ಛರಿಸಿದೆ. ಅಲ್ಲದೇ ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ಜ.11ರಂದು ಕೆಲ ರೈತರಿಗೆ ಖುದ್ದು ಬಿಜೆಪಿ ಕಚೇರಿಯಿಂದಲೇ ದೂರವಾಣಿ ಸಂದೇಶ ಹೋಗಿದ್ದು ಇದೆಲ್ಲವನ್ನೂ ಹೊರಹಾಕಿದೆ.ಒಟ್ಟಿನಲ್ಲಿ ನೀರಾವರಿ ಬೇಡಿಕೆಗಾಗಿ ನಡೆದ ಚಳವಳಿ ರಾಜಕೀಯ ಎಂಟ್ರಿಯಿಂದ ದಿಕ್ಕಾಪಾಲಾಗುವ ಸನ್ನಿವೇಶ ಮಾತ್ರ ಉಂಟಾಗಿದೆ.

ಮಲ್ಲಿಕಾರ್ಜುನ ಚಿಲ್ಕರಾಗಿ

ಟಾಪ್ ನ್ಯೂಸ್

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

CM-ibrahim

HDK ವಿರುದ್ಧ ಜಮೀರ್‌ ಹೇಳಿಕೆ ತಪ್ಪು: ಸಿ.ಎಂ. ಇಬ್ರಾಹಿಂ

Sidda Speach

B.Z. Zameer Ahmed Khan ‘ಕರಿಯ’ ಎನ್ನಬಾರದಿತ್ತು: ಸಿಎಂ ಸಿದ್ದರಾಮಯ್ಯ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ

Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ

ಮಂತ್ರಾಲಯ ಶ್ರೀಗಳಿಂದ ತುಂಗಭದ್ರ ನದಿಯಲ್ಲಿ ದಂಡೋದಕ ಸ್ನಾನ

Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ

5-raichur

Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು

Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ

Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ

Raichruru-RTPS

Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

accident

Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

Lashkar-e-Taiba; ಹೆಸರಲ್ಲಿ ಹಾಡು ಹಾಡಿ ಆರ್‌ಬಿಐ ಕಚೇರಿಗೆ ಬೆದರಿಕೆ!

CM-ibrahim

HDK ವಿರುದ್ಧ ಜಮೀರ್‌ ಹೇಳಿಕೆ ತಪ್ಪು: ಸಿ.ಎಂ. ಇಬ್ರಾಹಿಂ

Sidda Speach

B.Z. Zameer Ahmed Khan ‘ಕರಿಯ’ ಎನ್ನಬಾರದಿತ್ತು: ಸಿಎಂ ಸಿದ್ದರಾಮಯ್ಯ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.