ಸ್ನೇಹ, ಒಡನಾಟಕ್ಕೆ ಎಂದೂ ಸಾವಿಲ್ಲ: ಶ್ರೀದೇವಿ ಸಿ. ರಾವ್
Team Udayavani, Jan 13, 2021, 7:43 PM IST
ಮುಂಬಯಿ: ಚಂದ್ರಶೇಖರ ರಾವ್ ಮೆಮೋರಿಯಲ್ ಟ್ರಸ್ಟ್ ಮತ್ತು ಮುಂಬಯಿ ಚುಕ್ಕಿ ಸಂಕುಲದ ಲೇಖಕ ಕಲಾವಿದರ ಬಳಗದ ಸಹಯೋಗದೊಂದಿಗೆ ಶನಿವಾರ ಸಂಜೆ ಭಾಂಡೂಪ್ ಪಶ್ಚಿಮದಲ್ಲಿ ದಿ| ಚಂದ್ರಶೇಖರ ರಾವ್ ಜನ್ಮದಿನ ಸಂಸ್ಮರಣೆ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು.
ಸಂಸ್ಥೆಯ ಟ್ರಸ್ಟಿ ಶ್ರೀದೇವಿ ಚಂದ್ರಶೇಖರ ರಾವ್ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರಾಗಿದ್ದ ಕವಿ, ಕಥೆಗಾರ ಡಾ| ಕೆ. ಗೋವಿಂದ ಭಟ್ ಅವರು ಟ್ರಸ್ಟ್‌ನ ಕಾರ್ಯಕ್ರಮಗಳ ಸವಿನೆನಪುಗಳ ಫೋಟೋ ಆಲ್ಬಮ್ ಬಿಡುಗಡೆಗೊಳಿಸಿ ಮಾತನಾಡಿ, ಕವಿತೆ ಬರೆಯುವ ತುಡಿತ, ಸೆಳೆತ ಇರುವ ಹೊಸಬರು ಅಂತರ್ಜಾಲ ಆಯೋಜಿಸುವ ಕಾವ್ಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು.
ಈಗ ಅಂತಹ ವಿಫುಲ ಅವಕಾಶಗಳು ಸಿಗುತ್ತಿವೆ. ಚಂದ್ರಶೇಖರ ರಾವ್ ಅವರು ಗುಣವಂತ, ಸೃಜನಶೀಲ ವ್ಯಕ್ತಿ ಆಗಿದ್ದರು ಎನ್ನುವುದಕ್ಕೆ ಇಂತಹ ಸಂಕಷ್ಟದ ಸಮಯದಲ್ಲೂ ಅವರ ಮೇಲಿನ ಪ್ರೀತಿಯಿಂದ ಇಲ್ಲಿ ಸೇರಿದ ನೀವೇ ಸಾಕ್ಷಿ ಎಂದು ತಿಳಿಸಿ, ಇತ್ತೀಚೆಗೆ ಬಹುಮಾನ ಪಡೆದ ತಮ್ಮ ಕವಿತೆಯೊಂದನ್ನು ವಾಚಿಸಿದರು.
ಶ್ರೀದೇವಿ ಸಿ. ರಾವ್ ಮಾತನಾಡಿ, ಟ್ರಸ್ಟ್‌ನ ಹುಟ್ಟು, ಧ್ಯೇಯ, ಉದ್ದೇಶಗಳನ್ನು ವಿವರಿಸಿದರು. ಪತಿಯ ಆಸೆಯಂತೆ ಸಾಹಿ ತ್ಯದ ಪರಿಚಾರಿಕೆ, ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ವಾರ್ಷಿಕವಾಗಿ ಕವಿಗೋಷ್ಠಿಯನ್ನು ಹಮ್ಮಿಕೊಳ್ಳುತ್ತಿದ್ದೇವೆ. ಬರಹಗಾರರ ಬಳಗಕ್ಕೆ, ಅವರ ಸ್ನೇಹ, ಒಡನಾಟಕ್ಕೆ ಎಂದೂ ಸಾವಿರುವುದಿಲ್ಲ ಎಂದು ಪತಿ ಹೇಳುತ್ತಿದ್ದರು. ಈ ಮಾತನ್ನು ನೀವು ಪ್ರತೀವರ್ಷದಂತೆ ಈ ಬಾರಿಯೂ ಪ್ರೀತಿಯಿಂದ ಬಂದು ನಿಜವಾಗಿಸಿದ್ದೀರಿ. ಭಾಗವಹಿಸಿದ ಕವಿಗಳು, ಸಾಹಿತ್ಯಾಸಕ್ತ ಬಂಧುಗಳಿಗೆ, ಚುಕ್ಕಿಸಂಕುಲದ ಕವಿ, ನಾಟಕಕಾರ ಸಾ. ದಯ, ಗೋಪಾಲ ತ್ರಾಸಿ, ಭೀಮರಾಯ ಚಿಲ್ಕಾ ಮೊದಲಾದವರ ನಿರಂತರ ಸಹಕಾರಕ್ಕೆ ತುಂಬು ಹೃದಯದಿಂದ ಕೃತಜ್ಞತೆ ಸಲ್ಲಿಸುವೆ ಎಂದರು.
ಇದನ್ನೂ ಓದಿ:ಟಾಟಾ ಆಲ್ಟ್ರೋಜ್ ಟರ್ಬೋ ಅನಾವರಣ : ನಾಳೆಯಿಂದ ಬುಕಿಂಗ್‌ಗೆ ಅವಕಾಶ
ಡಾ| ಜಿ. ಪಿ. ಕುಸುಮಾ ಅವರು ಚಂದ್ರಶೇಖರ ರಾವ್ ಅವರ ಕವಿತೆಗಳನ್ನು ಪ್ರಸ್ತುತಪಡಿಸಿದರು. ಆಮಂತ್ರಿತ ಕವಿಗಳಾದ ಡಾ| ಕರುಣಾಕರ ಶೆಟ್ಟಿ ಪಣಿಯೂರು, ಡಾ| ರಜನಿ ಪೈ, ಲಲಿತಾ ಪ್ರಭು ಅಂಗಡಿ, ಕುಸುಮಾ ಸಿ. ಅಮೀನ್, ಸರೋಜಾ ಅಮಾತಿ, ಶೋಭಾ ಶೆಟ್ಟಿ, ವಿಜಯಾ ಗೋವಿಂದ ಭಟ್ ಅವರು ತಮ್ಮ ಕವಿತೆಗಳನ್ನು ವಾಚಿಸಿದರು. ವಿಜಯಾ ಗೌಡ ಮತ್ತು ಸರೋಜಾ ಅಮಾತಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಪ್ರಭಾವತಿ ಶೆಣೈ, ಶೈಲಾ ಶೆಟ್ಟಿ, ಶಶಿಕಲಾ ಕತ್ರಿ ಮತ್ತಿತರರು ರಾವ್ ಪರಿವಾರದ ಜತೆಗಿನ ಮಿತೃತ್ವ ಬಾಂಧವ್ಯವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಟ್ರಸ್ಟ್ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ವಾರ್ಷಿಕ ವಿದ್ಯಾರ್ಥಿವೇತನ ವಿತರಿಸಲಾಯಿತು.
ಕವಿ, ಕಥೆಗಾರ ಗೋಪಾಲ ತ್ರಾಸಿ ಪ್ರಸ್ತಾವಿಸಿ, ಗೆಳೆಯ ಚಂದ್ರಶೇಖರ ರಾವ್ ಅವರೊಂದಿಗಿನ ಸಾಹಿತ್ಯಿಕ ಒಡನಾಟದ ದಿನಗಳನ್ನು ಸ್ಮರಿಸಿ, ಚುಕ್ಕಿಸಂಕುಲದ ಆರಂಭದ ದಿನಗಳ ಚಟುವಟಿಕೆಗಳನ್ನು ಮೆಲುಕು ಹಾಕಿದರು. ಚಂದ್ರಶೇಖರ ರಾವ್ ಅವರ ಒಂದು ಹರಟೆ ಬರಹವನ್ನು ಪ್ರಸ್ತುತ ಪಡಿಸಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ಚಿತ್ರ-ವರದಿ: ರೊನಿಡಾ ಮುಂಬಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.