ಬ್ಯಾಂಕ್‌ನ ಅಭಿವೃದ್ಧಿಗಾಗಿ ಸಹಭಾಗಿತ್ವ ; ಕೆ.ಕೆ. ಪೈ ತಂತ್ರ


Team Udayavani, Jan 14, 2021, 6:55 AM IST

ಬ್ಯಾಂಕ್‌ನ ಅಭಿವೃದ್ಧಿಗಾಗಿ ಸಹಭಾಗಿತ್ವ ; ಕೆ.ಕೆ. ಪೈ  ತಂತ್ರ

ಕೆ. ಕೆ. ಪೈ ನಮ್ಮನ್ನಗಲಿ ಇಂದಿಗೆ ಹನ್ನೆರಡು ವರ್ಷಗಳಾದವು. ಈ ವರ್ಷ ಅವರ ಶತಾಬ್ಧಿಯಾಗಿದ್ದು, ಈಗ ಅವರು ಬದುಕಿದ್ದರೆ ಅವರ ಅತೀ ಪ್ರೀತಿಯ ಮತ್ತು ತಾವು ಎಂಟು ವರ್ಷಗಳಿಗಿಂತಲೂ ಹೆಚ್ಚು ಕಾಲ ಅಧ್ಯಕ್ಷರಾಗಿದ್ದ ಸಿಂಡಿಕೇಟ್‌ ಬ್ಯಾಂಕ್‌ ತನ್ನ ಅಸ್ತಿತ್ವ ಕಳೆದುಕೊಂಡು ಕೆನರಾ ಬ್ಯಾಂಕ್‌ನೊಂದಿಗೆ ವಿಲೀನಗೊಂಡಿರುವ ಬಗ್ಗೆ ತುಂಬಾ ವ್ಯಥೆ ಪಡುತ್ತಿದ್ದರೋ ಏನೋ.

ಕೆ.ಕೆ. ಪೈ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿದ್ದಾಗ ಬ್ಯಾಂಕ್‌ನ ಅಭಿವೃದ್ಧಿಗೆ ಅವರು ಅಳವಡಿಸಿಕೊಂಡಿದ್ದ ಒಂದು ಪ್ರಮುಖ ತಂತ್ರವೆಂದರೆ ಸಹ ಭಾಗಿತ್ವ. ಬ್ಯಾಂಕ್‌ನ ಅಭಿವೃದ್ಧಿಗಾಗಿ ಮತ್ತು ಉತ್ತಮ ಗ್ರಾಹಕ ಸೇವೆಗಾಗಿ ನೌಕರರ ಹೃತೂ³ರ್ವಕ ಸಹಭಾಗಿತ್ವವನ್ನು ಅವರು ಬಳಸಿಕೊಂಡಿದ್ದರು. ಬ್ಯಾಂಕ್‌ನ ಆಡಳಿತ ವರ್ಗ ನೌಕರರ ಸಹಭಾಗಿತ್ವವನ್ನು ಬೆಳೆಸುವ ಕ್ರಮಗಳಿಗೆ ಮತ್ತು ನೀತಿಗೆ ಅತೀ ಹೆಚ್ಚಿನ ಒತ್ತು ನೀಡಬೇಕೆಂದು ಅವರು ಹೇಳುತ್ತಿದ್ದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ  ಒಳ್ಳೆಯ ವೇತನ ಮತ್ತು ಸವಲತ್ತುಗಳ ಹೊರತಾಗಿಯೂ ನೌಕರ-ಸಹಭಾಗಿತ್ವ ಕಡಿಮೆಯಾಗಲು ಕಾರಣವೇ ನೆಂದು ಅವರೊಂದಿಗೆ ನಡೆಸಿದ ಸಂದರ್ಶನವೊಂದರಲ್ಲಿ ನಾನು ಕೇಳಿದಾಗ ಅವರು ಹೀಗೆ ಉತ್ತರಿಸಿದ್ದರು. “ರಾಷ್ಟ್ರೀಕರಣಕ್ಕೂ ಮುನ್ನ ಬ್ಯಾಂಕ್‌ನಲ್ಲಿ  ಸ್ಥಳೀಯ ಅಭ್ಯರ್ಥಿಗಳನ್ನೇ ನೇಮಿ ಸಲಾಗುತ್ತಿತ್ತು. ಅಲ್ಪ ವೇತನ ಅದೇಕೆ ಸಂಬಳವಿಲ್ಲದೆ ಕೂಡ ಬ್ಯಾಂಕ್‌ ಸೇರಿದವರಿದ್ದಾರೆ. ಅವರಿಗೆಲ್ಲ ಕೆಲಸದ ಆವಶ್ಯಕತೆಯಿತ್ತು. ತಮಗೆ ಚೆನ್ನಾಗಿ ತಿಳಿದಿದ್ದ ಬ್ಯಾಂಕಿಂಗ್‌ ಸಂಸ್ಥೆಯನ್ನು ಸೇರಿ ಆ ಮೂಲಕ ತಮ್ಮ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಸಾಧಿಸಿಕೊಳ್ಳುವ ಇರಾದೆ ಅವರಿಗಿತ್ತು. ಆಗ ನೌಕರಿ ನೀಡುವಾಗ ಸಾಮಾಜಿಕ ಧ್ಯೇಯವನ್ನೇ ಪರಿಗಣಿಸಿ, ಗ್ರಾಮೀಣ ಪ್ರದೇಶಗಳ ಯುವಕ-ಯುವತಿಯರಿಗೆ ಕೆಲಸ ನೀಡಲಾಗುತ್ತಿತ್ತು. ಅವರಿಗೆ ಊರಿನ ಮತ್ತು ಗ್ರಾಹಕರ ವೈಯಕ್ತಿಕ ಪರಿಚಯವಿತ್ತು. ಆ ಪರಿಚಯವನ್ನು ಬಳಸಿ ಅವರು ಅಭಿವೃದ್ಧಿ ಕೆಲಸಗಳಲ್ಲೂ ಕಾಣಿಕೆ ನೀಡುತ್ತಿದ್ದರು. ಈಗ ಹಾಗಲ್ಲ, ಈಗ ಎಲ್ಲ ನೌಕರರೂ ಹೊರಗಿನವರು. ಬೇರೆ ಬೇರೆ ಊರುಗಳಿಂದ ಅವರು ಬಂದಿರುತ್ತಾರೆ. ಅವರಿಗೆ ಜನರ, ಊರಿನ ಪರಿಚಯವಿಲ್ಲ. ಇದು ನನ್ನ ಬ್ಯಾಂಕ್‌, ಇದು ನನ್ನ ಊರು ಎಂಬ ಭಾವನೆ  ಅವರಿಗಿರುವುದಿಲ್ಲ. ಬ್ಯಾಂಕ್‌ ಮ್ಯಾನೇಜ್‌ಮೆಂಟ್‌ ಮತ್ತು ಅವರ ನಡುವೆ ಯಾವ ರೀತಿಯ ಬಂಧನವೂ ಇರು ವುದಿಲ್ಲ. ಇದರ ಪರಿಣಾಮವಾಗಿ ಈಗ ನೌಕರರಿಗೆ ಗ್ರಾಹಕ ಸೇವೆ ನೀಡುವ ಉತ್ಸಾಹ, ಪ್ರೇರಣೆ ಇಲ್ಲ’.

ನೌಕರ ಪ್ರೇರಣೆ :

ಸಹಭಾಗಿತ್ವ  ಬೆಳೆಸಿದರೆ ಅದರ ಫ‌ಲವಾಗಿ ನೌಕರರಿಗೆ ಪ್ರೇರಣೆ  ದೊರೆಯುತ್ತದೆ ಹಾಗೂ ಕೆಲಸ ಮಾಡುವ ಹುಮ್ಮಸ್ಸು ಹೆಚ್ಚುತ್ತದೆ. ಉತ್ಸಾಹ ಬೆಳೆಯುತ್ತದೆ. ಸಹಭಾಗಿತ್ವಕ್ಕೆ ವ್ಯಕ್ತಿಯ ವೈಯಕ್ತಿಕ ವರ್ತನೆಗೆ ಸಂಬಂಧಿಸಿದ ಆಯಾಮವಿರುತ್ತದೆ ಎಂದು ಕೆ.ಕೆ. ಪೈ ಹೇಳುತ್ತಿದ್ದರು. ಕೆ.ಕೆ. ಪೈ ಸಂದರ್ಶನದಲ್ಲಿ ತಿಳಿಸಿದ್ದ  ಮತ್ತೂಂದು ವಿಷಯ ಬ್ಯಾಂಕ್‌ಗಳಲ್ಲಿ  ಇಂದಿನ ಮಾನವ ಸಂಪನ್ಮೂಲ ನಿರ್ವಹಣೆ ವಿಭಾಗಗಳ ಕಾರ್ಯ ನಿರ್ವ ಹಣೆ ವ್ಯವಸ್ಥೆಗೆ ಸಂಬಂಧಿಸಿದ್ದಾಗಿತ್ತು. ಮಾನವ ಸಂಪನ್ಮೂಲ ನಿರ್ವಹಣ ವಿಭಾಗಗಳು ವ್ಯಕ್ತಿ ಸಂಬಂಧವಿಲ್ಲದ ವಿಭಾಗಗಳಾಗಿ ಬಿಟ್ಟಿವೆ ಎಂಬುದು ಅವರ ಅಭಿಪ್ರಾಯವಾಗಿತ್ತು.

ಏಕ ರೀತಿಯ ನಿರ್ವಹಣೆ :

ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಬೇರೆ ಬೇರೆ ಪ್ರಾದೇಶಿಕ ಕಚೇರಿಗಳು  ಏಕರೀತಿಯ ನಿರ್ವಹಣೆಯಿಲ್ಲದೆ ವಿಭಿನ್ನ ರೀತಿಯಲ್ಲಿ  ಕಾರ್ಯ ನಿರ್ವಹಿಸುತ್ತಿವೆ. ಒಂದು ಪ್ರಮಾದಕ್ಕೆ ಒಂದು ಕ್ಷೇತ್ರೀಯ ಕಚೇರಿ ನೌಕರನಿಗೆ ಛೀಮಾರಿ ಹಾಕಿ ಬಿಡಬಹುದು. ಆದರೆ ಇನ್ನೊಂದು ಕ್ಷೇತ್ರೀಯ ಕಚೇರಿ ನೌಕರನನ್ನು ಕೆಲಸದಿಂದ ವಜಾ ಮಾಡಬಹುದು. ಪಾಪದವರಿಗೆ, ಮುಗ್ಧ ತಪ್ಪು  ಮಾಡಿದವರಿಗೆ ದೊಡ್ಡ  ಶಿಕ್ಷೆ ನೀಡಿದರೆ ಹಗರಣದ ಭಾಗಿಗಳಿಗೆ, ಲಂಚಗುಳಿತನ ನಡೆಸಿದವರಿಗೆ ಯಾವ ಶಿಕ್ಷೆಯೂ ಇಲ್ಲದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಭಡ್ತಿಗಳನ್ನು ನೀಡುವ ಇಂದಿನ ವ್ಯವಸ್ಥೆ ಯಿಂದಾಗಿ ಎಲ್ಲರೂ ಹತಾಶರಾಗುತ್ತಾರೆ. ಇಂತಹ ನಿರ್ವ ಹಣೆ ಸಹಭಾಗಿತ್ವಕ್ಕೆ ಮಾರಕವಾಗಿದೆ. ಇದನ್ನು ತಪ್ಪಿಸಲು ಎಲ್ಲೆಡೆ ವರ್ಗಾವಣೆ, ಭಡ್ತಿ, ಶಿಸ್ತುಕ್ರಮ ಇವೆಲ್ಲವುಗಳಲ್ಲಿ ಏಕರೀತಿಯ ನಿರ್ವಹಣೆಯಿರಬೇಕು ಎಂಬುದು ಕೆ.ಕೆ. ಪೈ ಅವರ ಅಭಿಪ್ರಾಯವಾಗಿತ್ತು.

ಸಹಭಾಗಿತ್ವ  ಕ್ರಮಗಳು :

ಕೆ.ಕೆ. ಪೈ ಸಹಭಾಗಿತ್ವವನ್ನು ಬೆಳೆಸಲು ವಿವಿಧ ಕ್ರಮಗಳನ್ನು ಅಳವಡಿಸಿಕೊಂಡಿದ್ದರು. ಕೆ.ಆರ್‌. ಪ್ರಸಾದ್‌ ಅವರ ನೇತೃತ್ವದಲ್ಲಿ ಯೋಜನೆ ಮತ್ತು ಅಭಿವೃದ್ಧಿ ವಿಭಾಗದ ಮೂಲಕ ನೌಕರರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿತ್ತು. ಉಳಿತಾಯ ಖಾತೆ ಸ್ಪರ್ಧೆ, ಚಾಲ್ತಿ ಖಾತೆ ಸ್ಪರ್ಧೆ, ಅವಧಿ ಠೇವಣಿ ಸ್ಪರ್ಧೆ, ಸಾಲ ನೀಡಿಕೆ – ಹೀಗೆ ವಿವಿಧ ರೀತಿಯ ಸ್ಪರ್ಧೆಗಳನ್ನು  ನಡೆಸಲಾಗುತ್ತಿತ್ತು. ಈ ಸ್ಪರ್ಧೆಗಳಲ್ಲಿ  ಎಲ್ಲ  ನೌಕರರು ಭಾಗವಹಿಸುತ್ತಿದ್ದರು. ಸ್ಪರ್ಧೆಗಳಲ್ಲಿ ಆಕರ್ಷಕ ಬಹು ಮಾನಗಳಿರುತ್ತಿದ್ದುವು. ಮಾರುಕಟ್ಟೆ ವಿಂಗಡನೆಯ ತಣ್ತೀವನ್ನು ಬಳಸಿ ವಿವಿಧ ಮಾರುಕಟ್ಟೆ ವಿಭಾಗಗಳಿಗೆ ಸಪ್ತಾಹಗಳನ್ನು ಏರ್ಪಡಿಸಲಾಗುತ್ತಿತ್ತು. ಪ್ರತೀ ಶಾಖೆ ಈ ಸಪ್ತಾಹಗಳನ್ನು ನಡೆಸುತ್ತಿತ್ತು. ಅದರಂತೆ ವೈದ್ಯರ ಸಪ್ತಾಹ, ದಾದಿಯರ ಸಪ್ತಾಹ, ವ್ಯಾಪಾರಿಗಳ ಸಪ್ತಾಹ..ಇತ್ಯಾದಿ ಸಪ್ತಾಹಗಳ ಮೂಲಕ ವಿವಿಧ ವರ್ಗಗಳ ಕಾಣಿಕೆಯನ್ನು  ಬ್ಯಾಂಕ್‌ನ ಅಭಿವೃದ್ಧಿಗಾಗಿ ಪಡೆದುಕೊಳ್ಳಲು ಯೋಜಿತ ಯತ್ನ ನಡೆಸಲಾಗುತ್ತಿತ್ತು. ವಿವಿಧ ನೌಕರರ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿತ್ತು. “ಜಯಂಟ್‌’ ಪತ್ರಿಕೆಯನ್ನು ನೌಕರ ಸಹಭಾಗಿತ್ವದ ಅಭಿವೃದ್ಧಿಗಾಗಿ ಬಳಸಿಕೊಳ್ಳಲಾಗುತ್ತಿತ್ತು.

ಕೆ.ಕೆ. ಪೈ ನೌಕರರ ಸಹಭಾಗಿತ್ವವನ್ನು ಬೆಳೆಸಿ, ಬಳಸಿಕೊಂಡು ಎಲ್ಲ ಶಾಖೆಗಳಲ್ಲಿ ಉತ್ತಮ ಗ್ರಾಹಕ ಸೇವೆ ಒದಗಿಸುವಲ್ಲಿ ಮತ್ತು ಬ್ಯಾಂಕ್‌ ಅನ್ನು ಅಭಿವೃದ್ಧಿ ಪಥದಲ್ಲಿ  ಒಯ್ಯುವಲ್ಲಿ ಅದ್ಭುತ ಯಶಸ್ಸು  ಸಾಧಿಸಿದರು.

ಕೆ.ಕೆ. ಪೈ ಅಳವಡಿಸಿಕೊಂಡಿದ್ದ  ಸಹಭಾಗಿತ್ವ ತಂತ್ರ ಬ್ಯಾಂಕ್‌ ಗ್ರಾಹಕ ಸೇವಾ ಗುಣಮಟ್ಟ ಮತ್ತು ಅಭಿವೃದ್ಧಿ ದರದ ಕುಸಿತ ಆಗುತ್ತಿರುವ ಈ ದಿನಗಳಲ್ಲಿ ಒಂದು “ಉತ್ತಮ ಉದಾಹರಣ ಅಧ್ಯಯನ’ ಆಗಬಹುದು ಮತ್ತು ಅದರ ಪ್ರಯೋಜನ ಪಡೆದುಕೊಂಡು ಬ್ಯಾಂಕ್‌ಗಳು ಗ್ರಾಹಕ ಸೇವಾ ಸುಧಾರಣೆಗಾಗಿ ಮತ್ತು ಅಭಿವೃದ್ಧಿಗಾಗಿ ಸೂಕ್ತ ತಂತ್ರಗಳನ್ನು ಅಳವಡಿಸಿಕೊಳ್ಳಬಹುದು.

 

 ಡಾ| ಕೆ.ಕೆ. ಅಮ್ಮಣ್ಣಾಯ

ಟಾಪ್ ನ್ಯೂಸ್

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.