83 ತೇಜಸ್‌ ಯುದ್ಧ ವಿಮಾನ ಖರೀದಿಗೆ ಸಂಪುಟ ಅಸ್ತು


Team Udayavani, Jan 14, 2021, 7:20 AM IST

83 ತೇಜಸ್‌ ಯುದ್ಧ ವಿಮಾನ ಖರೀದಿಗೆ ಸಂಪುಟ ಅಸ್ತು

ಹೊಸದಿಲ್ಲಿ: ಭಾರತೀಯ ವಾಯುಪಡೆಗೆ ಹಾಗೂ ಪ್ರಧಾನಿ ಮೋದಿ ಅವರ “ಆತ್ಮನಿರ್ಭರತೆ’ಯ ಕರೆಗೆ ಅತಿದೊಡ್ಡ ಯಶಸ್ಸು ಎಂಬಂತೆ, ಬೆಂಗಳೂರಿನ  ಎಚ್‌ಎಎಲ್‌ (ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌)ನಿಂದ 83 ಲಘು ಯುದ್ಧ ವಿಮಾನ “ತೇಜಸ್‌’ ಅನ್ನು ಖರೀದಿಸಲು ಬುಧವಾರ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.

48 ಸಾವಿರ ಕೋಟಿ ರೂ. ವೆಚ್ಚದ ಡೀಲ್‌ ಇದಾಗಿದ್ದು, ಸ್ವದೇಶಿ ಸೇನಾ ವಿಮಾನ ವಲಯದಲ್ಲೇ ಇಷ್ಟು ದೊಡ್ಡ ಪ್ರಮಾಣದ ಖರೀದಿ ನಡೆಯುತ್ತಿರುವುದು ಇದೇ ಮೊದಲು ಎಂದು ಹೇಳಲಾಗಿದೆ.

ಸರಕಾರವು 73 ಎಲ್‌ಸಿಎ ತೇಜಸ್‌ ಎಂಕೆ-1ಎ ಯುದ್ಧ ವಿಮಾನ ಮತ್ತು 10 ಎಲ್‌ಸಿಎ ತೇಜಸ್‌ ಎಂಕೆ-1 ತರಬೇತಿ ವಿಮಾ ನಗಳನ್ನು ಖರೀದಿಸಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿ(ಸಿಸಿಎಸ್‌) ಈ ಖರೀದಿ ಪ್ರಸ್ತಾವ‌ಕ್ಕೆ ಒಪ್ಪಿಗೆಯ ಮುದ್ರೆಯೊತ್ತಿದೆ.

ವಾಯುಪಡೆಯ ಬೆನ್ನೆಲುಬು: ಮುಂದಿನ ದಿನಗಳಲ್ಲಿ ಎಲ್‌ಸಿಎ ತೇಜಸ್‌ ವಿಮಾನವು ವಾಯುಪಡೆಯ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸಲಿದೆ. ಈವರೆಗೆ ದೇಶದಲ್ಲಿ ಎಲ್ಲೂ ಬಳಸದಂತಹ ಹೊಸ ಹೊಸ ತಂತ್ರಜ್ಞಾನಗಳನ್ನು ಈ ವಿಮಾನದಲ್ಲಿ ಅಳವಡಿಸಲಾಗಿದೆ. ಇದು ಸಮರ ವಿಮಾನದಲ್ಲಿ ಮೊತ್ತಮೊದಲ ಆಖೀY (ಸ್ವದೇಶದಲ್ಲೇ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿ, ಉತ್ಪಾದಿಸಲಾದ) ಕೆಟಗರಿಯ ಖರೀದಿ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಶೇ.50ರಷ್ಟು ಸ್ವದೇಶಿ ಪರಿಕರಗಳಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣ ಶೇ.60ಕ್ಕೇರಲಿದೆ ಎಂದು ಸರಕಾರ ತಿಳಿಸಿದೆ. ಜತೆಗೆ, ಡ್ನೂಟಿ ಸ್ಟೇಶನ್‌ಗಳಲ್ಲೇ ಈ ವಿಮಾನಗಳ ರಿಪೇರಿ ಅಥವಾ ಸರ್ವೀಸಿಂಗ್‌ಗೆ ಅನುಕೂಲ ಕಲ್ಪಿಸುವಂತೆ ಮೂಲಸೌಕರ್ಯ ಅಭಿವೃದ್ಧಿಗೂ ಸಂಪುಟದ ಒಪ್ಪಿಗೆ ಸಿಕ್ಕಿದೆ.

ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯುವ ಏರೋ ಇಂಡಿಯಾ ಶೋ ವೇಳೆ ವಾಯುಪಡೆಯು ಎಚ್‌ಎಎಲ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ. 2026ರ ವೇಳೆಗೆ ಎಚ್‌ಎಎಲ್‌ ಈ ವಿಮಾನಗಳನ್ನು ಹಸ್ತಾಂತರ ಮಾಡುವ ನಿರೀಕ್ಷೆಯಿದೆ.

ಯುಎಇ ಜತೆಗೆ ವಿಜ್ಞಾನ- ತಂತ್ರಜ್ಞಾನ ಕ್ಷೇತ್ರದಲ್ಲಿ ಒಪ್ಪಂದ :

ಸಂಯುಕ್ತ ಅರಬ್‌ ಗಣರಾಜ್ಯ (ಯುಎಇ) ಜತೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರ ಕ್ಷೇತ್ರದಲ್ಲಿ ಸಹಭಾಗಿತ್ವ ಹೊಂದುವ ಬಗ್ಗೆ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಿದೆ. ಕೇಂದ್ರ ಭೂ ವಿಜ್ಞಾನ ಮತ್ತು ಯುಎಇನ ನ್ಯಾಶನಲ್‌ ಸೆಂಟರ್‌ ಆಫ್ ಮೆಟೊರಾಲಜಿ ಈ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಿವೆ. ಭೂಕಂಪ, ರೇಡಾರ್‌, ಉಪಗ್ರಹ, ಉಬ್ಬರವಿಳಿತ ಮಾಪನದಲ್ಲಿ ಎರಡೂ ದೇಶಗಳ ನಡುವೆ ಮಾಹಿತಿ ವಿನಿಮಯಕ್ಕೆ ಅನುಕೂಲವಾಗಲಿದೆ. ಇದರಿಂದಾಗಿ ಅರಬಿ ಸಮುದ್ರ ಮತ್ತು ಒಮಾನ್‌ ಕರಾವಳಿ ಪ್ರದೇಶಗಳಲ್ಲಿನ ಪರಿಸ್ಥಿತಿ ಮೇಲೆ ನಿಗಾ ಇರಿಸಿ ಅಧ್ಯಯನ ನಡೆಸಲು ಅನುಕೂಲವಾಗಲಿದೆ. ಸುನಾಮಿ ಮುನ್ನೆಚ್ಚರಿಕೆ ತಂತ್ರಜ್ಞಾನ ಹೊಂದಲೂ ಅನುಕೂಲಕರವಾಗಲಿದೆ. ದೇಶದ ದಕ್ಷಿಣ ಮತ್ತು ಪಶ್ಚಿಮ ಭೂಕಂಪ ಮಾಹನ ಕೇಂದ್ರಗಳಿಂದ ಸಿಗುವ ಮಾಹಿತಿಯನ್ನು ಯುಎಇ ಜತೆಗೆ ಹಂಚಿಕೊಳ್ಳಲು ಅವಕಾಶ ಮಾಡಿಕೊಡಲಿದೆ.

ಖನಿಜ ಕ್ಷೇತ್ರ ಸುಧಾರಣೆಗೆ ಅಸ್ತು: ಇದೇ ವೇಳೆ, ದೊಡ್ಡ ಮಟ್ಟದಲ್ಲಿ ಖನಿಜ ಕ್ಷೇತ್ರಗಳ ಸುಧಾರಣೆ ಪ್ರಸ್ತಾವಕ್ಕೂ ಕೇಂದ್ರ ಸಂಪುಟ ಅನುಮತಿ ನೀಡಿದೆ. ದೇಶದ ಖನಿಜ ಉತ್ಪಾದನೆಗೆ ಉತ್ತೇಜನ ನೀಡುವ ಮತ್ತು ಹೆಚ್ಚೆಚ್ಚು ಖನಿಜ ನಿಕ್ಷೇಪಗಳ ಹರಾಜಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ.

ಸೇನೆಗೆ ಆತ್ಮನಿರ್ಭರ ಅಸ್ಮಿ ಬಲ :

ಭಾರತೀಯ ಸೇನೆಗೆ ಸದ್ಯದಲ್ಲೇ ಸ್ವದೇಶಿ ನಿರ್ಮಿತ “ಅಸ್ಮಿ’ಯ ಬಲ ಸಿಗಲಿದೆ. ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ  (ಡಿಆರ್‌ಡಿಒ) ಮತ್ತು ಭಾರತೀಯ ಸೇನೆ ಜಂಟಿಯಾಗಿ ಅಸ್ಮಿ ಎಂಬ ಹೆಸರಿನ ಹೊಸ ಮಾದರಿಯ ಮಷಿನ್‌ ಪಿಸ್ತೂಲ್‌ ಅಭಿವೃದ್ದಿ ಪಡಿಸಿವೆ. ಶಸ್ತ್ರಾಸ್ತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ “ಮೇಕ್‌ ಇನ್‌ ಇಂಡಿಯಾ’ ಧ್ಯೇಯವಾಕ್ಯದಡಿ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಸದ್ಯ ರಕ್ಷಣ ಪಡೆಗಳು ಬಳಕೆ ಮಾಡುತ್ತಿರುವ 9 ಎಂ.ಎಂ. ಪಿಸ್ತೂಲುಗಳ ಬದಲಿಗೆ ಬಳಕೆಯಾಗಲಿದೆ.

ವೈಶಿಷ್ಟ್ಯವೇನು? :

ಇಸ್ರೇಲ್‌ ಸೇನೆ ಬಳಸುತ್ತಿರುವ “ಉಝಿ’ ಸರಣಿಯ ಗನ್‌ ಇದು

100 ಮೀಟರ್‌ ದೂರದ ಗುರಿ

ಛೇದಿಸುವ ಸಾಮರ್ಥ್ಯ

9 ಎಂ.ಎಂ. ಪಿಸ್ತೂಲ್‌ನ ಬದಲಿಗೆ ಅಸ್ಮಿ ಬಳಕೆ

ಅಭಿವೃದ್ಧಿಯ ಹಂತದಲ್ಲಿ(4 ತಿಂಗಳು) 300 ಸುತ್ತು ಗುಂಡು ಹಾರಿಸಿ ಪರೀಕ್ಷೆ

ಈ ಅತೀದೊಡ್ಡ ಸ್ವದೇಶಿ ರಕ್ಷಣ ಖರೀದಿ ಡೀಲ್‌ ಭಾರತದ ರಕ್ಷಣ ಉತ್ಪಾದನೆ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಗೇಮ್‌ ಚೇಂಜರ್‌ ಆಗಿರಲಿದೆ. ಜತೆಗೆ ಹೊಸ ಉದ್ಯೋಗಾವ ಕಾಶಗಳನ್ನೂ ಇದು ಸೃಷ್ಟಿಸಲಿದೆ.-ರಾಜನಾಥ್‌ ಸಿಂಗ್‌,  ರಕ್ಷಣ ಸಚಿವ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ

Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ

2-

ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.