3 ದಿನಗಳ ದಾಖಲೆಗೆ ಬ್ರೇಕ್
Team Udayavani, Jan 14, 2021, 6:21 AM IST
ಮುಂಬಯಿ : 50 ಸಾವಿರದ ಸಮೀಪಕ್ಕೆ ಬಂದಿದ್ದ ಮುಂಬಯಿ ಷೇರುಪೇಟೆ ಬುಧವಾರ ಕುಸಿತ ಕಂಡಿದ್ದು, ದಾಖಲೆಯ ನಾಗಾಲೋಟಕ್ಕೆ ಬ್ರೇಕ್ ಬಿದ್ದಂತಾಗಿದೆ.
ಸತತ 3 ದಿನಗಳ ಕಾಲ ಏರಿಕೆ ದಾಖಲಿಸುತ್ತಾ ಬಂದಿದ್ದ ಷೇರುಪೇಟೆಗೆ ಬುಧವಾರ ಆಘಾತವಾಗಿದೆ. ಹೂಡಿಕೆದಾರರು ಷೇರುಗಳ ಖರೀದಿಯಲ್ಲಿ ಆಸಕ್ತಿ ತೋರದ ಕಾರಣ, ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 24.79 ಅಂಕಗಳ ಕುಸಿತ ಕಂಡು, ದಿನಾಂತ್ಯಕ್ಕೆ 49,492.32ರಲ್ಲಿ ಕೊನೆಗೊಂಡಿತು. ನಿಫ್ಟಿ 1.40 ಅಂಕಗಳ ಅಲ್ಪ ಏರಿಕೆ ಕಂಡು, 14,564.85ರಲ್ಲಿ ವಹಿವಾಟು ಅಂತ್ಯಗೊಳಿಸಿತು.
ಬಿಎಸ್ಇ ಸೆನ್ಸೆಕ್ಸ್ ಪ್ಯಾಕ್ನಲ್ಲಿ ಎಂ ಆ್ಯಂಡ್ ಎಂ ಷೇರುಗಳು ಶೇ.6.24ರಷ್ಟು ಏರಿಕೆ ಕಂಡವು. ಎಸ್ಬಿಐ, ಐಟಿಸಿ, ಎನ್ಟಿಪಿಸಿ, ಭಾರ್ತಿ ಏರ್ಟೆಲ್ ಮತ್ತು ಆಕ್ಸಿಸ್ ಬ್ಯಾಂಕ್ ಕೂಡ ಲಾಭ ಗಳಿಸಿದವು. ಇದೇ ವೇಳೆ, ಬಜಾಜ್ ಫೈನಾನ್ಸ್, ಎಚ್ಡಿಎಫ್ಸಿ, ಬಜಾಜ್ ಫಿನ್ಸರ್ವ್, ಟೈಟಾನ್, ಸನ್ ಫಾರ್ಮಾ ಮತ್ತು ಡಾ| ರೆಡ್ಡೀಸ್ ನಷ್ಟ ಅನುಭವಿಸಿದವು.
ಚಿನ್ನದ ಬೆಲೆ ಇಳಿಕೆ: ಹೊಸದಿಲ್ಲಿ ಚಿನಿವಾರ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಬುಧವಾರ 108 ರೂ. ಇಳಿಕೆಯಾಗಿ, 10 ಗ್ರಾಂಗೆ 48,877 ರೂ. ಆಗಿದೆ. ಬೆಳ್ಳಿ ಬೆಲೆ 144 ರೂ. ಹೆಚ್ಚಳವಾಗಿ, ಕೆಜಿಗೆ 65,351 ರೂ. ಆಗಿದೆ. ಇನ್ನು, ಡಾಲರ್ ಎದುರು ರೂಪಾಯಿ ಮೌಲ್ಯ 10 ಪೈಸೆ ಹೆಚ್ಚಳವಾಗಿ, 73.15ಕ್ಕೇರಿದೆ.
ಇನ್ಫೋಸಿಸ್ಗೆ 5,197 ಕೋಟಿ ರೂ. ಲಾಭ :
ದೇಶದ ಎರಡನೇ ಅತೀದೊಡ್ಡ ಸಾಫ್ಟ್ವೇರ್ ರಫ್ತು ಸಂಸ್ಥೆಯಾದ ಇನ್ಫೋಸಿಸ್, 2020ರ ಡಿಸೆಂಬರ್ಗೆ ಅಂತ್ಯಗೊಂಡ ಮೂರನೇ ತ್ತೈಮಾಸಿಕದಲ್ಲಿ ಶೇ.16.6ರಷ್ಟು ಅಂದರೆ 5,197 ಕೋಟಿ ರೂ. ಲಾಭ ಗಳಿಸಿದೆ. ಅದಕ್ಕೂ ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪೆನಿಯು 4,457 ಕೋಟಿ ರೂ. ಲಾಭ ಗಳಿಸಿತ್ತು. ದಾಖಲೆ ಸಂಖ್ಯೆಯ ಒಪ್ಪಂದಗಳು ಹಾಗೂ ಖರೀದಿ ಪ್ರಕ್ರಿಯೆಯಿಂದಾಗಿ ಲಾಭದ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಡಿಸೆಂಬರ್ಗೆ ಅಂತ್ಯಗೊಂಡ ತ್ತೈಮಾಸಿಕದಲ್ಲಿ ಇನ್ಫಿಯ ಕ್ರೋಡೀಕೃತ ಆದಾಯ 25,927 ರೂ. ಅಂದರೆ ಶೇ.12.3ರಷ್ಟು ಹೆಚ್ಚಳವಾಗಿದೆ. ಹಿಂದಿನ ವರ್ಷ ಅದು 23,092 ರೂ. ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.