![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 14, 2021, 12:18 PM IST
ನವದೆಹಲಿ: ವಿಶ್ವದೆಲ್ಲೆಡೆ ಕೋವಿಡ್ ಸೋಂಕಿನ ಅಟ್ಟಹಾಸ ಆರಂಭಗೊಂಡ ನಂತರ ಜನರು ಏನಿಲ್ಲವೆಂದರೂ ಮಾಸ್ಕ್ ಅನ್ನು ಮಾತ್ರ ಬಳಸಬೇಕಾದ ಪರಿಸ್ಥಿತಿ ಒದಗಿತು. ಈ ನಡುವೆ ಈ ಮಾಸ್ಕ್ ಗಳಲ್ಲಿಯೂ ಹಲವು ಆವಿಷ್ಕಾರಗಳಾಗಿ ಚಿನ್ನದ ಮಾಸ್ಕ್ ಗಳನ್ನೂ ಕೂಡ ತಯಾರಿಸಲಾಯಿತು. ಹೀಗಿರುವಾಗ ಈ ಮಾಸ್ಕ್ ಗಳಲ್ಲಿ ಹಲವು ತಂತ್ರಜ್ಞಾನದ ಪ್ರಯೋಗಗಳೂ ನಡೆದಿದ್ದು, ಇದೀಗ ಮಾಸ್ಕ್ ಬ್ಲೂಟೂತ್ ಹೆಡ್ ಸೆಟ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಬಿನಾಟೋನ್ಸ್ ಕಂಪನಿಯು ಈ ಹೊಸ ವಿನ್ಯಾಸದ ಹೆಡ್ ಸೆಟ್ ಅನ್ನು ಅಭಿವೃದ್ಧಿಪಡಿಸಿದ್ದು, ಎನ್ 95 ಆವೃತ್ತಿಯ ಈ ಮಾಸ್ಕ್ ಹೆಡ್ ಸೆಟ್ ಗೆ ‘ಮಾಸ್ಕ್ ಪೋನ್’ ಎಂದು ಹೆಸರಿಟ್ಟಿದೆ. ಇದು ವಯರ್ ಲೆಸ್ ಹೆಡ್ ಸೆಟ್ ಆಗಿದ್ದು, ತನ್ನಲ್ಲಿ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ.
ಮಾಸ್ಕ್ ಪೋನ್ ನ ವಿಶೇಷತೆಗಳು
ಈ ಬ್ಲೂಟೂತ್ ಹೆಡ್ ಸೆಟ್ ಅನ್ನು ಐ ಪಿ ಎಕ್ಸ್ 5 ಫ್ಯಾಬ್ರಿಕ್ ಅನ್ನು ಬಳಸಿಕೊಂಡು ರೂಪಿಸಲಾಗಿದ್ದು, ಪಿ ಎಮ್ 2.5 / ಎಫ್ ಎಫ್ ಪಿ 2 ಫಿಲ್ಟರ್ ಅನ್ನು ಅಳವಡಿಸಲಾಗಿದೆ. ಈ ಹೆಡ್ ಸೆಟ್ ಅನ್ನು ನೀರಿನಲ್ಲಿ ತೊಳೆಯಬಹುದಾಗಿದೆ.
ಇದನ್ನೂ ಓದಿ:ಬೆಂಗಳೂರಿಗೆ ಬಂತು ಕೊವಾಕ್ಸಿನ್ ಕೋವಿಡ್ ಲಸಿಕೆ
ಬ್ಯಾಟರಿ ಸಾಮರ್ಥ್ಯ
ಎನ್ 95 ಆವೃತ್ತಿಯ ಈ ಮಾಸ್ಕ್ ಹೆಡ್ ಸೆಟ್ ಅತ್ಯದ್ಭುತವಾದ ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ ಸತತ 12 ಗಂಟೆಗಳ ಕಾಲ ಬಳಕೆ ಮಾಡಬಹುದಾಗಿದೆ.
ಈ ಮಾಸ್ಕ್ ಹೆಡ್ ಸೆಟ್ ನಲ್ಲಿ ಸಂಗೀತವನ್ನು ಕೇಳಲು ಹಾಗೂ ಕರೆಗಳನ್ನು ಸ್ವೀಕರಿಸಲು ಮಾಸ್ಕಿನ ಬಲಭಾಗದಲ್ಲಿ ಮೂರು ಬಟನ್ ಗಳನ್ನು ಅಳವಡಿಸಲಾಗಿದ್ದು, ಇದರ ಮೂಲಕ ಕರೆಗಳನ್ನು ಸ್ವಿಕರಿಸಲು, ಕಟ್ ಮಾಡಲು, ಪಾಸ್/ ಪ್ಲೇ ಮಾಡಬಹುದಾಗಿದೆ. ಗ್ರಾಹಕರ ಉಪಯೋಗಕ್ಕಾಗಿ S/M ಹಾಗೂ M/L ಗಾತ್ರಗಳಲ್ಲಿ ಲಭ್ಯವಿದೆ. ಈ ಮಾಸ್ಕ್ ಫೋನ್ IPX5 ನಿಂದ ಪ್ರಮಾಣಿಕರಿಸಲ್ಪಟ್ಟಿದೆ.
ಇಷ್ಟು ಮಾತ್ರವಲ್ಲದೆ ಈ ಮಾಸ್ಕ್ ಪೋನಿನ ಮೂಲಕ ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್ ಹಾಗೂ ಸಿರಿ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಬೆಲೆ: ಪ್ರಸ್ತುತ ಈ ಬ್ಲೂಟೂತ್ ಹೆಡ್ ಸೆಟ್ ನ ಬೆಲೆ 49 ಡಾಲರ್ ಗಳಾಗಿದ್ದು , ಭಾರತೀಯ ಕರೆನ್ಸಿಯಲ್ಲಿ 3,600 ರೂಗಳಾಗಿದೆ.
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.