ತೀರಾ ಹಳೆಯದಾದ ನೀರಿನ ಟ್ಯಾಂಕ್; ತಡೆಯಬೇಕಿದೆ ಸೋರಿಕೆ : ವ್ಯರ್ಥವಾಗುತ್ತಿದೆ ಜೀವ ಜಲ!
Team Udayavani, Jan 15, 2021, 3:10 AM IST
ಕಾರ್ಕಳ : ಪುರಸಭೆ ವ್ಯಾಪ್ತಿಯ ಬಂಡುಮಠದಲ್ಲಿ ಹತ್ತು ಲಕ್ಷ ಲೀಟರ್ ನೀರು ಹೊತ್ತು ನಿಂತ ಓವರ್ ಹೆಡ್ ಟ್ಯಾಂಕ್ ಶಿಥಿಲಗೊಂಡು ಸೋರುತ್ತಿದೆ. ಪರಿಣಾಮ ಅಮೂಲ್ಯ ಜೀವಜಲ ಪೋಲಾಗುತ್ತಿದೆ. ಟ್ಯಾಂಕ್ ದುರಸ್ತಿ ಪಡಿಸಿ ಸೋರಿಕೆಯನ್ನು ತಡೆಯಬೇಕಿದೆ.
ಕಾರ್ಕಳ ಪುರಸಭೆ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಒದಗಿಸಲು ಇಲ್ಲಿನ ಬಂಡಿಮಠದಲ್ಲಿ ನೀರಿನ ಟ್ಯಾಂಕ್ ನಿರ್ಮಿಸ ಲಾ ಗಿದ್ದು, 10 ಲಕ್ಷ ಸಂಗ್ರಹ ಸಾಮರ್ಥ್ಯ ಹೊಂದಿದೆ. ಇನ್ನೊಂದು 10 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ರಾಮಸಮುದ್ರದಲ್ಲಿದೆ. ಇವೆರಡು ಟ್ಯಾಂಕ್‌ಗಳು ಪುರಸಭೆ ವ್ಯಾಪ್ತಿಯ ಜನರಿಗೆ ನೀರು ಹರಿಸುವ ಮೂಲ ಟ್ಯಾಂಕ್‌ಗಳು.
ಬಂಡಿಮಠ ತೊಟ್ಟಿ ಸುಮಾರು ನಲವತ್ತಕ್ಕೂ ಅ ಧಿಕ ವರ್ಷಗಳ ಹಿಂದೆ ನಿರ್ಮಾಣ ಗೊಂಡ ಟ್ಯಾಂಕ್‌ಯಾಗಿದೆ. ತೀರಾ ಹಳೆಯದಾದ ನೀರಿನ ಟ್ಯಾಂಕ್ ಶಿಥಿಲಗೊಂಡಿದ್ದು ಅನೇಕ ಸಮಯಗಳಿಂದ ಹೀಗೆಯೇ ಸೋರಿಕೆಯಾಗುತ್ತಲೇ ಇದೆ ಎನ್ನುತ್ತಾರೆ ಆಸುಪಾಸಿನವರು.
ಟ್ಯಾಂಕ್‌ನಲ್ಲಿ ನೀರು ಸೋರಿಕೆಯಿಂದ ನೀರು ನಷ್ಟವಾಗುವುದಲ್ಲದೆ ಟ್ಯಾಂಕ್‌ನ ಪಿಲ್ಲರ್‌ಗಳಿಗೂ ಹಾನಿಯಾಗಿವೆ. ನಿರಂತರ ಸೋರಿಕೆಯಿಂದ ಟ್ಯಾಂಕ್‌ನ ಆಧಾರ ಸ್ತಂಭಗಳು ದಿನದಿಂದ ದಿನಕ್ಕೆ ಶಕ್ತಿ ಕಳೆದುಕೊಳ್ಳುತ್ತಿದೆ. ಬಿರುಕು ಬಿಡುತ್ತ ಬರುತ್ತಿವೆ.ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿರುವ ಕಾರ್ಕಳ ತಾಲೂಕಿಗೆ ಮುಂಡ್ಲಿ ಜಲಾಶಯದಿಂದ ನೀರು ಒದಗಿಸಲಾಗುತ್ತದೆ.
ಹಿಂದೆಯೂ ಪೋಲಾಗುತ್ತಿತ್ತು :
ಬಂಡಿಮಠ ಟ್ಯಾಂಕ್‌ಗೆ ಪಕ್ಕದಲ್ಲಿರುವ ಸಂಪ್‌ನಿಂದ ಪಂಪ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕ್ ತುಂಬಲು 7 ತಾಸು ಹಿಡಿಯುತ್ತದೆ. ಕಳೆದ ವರ್ಷ ಸಂಪ್‌ನಲ್ಲಿ ದೋಷ ಕಂಡು ಅಪಾರ ಪ್ರಮಾಣದಲ್ಲಿ ನೀರು ಸೋರಿಕೆಯಾಗಿ ಚರಂಡಿ ಸೇರಿದ ಘಟನೆ ನಡೆದಿತ್ತು ಎಂದು ಸ್ಥಳೀಯರು ಸ್ಮರಿಸಿಕೊಳ್ಳುತ್ತಾರೆ.
ರಾಮ ಸಮುದ್ರದಲ್ಲಿ ಕೂಡ ಧಾರಾಳ ನೀರಿದ್ದು ಬಂಡಿಮಠ ಮತ್ತು ರಾಮ ಸಮುದ್ರ ಈ ಎರಡು ಕಡೆ ಟ್ಯಾಂಕ್‌ಗಳಲ್ಲಿ ಇವೆರಡು ಕಡೆಗಳ ನೀರಿನ ಮೂಲಗಳಿಂದ ನೀರು ಹರಿಸಿ, ಸಂಗ್ರಹಿಸಿ ಪುರಸಭೆಯಾದ್ಯಂತ ವಾಸವಿರುವ ಜನರ ನೀರಿನ ದಾಹ ತೀರಿಸಲಾಗುತ್ತಿದೆ.
ಪುರಸಭೆ ವ್ಯಾಪ್ತಿಯಲ್ಲಿ ಅಪಾರ ಜನಸಂಖ್ಯೆಯಿದ್ದು, ದಿನದಿಂದ ದಿನಕ್ಕೆ ಜನಸಾಂದ್ರತೆ ಹೆಚ್ಚುತ್ತಿದೆ. ಜತೆಗೆ ನಗರ ಪ್ರವಾಸಿ ಕೇಂದ್ರವಾಗಿ ಗುರುತಿಸಿಕೊಂಡಿದ್ದು, ವ್ಯಾಪಾರ ವಹಿವಾಟುಗಳು ಹೆಚ್ಚಿವೆ. ಹೊಟೇಲ್ ವಿವಿಧ ಉದ್ಯಮಗಳು ಪುರಸಭೆ ವ್ಯಾಪ್ತಿಯಲ್ಲಿ ಹೆಚ್ಚುತ್ತಲಿದೆ. ಗೃಹ ಬಳಕೆಗೆ ಮಾತ್ರವಲ್ಲದೆ ಕಮರ್ಷಿಯಲ್ ಆಗಿಯೂ ನೀರು ಸಾಕಷ್ಟು ಬಳಕೆಗೆ ಅಗತ್ಯವಾಗಿದೆ. ನಳ್ಳಿ ನೀರು ಸರಬರಾಜುವಿನಿಂದ ಪುರಸಭೆಗೂ ಆದಾಯವಿದೆ. ಇಲ್ಲಿ ಕಾಲ ಕಾಲಕ್ಕೆ ಮಳೆ ಬರುತ್ತಿದ್ದರೂ ಕಡು ಬೇಸಗೆಯ ದಿನಗಳಲ್ಲಿ ನೀರಿನ ಮೂಲಗಳು ಬತ್ತಿ ಹೋಗಿ ನೀರಿನ ತಾಪತ್ರಯಗಳು ಎದುರಾಗುತ್ತವೆ. ಹೀಗಾಗಿ ತೊಟ್ಟು ಹನಿ ನೀರು ಪೋಲಾದರೂ ಇದರಿಂದ ನಷ್ಟವಾಗುತ್ತದೆ.
ಟ್ಯಾಂಕ್‌ನಲ್ಲಿ ನೀರಿನ ಸೋರಿಕೆ ಹೆಚ್ಚಿಸಿದರೆ ಮುಂದೆ ಇಡೀ ನಗರಕ್ಕೆ ಕುಡಿಯುವ ನೀರು ಸರಬರಾಜು ವ್ಯವಸ್ಥೆಯಲ್ಲಿ ವ್ಯತ್ಯಯವಾಗಲಿದೆ ಎನ್ನುವ ಆತಂಕ ಪುರಸಭೆ ಜನತೆಯಲ್ಲಿ ಶುರುವಾಗಿದೆ. ದೊಡ್ಡ ಮಟ್ಟಿನ ಸಮಸ್ಯೆ ಎದುರಾಗುವುದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳಬೇಕು ಎನ್ನುತ್ತಾರೆ ಸ್ಥಳಿಯರು.
ನೀರಿನ ಮಿತಬಳಕೆ, ನೀರಿನ ಸಂರಕ್ಷಣೆ ಜಾಗƒತಿ ಕಾರ್ಯಾಗಾರ ಎಂದೆಲ್ಲ ಕಾರ್ಯಕ್ರಮಗಳನ್ನು ನಡೆಸುತ್ತಿರುವುದರ ಜತೆಗೆ ಪೋಲಾಗುವ ನೀರನ್ನು ತಡೆಯುವ ಪ್ರಯತ್ನಗಳು ನೀರಾವರಿ ಹಾಗೂ ಸಂಬಂಧಿಸಿದ ಇಲಾಖೆ ಕಡೆಯಿಂದ ಆಗಬೇಕು ಎನ್ನುತ್ತಾರೆ ಜಲತಜ್ಞರು.
ನೀರು ಸೋರಿಕೆಗೆ ತೊಟ್ಟಿ ಶಿಥಿಲವಾಗಿರುವುದು ಕಾರಣ. ಹಳೆಯದಾದ ನೀರಿನ ಟ್ಯಾಂಕ್ ಅದು. ಅದರ ದುರಸ್ತಿಗೆ 10 ಲಕ್ಷ ರೂ. ಹಣದ ಆವಶ್ಯಕತೆ ಇದೆ. ದುರಸ್ತಿ ನಡೆಸುವ ಕುರಿತು ಗಮನ ಹರಿಸುತ್ತೇವೆ. -ರೇಖಾ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ ಕಾರ್ಕಳ
-ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.