ಮೂರು ತಲೆಗೂದಲುಗಳ ಮನುಷ್ಯ ಮತ್ತು ಸಂತೃಪ್ತಿ
Team Udayavani, Jan 15, 2021, 6:56 AM IST
ತಲೆಯಲ್ಲಿ ಮೂರೇ ಮೂರು ಕೂದಲು ಗಳಿದ್ದ ವ್ಯಕ್ತಿಯೊಬ್ಬ ಕ್ಷೌರದಂಗಡಿಗೆ ಬಂದಿ ದ್ದ. ತಲೆಗೂದಲು ಕೊಂಚ ಗಿಡ್ಡ ಮಾಡಿ, ಸುಗಂಧ ದ್ರವ್ಯ ಪೂಸಿ ಶಿರೋಮರ್ದನ ಒದಗಿಸುವಂತೆ ಕೇಳಿಕೊಂಡ.
ಕ್ಷೌರಿಕ ತನ್ನ ಕೆಲಸ ಮುಗಿಸಿ ಕೂದಲು ಬಾಚುವಾಗ ಮೂರರಲ್ಲಿ ಒಂದು ಕೂದಲು ಉದುರಿಹೋಯಿತು. ಕ್ಷೌರಿಕನಿಗೆ ನಾಚಿಕೆಯಾಯಿತು. ತನ್ನ ಸೇವೆಯಲ್ಲಿ ಇದೊಂದು ಕಪ್ಪುಚುಕ್ಕೆ ಎಂದು ಆತ ಆ ಗ್ರಾಹಕನ ಬಳಿ ಕ್ಷಮೆ ಯಾಚಿಸಿದ. “ಪರವಾಗಿಲ್ಲ. ನೀನು ಉಪ ಕಾರವನ್ನೇ ಮಾಡಿದಂತಾ ಗಿದೆ. ಈಗ ನಾನು ಬೈತಲೆ ತೆಗೆದು ಕೂದಲು ಬಾಚು ವುದಕ್ಕೆ ಅನುಕೂಲವಾಯಿತು’ ಎಂದ ಗ್ರಾಹಕ.
ಸರಿ ಎಂದುಕೊಂಡ ಕ್ಷೌರಿಕ ಒಂದು ಕೂದಲ ನ್ನು ಎಡಕ್ಕೂ ಇನ್ನೊಂದ ನ್ನು ಬಲಕ್ಕೂ ಬಾಚಿದ. ಅಷ್ಟರಲ್ಲಿ ಮತ್ತೂಂದು ತಲೆಗೂದಲು ಕೂಡ ಉದುರಿತು. ಕ್ಷೌರಿಕನಿಗೆ ಇನ್ನಷ್ಟು ನಾಚಿಕೆಯಾಯಿತು. ಆತ ಮತ್ತೂಮ್ಮೆ ಕ್ಷಮೆಯಾಚಿಸಿದ.
“ಏನೇನೂ ಪರವಾಗಿಲ್ಲ. ಇದೂ ಒಂದು ಬಗೆಯ ಉಪಕಾರವೇ. ಈಗ ನಾನು ಒಂದೇ ಒಂದು ಕೂದಲನ್ನು ಹಿಮ್ಮುಖವಾಗಿ ಬಾಚಿಕೊಂಡು ಆರಾಮ ವಾಗಿ ತಿರುಗಾಡಬಹುದಲ್ಲ’ ಎಂದ ಗ್ರಾಹಕ! ಆತನ ವರ್ತನೆಯನ್ನು ಕಂಡು ಕ್ಷೌರಿಕ ಒಂದು ಕ್ಷಣ ನಿಬ್ಬೆರಗಾದ. ಆದರೆ ಗ್ರಾಹಕ ಮಾತ್ರ ತನ್ನ ತಲೆಯಲ್ಲಿದ್ದ ಮೂರು ಕೂದಲುಗಳಲ್ಲಿ ಎರಡು ಉದುರಿ ಹೋದರೂ ಅದಕ್ಕಾಗಿ ತಲೆಕೆಡಿ ಸಿಕೊಳ್ಳಲಿಲ್ಲ. ಅಷ್ಟು ಮಾತ್ರವಲ್ಲದೆ ಒಂದಿನಿತೂ ಆಕ್ರೋಶಗೊಳ್ಳದೇ ಕ್ಷೌರಿಕ ನಿಗೆ ಸಾಂತ್ವನದ ಮಾತುಗಳನ್ನು ಹೇಳಿದ. ಆದರೆ ಕ್ಷೌರಿಕ ಮಾತ್ರ ಮುಖವನ್ನು ಇನ್ನೂ ನೋಡುತ್ತಲೇ ಇದ್ದ. ಆತನಿಗೆ ಇನ್ನೂ ಸಂಶಯ. ಗ್ರಾಹಕ ಏನೋ ನಾಟಕ ಶುರುವಿಟ್ಟಿಕೊಂಡಿದ್ದಾನೆ ಯೇ ಎಂದು. ಆದರೆ ಗ್ರಾಹಕ ಮಾತ್ರಕ್ಷೌರಿಕನಿಗೆ ಧನ್ಯವಾದ ಹೇಳಿ ನಿಶ್ಚಿಂತನಾಗಿ ಅಲ್ಲಿಂದ ಹೊರಟು ಹೋದ.
ಇರುವುದನ್ನು, ಎದುರಾದುದನ್ನು ಸಂಪೂರ್ಣವಾಗಿ ಸ್ವೀಕರಿಸುವುದು ಎಂದರೆ ಇದು. ಆದದ್ದೆಲ್ಲವೂ ಒಳ್ಳೆಯ ದಕ್ಕೇ ಎಂದುಕೊಳ್ಳುವ ಪರಿ. ನಾವು ಇಂತಹ ಸ್ಥಿತಿಯನ್ನು ತಲುಪಿದರೆ ಯಾರೂ, ಯಾವುದೂ ನಮ್ಮ ಮನಸ್ಸನ್ನು, ನಮ್ಮ ನೆಮ್ಮದಿಯನ್ನು ಹಾಳುಗೆಡವಲು ಸಾಧ್ಯವಿಲ್ಲ. ಯಾವಾಗಲೂ ಸಂತೃಪ್ತವಾ ಗಿರುವ ಈ ಸ್ಥಿತಿ ತಲುಪುವುದು ಒಂದು ಕಲೆ, ಒಂದು ಸಾಧನೆ. ಇಂಥವರು ಸಂಪೂರ್ಣವಾಗಿ, ಆತ್ಯಂತಿಕವಾಗಿ ಪಾರ ದರ್ಶಕವಾಗಿರು ತ್ತಾರೆ.
ಅಸಂತೃಪ್ತಿ ಎಂಬುದು ನಮ್ಮ ಕಣ್ಣು ಗಳು ಮತ್ತು ದೃಷ್ಟಿಗಳನ್ನು ಮಸುಕು ಮಾಡು ತ್ತದೆ. ಸಂತೃಪ್ತಿ ಯು ಕಣ್ಣು ಮತ್ತು ದೃಷ್ಟಿ ಗಳನ್ನು ಶುಭ್ರಗೊಳಿಸು ತ್ತದೆ. ಸಂತೃಪ್ತವಾಗಿದ್ದರೆ ವಸ್ತು -ವಿಚಾರಗಳನ್ನು ಹೇಗಿವೆಯೋ ಹಾಗೆ ಕಾಣಬಹುದು, ಸ್ವೀಕರಿಸಬಹುದು.
ಹಾಗೆಯೇ ಈ ಆತ್ಯಂತಿಕ ಸಂತೃಪ್ತಿ ಎಂಬು ದು ಒಂದು ಪವಾಡಸದೃಶ ಕೀಲಿ ಕೈ ಯೂ ಆಗಿದೆ. ಅದರ ಮೂಲಕ ನಮಗೆ ಸಿಟ್ಟು ಬಂದರೆ ಯಾವುದೇ ತೀರ್ಮಾ ನ, ಪೂರ್ವಾ ಗ್ರಹಗಳಿಲ್ಲದೆ ವೀಕ್ಷಿಸ ಬಹುದು. ಸಂತೋಷ, ಅಸೂಯೆ, ದುಃಖ ಮತ್ತಿತರ ಯಾವುದೇ ಭಾವನೆ ಗಳನ್ನು ಕೂಡ. ಹಾಗೆ ನೋಡಲು ಸಾಧ್ಯ ವಾದಾಗ ಆಯಾ ಭಾವನೆಗಳಿಂದ ಸದೂರ ವಾಗಿ ನಿಲ್ಲಲು ಸಾಧ್ಯವಾಗುತ್ತದೆ. ಅಂದರೆ, ಯಾವುದೇ ಭಾವನೆಗಳಿಗೆ ಅಂಟಿ ಕೊಳ್ಳದೆ ಇರುವ ಒಂದು ಸ್ಥಿತಿಯನ್ನು ತಲುಪುತ್ತೇವೆ. ಆಗ ನಮ್ಮನ್ನು ಅತ್ತಿಂದಿತ್ತ ಹೊಯ್ದಾಡಿಸುವ, ಅಲ್ಲೋಲಕ ಲ್ಲೋಲಗೊಳಿಸುವ, ಕ್ಷಣ ಕಾಲವೂ ಸುಮ್ಮನಿರಲು ಬಿಡದ ಎಲ್ಲ ವೂ ಮಾಯವಾಗಿ ಅಪೂರ್ವ ಶಾಂತಿಯೊಂದು ಮೈಗೂಡುತ್ತದೆ.
ಇದು ನಮ್ಮ ಭಾವನೆಗಳನ್ನು ನಮ್ಮ ಗೆಳೆಯರನ್ನಾಗಿ ಮಾಡಿಕೊಳ್ಳುವ ಮಾರ್ಗ. ಇದು ಯಾವುದನ್ನೂ ತಿರಸ್ಕರಿಸಿದ ಸ್ಥಿತಿಯಲ್ಲ; ನುಂಗಿ ಅರಗಿಸಿಕೊಂಡ ಸ್ಥಿತಿ. ಕೋಪ, ಅಸೂಯೆ, ದುಃಖ, ಸಂತೋಷ ಎಲ್ಲವೂ ನಮ್ಮೊಳಗೆ ಇರುತ್ತದೆ. ಆದರೆ ಅವುಗಳನ್ನು ಪಾರದರ್ಶಕವಾಗಿ ನೋ ಡಲು ನಮಗೆ ಸಾಧ್ಯವಾಗುತ್ತದೆ. ಈ ಸ್ಥಿತಿ ಅತ್ಯುತ್ಕೃಷ್ಟ ಚೈತನದ ಚಿಲುಮೆ ಯೊಂದು ನಮ್ಮೊಳಗೆ ಉದಯಿಸಲು ಕಾರಣ ವಾಗುತ್ತದೆ. ಹೊಗೆಯೇ ಇಲ್ಲದ ಉಜ್ವಲವಾದ ಅಗ್ನಿಯೊಂದು ನಮ್ಮೊಳಗೆ ಸದಾ ಉರಿಯುತ್ತಿರುವ ಸ್ಥಿತಿಯಿದು.
(ಸಾರ ಸಂಗ್ರಹ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.