ಎಚ್1ಬಿ ವೀಸಾ ಉದ್ಯೋಗಿಗಳಿಗೆ ಟ್ರಂಪ್ ಆಘಾತ!
Team Udayavani, Jan 15, 2021, 7:15 AM IST
ವಾಷಿಂಗ್ಟನ್: ಅಮೆರಿಕದ ಉದ್ಯೋಗಿಗಳ ರಕ್ಷಣೆಯ ನೆಪದಲ್ಲಿ ಎಚ್1ಬಿ ವೀಸಾ ಮೇಲೆ ನಿರ್ಬಂಧ ಹೇರಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಅಧಿಕಾರದಿಂದ ಕೆಳಕ್ಕಿಳಿಯುವ ಮುನ್ನ ಮತ್ತೂಂದು ಆಘಾತ ನೀಡಿದ್ದಾರೆ. ಎಚ್1-ಬಿ ವೀಸಾ ಅಡಿಯಲ್ಲಿ ಅಮೆರಿಕನ್ ಕಂಪೆನಿಗಳು ಭಾರತ, ಚೀನ ಹಾಗೂ ಇತರೆ ರಾಷ್ಟ್ರಗಳಿಂದ ಸಾವಿರಾರು ಸಂಖ್ಯೆಯಲ್ಲಿ ತಾತ್ಕಾಲಿಕವಾಗಿ ಉದ್ಯೋಗಿಗಳನ್ನು ಕರೆಸಿಕೊಳ್ಳುತ್ತವೆ. ಈಗ ಟ್ರಂಪ್ ಆಡಳಿತ, ಈ ಕಂಪೆನಿಗಳು ವಿದೇಶದ ಕೆಲಸಗಾರರಿಗೆ ನೀಡುವ ಕನಿಷ್ಠ ವೇತನ ಮಿತಿಯಲ್ಲಿ ಭಾರೀ ಏರಿಕೆ ಮಾಡುವಂಥ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ.
ಒಂದು ವೇಳೆ ಕನಿಷ್ಠ ವೇತನ ಮಿತಿಯಲ್ಲಿ ವಿಪರೀತ ಏರಿಕೆಯಾದರೆ, ಆಗ ಈ ಕಂಪೆನಿಗಳು ವಿದೇಶಿ ನಾಗರಿಕರಿಗೆ ಉದ್ಯೋಗ ನೀಡಲು ಹಿಂದೇಟು ಹಾಕುವ ಸಾಧ್ಯತೆ ಇರುತ್ತದೆ ಎಂಬುದು ಈ ನಡೆಯ ಹಿಂದಿನ ತಂತ್ರ ಎನ್ನಲಾಗುತ್ತಿದೆ. ಆದರೆ ಜನವರಿ 20ರಂದು ಅಧಿಕಾರ ಸ್ವೀಕರಿಸಲಿರುವ ಜೋ ಬೈಡೆನ್, ಟ್ರಂಪ್ ಅವರ ವಲಸಿಗ ನೀತಿಗಳು ಕ್ರೂರವಾಗಿದ್ದು, ತಾವು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಎಚ್-1ಬಿ ವೀಸಾ ಮೇಲಿನ ರದ್ದತಿಯನ್ನು ಹಿಂಪಡೆಯುವುದಾಗಿ ಈ ಹಿಂದೆಯೇ ಭರವಸೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Suri Loves Sandhya: ಟೀಸರ್‌ನಲ್ಲಿ ಸೂರಿ ಲವ್ ಸ್ಟೋರಿ
Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು
Karkala: ಪಶು ಗಣತಿಯಲ್ಲಿ ಬೆಕ್ಕುಗಳ ಅವಗಣನೆ !
Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.