ಜ. 16-23: ಪರ್ಯಾಯ ಪಂಚಶತಮಾನೋತ್ಸವ
Team Udayavani, Jan 15, 2021, 2:01 AM IST
ಉಡುಪಿ: ಶ್ರೀ ವಾದಿರಾಜ ಶ್ರೀಪಾದರಿಂದ ಪ್ರಾರಂಭಿಸಲ್ಪಟ್ಟ ದ್ವೆ„ವಾರ್ಷಿಕ ಪರ್ಯಾಯದ ಪಂಚಶತಮಾನೋತ್ಸವ ಕಾರ್ಯ ಕ್ರಮವು (500ನೇ ವರ್ಷ ಆರಂಭ) ಜ. 16ರಿಂದ 23ರ ತನಕ ನಡೆಯಲಿದೆ ಎಂದು ಪರ್ಯಾಯ ಅದಮಾರು ಮಠದ ದಿವಾನ್ ಲಕ್ಷ್ಮೀನಾರಾಯಣ ಮುಚ್ಚಿಂತಾಯ ಮತ್ತು ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದರು.
ಪ್ರತಿದಿನ ಉಪನ್ಯಾಸ ಗೋಷ್ಠಿಗಳು, ಅಷ್ಟಮಠಗಳ ಪರ್ಯಾಯಾ ವಧಿಯಲ್ಲಿ ನಡೆದ ಸಾಧನೆಗಳನ್ನು ನೆನಪಿಸುವ ಉಪನ್ಯಾಸಗಳು, ಗಣ್ಯರ ಉಪಸ್ಥಿತಿ, ಸಾಧಕರಿಗೆ ಸಮ್ಮಾನ ನಡೆಯಲಿವೆ.
ಭಕ್ತರಿಗೆ ಶ್ರೀಕೃಷ್ಣ ದೇವರ ದರ್ಶನಕ್ಕೆ ಅನುಕೂಲವಾಗುವಂತೆ ನೂತನ ವಾಗಿ ನಿರ್ಮಿಸಿದ ಮಾರ್ಗ ವನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಜ. 18ರಂದು ಉದ್ಘಾಟಿಸಲಿದ್ದಾರೆ.
ಗ್ರಾಮೀಣ ಉತ್ಪನ್ನಗಳ ಮೇಳ ಪ್ರದರ್ಶನ :
ಗ್ರಾಮೀಣ ಶ್ರಮಿಕ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಎಂಟು ದಿನಗಳ ಕಾಲ ರಾಷ್ಟ್ರಮಟ್ಟದ ಗ್ರಾಮೀಣ ಉತ್ಪನ್ನಗಳ ಮೇಳ, ಪ್ರದರ್ಶನ ಮತ್ತು ಮಾರಾಟವನ್ನು ರಾಜಾಂಗಣದ ಮಹಡಿಯಲ್ಲಿ ಆಯೋಜಿಸಲಾಗಿದೆ. ವಿವಿಧ ರಾಜ್ಯಗಳ ಗ್ರಾಮೀಣ ಉತ್ಪನ್ನಗಳ ಸಹಿತ ಕಲಾ ಪ್ರಕಾರಗಳ ಪ್ರಾತ್ಯಕ್ಷಿಕೆ ನಡೆಯಲಿದೆ. ಉದ್ಘಾಟನ ಸಮಾರಂಭದಲ್ಲಿ ಇದರ ಮತ್ತು ತುಳುನಾಡ ಪಾರಂಪರಿಕ ಪರಿಕರಗಳ ಪ್ರದರ್ಶನದ ಉದ್ಘಾಟನೆ ನಡೆಯಲಿದೆ.
ಸ್ಥಳೀಯ ಶ್ರಮಜೀವಿಗಳು ತಯಾರಿಸಿದ/ಬೆಳೆಸಿದ ವಸ್ತುಗಳ ಮಾರಾಟದ ಮಳಿಗೆಯನ್ನು ಆರಂಭಿಸಿ, ಮಧ್ಯವರ್ತಿಗಳಿಲ್ಲದೆ ಸ್ಥಳೀಯರಿಗೆ ಪೂರ್ಣ ಲಾಭ ಗಳಿಸುವಂತೆ ಮಾಡುವ ಯೋಜನೆಯು ಕಾರ್ಯರೂಪಕ್ಕೆ ಬರಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ :
ಎಂಟು ದಿನಗಳ ಉತ್ಸವದ ವೇಳೆ ಪ್ರತಿ ದಿನ ಸಂಜೆ 7ಕ್ಕೆ ತುಳು ಸಂಸ್ಕೃತಿ ಸಂಭ್ರಮ, ತಾಳಮದ್ದಳೆ, ಭಕ್ತಿ ಸಂಗೀತ, ವೇಣು ವಾದನ, ಬಡಗುತಿಟ್ಟು ಯಕ್ಷಗಾನ, ಶಾಸ್ತ್ರೀಯ, ಹಿಂದೂಸ್ಥಾನಿ ಸಂಗೀತ, ವೀಣಾ ವಾದನ ಮುಂತಾದ ಕಾರ್ಯಕ್ರಮಗಳು ಜರಗಲಿವೆ.
ಕೃತಿಗಳ ಮೆರವಣಿಗೆ :
ಜ. 18ರ ಅಪರಾಹ್ನ 3.30ಕ್ಕೆ ಜೋಡುಕಟ್ಟೆಯಿಂದ ಮೇನೆಯಲ್ಲಿ ಶ್ರೀಮನ್ಮಧ್ವಾಚಾರ್ಯ ಹಾಗೂ ಶ್ರೀವಾದಿರಾಜ ಶ್ರೀಪಾದರ ಕೃತಿಗಳೊಂದಿಗೆ ರಥಬೀದಿವರೆಗೆ ಮೆರವಣಿಗೆ ನಡೆಯಲಿದೆ. ಜ. 22ರಂದು ತುಳುಗೋಷ್ಠಿ ಹಾಗೂ ತುಳುಲಿಪಿ ಕಲಿಕೆಯ ಉದ್ಘಾಟನೆ ನಡೆಯಲಿದೆ.
ಶ್ರೀಕೃಷ್ಣ ಸೇವಾ ಬಳಗದ ವೈ.ಎನ್.ರಾಮಚಂದ್ರ ರಾವ್, ಪ್ರದೀಪ ರಾವ್, ರೋಹಿತ್ ತಂತ್ರಿ, ಸಂತೋಷಕುಮಾರ ಉದ್ಯಾವರ, ಮಾಧವ ಉಪಾ ಧ್ಯಾಯ, ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.