ಮನಸೆಳೆವ ರಂಗಭಾರತಿ ಉದ್ಯಾನವನ
Team Udayavani, Jan 15, 2021, 3:20 PM IST
ಹೂವಿನಹಡಗಲಿ: “ಮನೆಗೊಂದು ಮರ, ಊರಿಗೊಂದು ವನ’ ಎನ್ನುವ ನಾಣ್ಣುಡಿಯಂತೆ ಪಟ್ಟಣಕ್ಕೊಂದು ಉದ್ಯಾನ ವನ ಇದ್ದರೆ ಜನರ ಆರೋಗ್ಯಕ್ಕೆ ಸಹಕಾರಿ ಆಗುತ್ತದೆ. ಈ ನಿಟ್ಟಿನಲ್ಲಿ ಹಡಗಲಿಯ ರಂಗಭಾರತಿ ಉದ್ಯಾನವನ ದಣಿದ ದೇಹ ಮತ್ತು ಮನಸ್ಸಿಗೆ ಉಲ್ಲಾಸ ನೀಡುತ್ತಿದೆ.
ಹಡಗಲಿ ಪುರಸಭೆಯಿಂದ ಈಚೆಗೆ ಹರಪನಹಳ್ಳಿ ರಸ್ತೆಯಲ್ಲಿರುವ ರಂಗಭಾರತಿ ಉದ್ಯಾನವನವನ್ನು ಅಭಿವೃದ್ಧಿ ಪಡಿಸಿದ್ದು, ಇದಕ್ಕಾಗಿ ಸರ್ಕಾರದ ಸುಮಾರು 47 ಲಕ್ಷ ರೂ.ಗಳನ್ನು ವ್ಯಯಿಸಲಾಗಿದೆ. ಈ ಮುಂಚಿತವಾಗಿ ರಂಗಭಾರತಿ ಉದ್ಯಾನವನ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದವರು ಪಾರ್ಕ್ ನಿರ್ವಹಣೆ ಮಾಡುತ್ತಿದ್ದು, 2008ರಲ್ಲಿ ಇದನ್ನು ಪುರಸಭೆಗೆ ಹಸ್ತಾಂತರಿಸಿದರು. ಮೊದಲು ಅಂದಾಜು 2 ಲಕ್ಷ ರೂ.ಗಳ ವೆಚ್ಚದಲ್ಲಿ ಪಾರ್ಕ್ ಅನ್ನು ಅಭಿವೃದ್ಧಿಪಡಿಸಿದರೂ ಜನತೆಗೆ ಸಮರ್ಪಕವಾಗಿ ಬಳಕೆ ಆಗಿರಲಿಲ್ಲ. ಈಚೆಗೆ 14ನೇ ಹಣಕಾಸು ಹಾಗೂ ಪುರಸಭೆ ನಿಧಿ ಯಿಂದ ಒಟ್ಟು 47 ಲಕ್ಷ ರೂ.ಗಳಲ್ಲಿ ಪಾರ್ಕ್ ಅನ್ನು ಪುನಶ್ಚೇತನ ಗೊಳಿಸಿರುವುದರಿಂದ ಸಾರ್ವಜನಿಕರಿಗೆ ಇದರ ಸದುಪಯೋಗವಾಗಿದೆ.
ವಿಸ್ತ್ರೀರ್ಣ: ಹರಪನಹಳ್ಳಿ ರಸ್ತೆಯ ಜಿಪಂ ಉಪ ವಿಭಾಗದ ಕಚೇರಿ ಮುಂದಿನ 100/25 ವಿಸ್ತ್ರರ್ಣ ಜಗದಲ್ಲಿ ನಿರ್ಮಾಣಗೊಂಡಿರುವ ಈ ರಂಗಭಾರತಿ ಪಾರ್ಕ್ ಮಕ್ಕಳಿಗೆ ಆಟಿಕೆ ಸಾಮಾನುಗಳು,
ಮನರಂಜನೆಗಾಗಿ ಕಾರಂಜಿ, ಯುವಕರಿಗೆ ವಾಕಿಂಗ್ ಟ್ರ್ಯಾಕ್, ಯೋಗ ಕಟ್ಟೆ, ದೈಹಿಕ ಸಾಮರ್ಥ ಹೆಚ್ಚಿಸುವ ಸಲಕರಣೆಗಳು ಹೀಗೆ ಪಾರ್ಕ್‌ನಲ್ಲಿ ಸಾರ್ವಜನಿಕರ ಉತ್ತಮ ಆರೋಗ್ಯ ಗಮನದಲ್ಲಿಟ್ಟುಕೊಂಡು ಅನುಕೂಲತೆ ಕಲ್ಪಿಸಲಾಗಿದೆ.
ಇದನ್ನೂ ಓದಿ:ಯತ್ನಾಳ ಬಿಜೆಪಿ ಸೇರ್ಪಡೆ ಬೇಡ ಎಂದರೂ ಯಡಿಯೂರಪ್ಪ ಕೇಳಲಿಲ್ಲ: ಜಿಗಜಿಣಗಿ
ಸಮರ್ಪಕ ನಿರ್ವಹಣೆ: ಸಾರ್ವಜನಿಕ ಹಣದಲ್ಲಿ ನಿರ್ಮಾಣಗೊಂಡಿರುವ ಈ ರಂಗಭಾರತಿ ಪಾರ್ಕ್‌ಅನ್ನು ಉತ್ತಮ ನಿರ್ವಹಣೆ ಮಾಡುವ ಜವಾಬ್ದಾರಿ ಪುರಸಭೆ ಮೇಲಿದ್ದು, ಇದಕ್ಕಾಗಿ ಸಮಯ ನಿಗದಿ ಹಾಗೂ ಪಾರ್ಕಿನಲ್ಲಿರುವ ಯಾವುದೇ ಸಲಕರಣೆ ಹಾಳಾಗದಂತೆಹೆಚ್ಚಿನ ಮುತುವರ್ಜಿ ವಹಿಸುವುದು ಸಹ ಅಷ್ಟೇ ಮುಖ್ಯವಾಗಿದೆ. ಪಟ್ಟಣಕ್ಕೆ ಹತ್ತಿರವಿರುವುದರಿಂದ ಜನದಟ್ಟಣೆ ಹೆಚ್ಚಾಗುತ್ತಿದ್ದು, ಇದನ್ನು ಸಮರ್ಪಕವಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕಾಗಿದೆ. ಮೊದಲಗಟ್ಟೆ ರಸ್ತೆಯಲ್ಲಿರುವ ಪಾರ್ಕಿನಂತೆ, ಸೋಗಿ ಹಾಗೂ ತಿಪ್ಪಾಪುರ ರಸ್ತೆಯಲ್ಲಿ ಪಾರ್ಕ್ ನಿರ್ಮಾಣ ಮಾಡಿದಲ್ಲಿ ಆ ಭಾಗದ ಜನತೆಗೂ ಅನುಕೂಲವಾಗಲಿದೆ ಎನ್ನುವುದು ಸಾರ್ವಜನಿಕ ಅಭಿಪ್ರಾಯ.
ವಿಶ್ವನಾಥ ಹಳ್ಳಿಗುಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.