ಬ್ಲ್ಯಾಕ್‌ಮೇಲ್ ಆರೋಪ; ತನಿಖೆಯಾಗಲಿ
Team Udayavani, Jan 15, 2021, 3:37 PM IST
ಚಿಕ್ಕಮಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬ್ಲ್ಯಾಕ್‌ಮೇಲ್ ಮಾಡಿ ಮೂರು ಜನ ಸಚಿವ ಸಂಪುಟ ಸೇರಿದ್ದಾರೆಂದು ದೊಡ್ಡ ಆರೋಪ ಕೇಳಿ ಬಂದಿದ್ದು ಸೂಕ್ತ ತನಿಖೆಯಾಗಬೇಕೆಂದು ಮಾಜಿ ಸಭಾಪತಿ, ಕೆಪಿಸಿಸಿ ಮಾಧ್ಯಮ ಕಾರ್ಯದರ್ಶಿ ಬಿ.ಎಲ್. ಶಂಕರ್ ಆಗ್ರಹಿಸಿದರು.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಎಂ. ಅವರನ್ನು ಬ್ಲ್ಯಾಕ್ ಮೇಲ್ ಮಾಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದು ಸ್ವಪಕ್ಷೀಯರು, ಹಿರಿಯ ಮುಖಂಡರೇ ಆರೋಪ ಮಾಡಿದ್ದಾರೆ. ಅನೇಕರು ಇದು ಬೆಂಗಳೂರು ಮತ್ತು ಬೆಳಗಾವಿಗೆ ಸಂಬಂಧಪಟ್ಟ ಮಂತ್ರಿ ಮಂಡಲವೇ ಹೊರತು ರಾಜ್ಯಕ್ಕೆ ಸಂಬಂಧಪಟ್ಟ ಮಂತ್ರಿಮಂಡಲವಲ್ಲ ಎಂದು ಆರೋಪ ಮಾಡಿದ್ದಾರೆ ಎಂದರು.
ಮಂತ್ರಿ ಮಂಡಲ ವಿಸ್ತರಣೆಯಲ್ಲಿ ಪ್ರಾದೇಶಿಕ ನ್ಯಾಯ ಮತ್ತು ಸಾಮಾಜಿಕ ನ್ಯಾಯ ದೊರಕಿಲ್ಲ, ಸರ್ಕಾರ ಮುಖ್ಯಸ್ಥನನ್ನು ಬ್ಲ್ಯಾಕ್‌ಮೇಲ್ ಮಾಡಿ ಮಂತ್ರಿಗಿರಿ ಗಿಟ್ಟಿಸಿಕೊಳ್ಳುತ್ತಾರೆಂದರೆ ಇಂತಹ ದುಸ್ಥಿತಿ ನಮ್ಮ ರಾಜ್ಯಕ್ಕೆ ಯಾವಾಗಲೂ ಬಂದಿರಲಿಲ್ಲ. ಈ ರಾಜ್ಯದ ದುರಂತ ಎಂದರು.
ಬಿಜೆಪಿ ಹಿರಿಯ ಮುಖಂಡರಾದ ಬಸವರಾಜ್ ಯತ್ನಾಳ್ ಹಾಗೂ ಎಚ್. ವಿಶ್ವನಾಥ್ ಗಂಭೀರ ಆರೋಪ ಮಾಡಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ರೇಣುಕಾಚಾರ್ಯ ಅವರು ದೆಹಲಿಮುಖಂಡರಿಗೆ ದೂರು ನೀಡುವುದಾಗಿ ಹೇಳಿದ್ದಾರೆ. ಇದನ್ನೆಲ್ಲ ಗಮನಿಸಿದಾಗ ಆಧಾರವಿಲ್ಲದೆ ಆರೋಪ ಮಾಡಿಲ್ಲವೆಂದು ತಿಳಿಯುತ್ತದೆ. ಇದು ಬಿಜೆಪಿಯ ಆಂತರಿಕ ವಿಚಾರವಾಗಿ ಉಳಿದಿಲ್ಲ, ಸಾರ್ವಜನಿಕ ವಿಷಯವಾಗಿದೆ. ಯಾರು ಯಾರನ್ನು ಬ್ಲ್ಯಾಕ್‌ಮೇಲ್ ಮಾಡಿದರು.
ಯಾವ ಕಾರಣಕ್ಕೆ ಬ್ಲ್ಯಾಕ್‌ಮೇಲ್ ಮಾಡಿದರು. ಬ್ಲ್ಯಾಕ್‌ಮೇಲ್ ಮಾಡಲು ಇದ್ದ ವಿಷಯ ಹಣಕಾಸಿನ ವ್ಯವಹಾರ, ಭ್ರಷ್ಟಾಚಾರ ಪ್ರಕರಣ, ಯಾವುದಾದರೂ ನಾಯಕರ ಖಾಸಗಿ ಬದುಕಿಗೆ ಸಂಬಂಧಿಸಿದ್ದೇ ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು. ಈ ಹಿಂದೆ ಸಂತೋಷ ಆಸ್ಪತ್ರೆ ಸೇರಿದ ಸಂದರ್ಭದಲ್ಲೂ ಸಿಡಿ ವಿಚಾರ ಹೊರ ಬಂದಿತ್ತು. ಆ ಸಂದರ್ಭದಲ್ಲೂ ಸಿ.ಎಂ. ಟಾರ್ಗೆಟ್ ಆಗಿದ್ದರು. ರಾಜೀ ಮುಖಾಂತರ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆದಿತ್ತು.
ಇದನ್ನೂ ಓದಿ:ಐತಿಹಾಸಿಕ ಹಂಪಿ ಕ್ಷೇತ್ರಕ್ಕೆ ಹರಿದು ಬಂತು ಜನಸಮೂಹ
ಸಂತೋಷ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಾಗಿದ್ದು, ಪ್ರಕರಣ ಏನಾಯ್ತು ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕೆಂದು ತಿಳಿಸಿದರು. ಎಚ್. ವಿಶ್ವನಾಥ್, ಬಸವರಾಜ್ ಯತ್ನಾಳ್ ಪ್ರಭಾವಿಗಳು, ಹಣವಂತರು, ಜಾತಿ ಇದ್ದವರಿಗೆ ಮಂತ್ರಿಸ್ಥಾನ ಸಿಕ್ಕಿದೆ ಎಂದು ಗಂಭೀರ ಆರೋಪ ಮಾಡಿದ್ದು, ಅದರಲ್ಲೂ ಯತ್ನಾಳ್ ಅವರು 1 ತಿಂಗಳ ಹಿಂದೆ ನೆಲಮಂಗಳ ಗೆಸ್ಟ್‌ಗೌಸ್‌ನಲ್ಲಿ ಈ ಸಚಿವ ಸಂಪುಟ ಸೇರಿರುವ 3 ಜನರು ಸೇರಿ ಸಭೆ ಮಾಡಿ ಸಿಎಂ ಅವರನ್ನು ಪದಚ್ಯುತಿ ಮಾಡುವ ಬಗ್ಗೆ ಚರ್ಚೆ ನಡೆದಿದ್ದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದು ಈ ಎಲ್ಲಾ ಹೇಳಿಕೆ ಆಧಾರದ ಮೇಲೆ ಪೊಲೀಸ್ ಇಲಾಖೆ ಸುಮೋಟೋವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದರು. ಎಚ್. ವಿಶ್ವನಾಥ್ ಮತ್ತು ಯತ್ನಾಳ್ ಅವರು ಹಿರಿಯ ನಾಯಕರು. ಪಕ್ಷದ ಆಂತರಿಕ ವಲಯದಲ್ಲಿ ಇರುವಂತವರು. ಅವರು
ಸಾಕ್ಷ್ಯವಿಲ್ಲದೇ ಮಾತನಾಡುವುದಲ್ಲಿ ಹೈಕಮಾಂಡ್ ಅಥವಾ ಮುಖ್ಯಮಂತ್ರಿಗಳನ್ನು ಬ್ಲಾÂಕ್‌ವೆುàಲ್ ಮಾಡಿರಬಹುದು. ಇದೆಲ್ಲ ವಿಚಾರಗಳ ಬಗ್ಗೆ ಕೂಲಂಕಶ ತನಿಖೆಯಿಂದ ಸತ್ಯ ಹೊರಬರಬೇಕು ಎಂದರು.
ಬಿಜೆಪಿ ಶಿಸ್ತಿನ ಪಕ್ಷ ಎಂದು ಅವರ ಬೆನ್ನು ಅವರೇ ತಟ್ಟಿಕೊಳ್ಳುತ್ತಾರೆ. ಅಂತಹ ಪಕ್ಷದಲ್ಲಿ ನೂತನ ಸಚಿವರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಬ್ಲ್ಯಾಕ್‌ಮೇಲ್ ಗಂಭೀರ ಆರೋಪ ಕೇಳಿ ಬರುತ್ತಿದೆ. ಮಾಸ್ ಲೀಡರ್ ಒಬ್ಬರನ್ನು ಬ್ಲ್ಯಾಕ್‌ಮೇಲ್‌ಮಾಡಿದ್ದಾರೆಂದರೆ ಇದು ಅಪಾಯದ ಮುನ್ಸೂಚನೆ. ಬಿಜೆಪಿ ಪರ- ವಿರೋಧ ಬಣವಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಅಂಗಾರ ಅವರ ಪ್ರಾಮಾಣಿಕ ಸೇವೆಗೆ ಉತ್ತಮ ಸ್ಥಾನ ಸಂದಿದೆ.
ಬಿ.ಎಲ್. ಶಂಕರ್, ಮಾಜಿ ಸಭಾಪತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.