ತೋಟಗಾರಿಕೆ ಕಾಲೇಜಿಗೆ 49 ಎಕರೆ ಭೂಮಿ ಹಸ್ತಾಂತರ: ಎಂಎಲ್‌ಸಿ ಅರಳಿ
2008ರಲ್ಲಿ ಅಂದಿನ ಡಿಸಿ ಹರ್ಷಗುಪ್ತ ರೇಷ್ಮೆ ಇಲಾಖೆಯ ಜಮೀನು ತೋರಿಸಿದ್ದರು.
Team Udayavani, Jan 16, 2021, 3:33 PM IST
ಬೀದರ: ತಾಲೂಕಿನ ಕೋಳಾರ (ಕೆ) ಗ್ರಾಮದಲ್ಲಿರುವ ರೇಷ್ಮೆ ಇಲಾಖೆಯ ಸುಮಾರು 49.23 ಎಕರೆ ಜಮೀನನ್ನು ಹಳ್ಳದಕೇರಿ ತೋಟಗಾರಿಕೆ ಮಹಾವಿದ್ಯಾಲಯಕ್ಕೆ ಉಚಿತವಾಗಿ ಹಸ್ತಾಂತರಿಸಲು ಸರ್ಕಾರ ಆದೇಶಿಸಿದೆ ಎಂದು ಎಂಎಲ್‌ಸಿ ಅರವಿಂದಕುಮಾರ ಅರಳಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೀದರ ತೋಟಗಾರಿಕೆ ಕಾಲೇಜಿಗೆ ನಿಯಮದಂತೆ ಮೂಲ ಸೌಕರ್ಯಕ್ಕಾಗಿ 80 ಎಕರೆ ಜಮೀನು ಹೊಂದಿರಬೇಕೆಂಬ ನಿಯಮವಿದೆ. ಆದರೆ, ಈ ಕಾಲೇಜಿಗೆ 27.20 ಎಕರೆ ಮಾತ್ರ ಜಮೀನು ಇದೆ. ಕಳೆದ ಹಲವು ವರ್ಷಗಳಿಂದ ಕಾಲೇಜು ಉಳಿಸಿಕೊಳ್ಳುವ ಪ್ರಯತ್ನದ ಮಧ್ಯ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹಾಗೂ ಹಿಂದಿನ ಡಿಸಿ ಡಾ| ಮಹಾದೇವ ಜಿಲ್ಲಾ ಸಂಕೀರ್ಣ ನಿರ್ಮಾಣಕ್ಕೆ ರೇಷ್ಮೆ ಇಲಾಖೆ ಜಮೀನು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದ್ದರು. ಈಗ ಕಾಲೇಜಿಗೆ ಜಮೀನು ನೀಡಬೇಕೆಂಬ ಆದೇಶ ನನ್ನಲ್ಲಿನ ಆತಂಕ ದೂರ ಆದಂತಾಗಿದೆ ಎಂದರು.
ಕಾಲೇಜಿನಲ್ಲಿ ಮೂಲ ಸೌಕರ್ಯಗಳ ಪರಿಶೀಲನೆಗಾಗಿ ಪ್ರತಿ 5 ವರ್ಷಕ್ಕೊಮ್ಮೆ ಬರುವ ಐಸಿಎಂಆರ್ ತಂಡವು ಆರಂಭದ 5 ವರ್ಷದಲ್ಲಿ ಇನ್ನಷ್ಟು ಜಮೀನು ಪಡೆಯಲು ಹೇಳಿತ್ತು. 2008ರಲ್ಲಿ ಅಂದಿನ ಡಿಸಿ ಹರ್ಷಗುಪ್ತ ರೇಷ್ಮೆ ಇಲಾಖೆಯ ಜಮೀನು ತೋರಿಸಿದ್ದರು. ನಂತರ ಡಿಸಿ ಪಿ.ಸಿ. ಜಾಫರ್ ಅವರೂ ಸಂಬಂಧಪಟ್ಟ ಇಲಾಖೆಗೆ ಈ ಕುರಿತು ಪತ್ರ ವ್ಯವಹಾರ ನಡೆಸಿದ್ದರೆಂದು ಮಾಹಿತಿ ನೀಡಿದರು.
2014ರಲ್ಲಿ ಸಿದ್ದರಾಮಯ್ಯ ಸರ್ಕಾರ ರೇಷ್ಮೆ ಇಲಾಖೆಗೆ ಸೇರಿದ ಸರ್ವೇ ನಂ. 287/1ರಲ್ಲಿ 40 ಎಕರೆ ಜಮೀನನ್ನು ಡಿಸಿ ನಿಗದಿಪಡಿಸಿದ ದರಕ್ಕೆ ಹಾಗೂ 20 ವಸತಿ ಗೃಹಗಳನ್ನು ಲೋಕೋಪಯೋಗಿ ಇಲಾಖೆ ನಿಗದಿಪಡಿಸುವ ದರದಂತೆ ತೋಟಗಾರಿಕೆ ವಿವಿಗೆ ಹಸ್ತಾಂತರಿಸಲು ಸಂಪುಟದಲ್ಲಿ ಒಪ್ಪಿಗೆ ನೀಡಿತ್ತು. ದರ ನಿಗದಿ ಬಳಿಕ ಕಾರಣಾಂತರಗಳಿಂದ ಭೂಮಿ ಹಸ್ತಾಂತರ ಕಾರ್ಯ ನನೆಗುದಿಗೆ ಬಿದ್ದಿತ್ತು ಎಂದು ತಿಳಿಸಿದರು.
ಕಳೆದ ಮಾ.20ರಂದು ಡಿಸಿಎಂ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಈ ವಿಷಯ ಗಮನಕ್ಕೆ ತಂದಾಗ ಕಾಲೇಜಿಗೆ ಜಮೀನು ಹಸ್ತಾಂತರ ಕುರಿತು ಅ ಧಿಕಾರಿಗಳಿಗೆ ಸೂಚನೆ ನೀಡಿದ್ದರು. ಜತೆಗೆ ಬೀದರನಲ್ಲಿಯೇ ತೋಟಗಾರಿಕೆ ಕಾಲೇಜು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ತೋಟಗಾರಿಕೆ ಸಚಿವರು ಮತ್ತು ಇಲಾಖೆ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೂ ತರಲಾಗಿತ್ತು ಎಂದರು.
ನಂತರ ಡಿ. 28ರಂದು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೇಷ್ಮೆ ಇಲಾಖೆಯ 49.23 ಎಕರೆ ಜಮೀನನ್ನು ತೋಟಗಾರಿಕೆ ಮಹಾವಿದ್ಯಾಲಯ ನಿರ್ಮಾಣದ ಉದ್ದೇಶಕ್ಕಾಗಿ ಉಚಿತವಾಗಿ ಹಸ್ತಾಂತರಿಸಲು ತೀರ್ಮಾನಿಸಲಾಗಿತ್ತು. ಜಮೀನು ಹಸ್ತಾಂತರ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ಎಚ್. ವನಿತ್ ಆದೇಶ ಹೊರಡಿಸಿದ್ದಾರೆ. ರೇಷ್ಮೆ ಇಲಾಖೆಯಲ್ಲಿ ಉಳಿದ ಜಮೀನಿನಲ್ಲಿ ಇಲಾಖೆಗೆ ಜೀವ ತುಂಬಲು ಅಲ್ಲಿ ಸಂಶೋಧನಾ ಕೇಂದ್ರ ಆರಂಭಿಸಲು ಪ್ರಯತ್ನಿಸಲಾಗುವುದು ಎಂದು ಅರಳಿ ತಿಳಿಸಿದರು.
ಜಿಲ್ಲೆಯ ಬಿಎಸ್‌ಎಸ್‌ಕೆ ಕಾರ್ಖಾನೆ ಬಿಜೆಪಿಯವರ ದುರುದ್ದೇಶದಿಂದ ಬಂದ್ ಆಗಿದೆ. ಸರ್ಕಾರ ಕೇವಲ 50 ಕೋಟಿ ರೂ. ಅನುದಾನ ನೀಡಿದರೆ ಖುದ್ದು ನಾನೇ ಆರಂಭಿಸುತ್ತೇನೆ. 200 ಕೋಟಿ ಖರ್ಚು ಮಾಡಿದರೂ ಕಾರ್ಖಾನೆ ಆರಂಭವಾಗಲ್ಲ ಎಂದು ಸಕ್ಕರೆ ಸಚಿವರಿಗೆ ತಪ್ಪು ಮಾಹಿತಿ ನೀಡಲಾಗಿದೆ.ಕಾರ್ಖಾನೆ ಪುನಶ್ಚೇತನಕ್ಕೆ ಅಗತ್ಯ ಹಣ ನೀಡಿ, ಇಲ್ಲವೇ ಖಾಸಗಿಯವರಿಗೆ ವಹಿಸಿ ರೈತರ ಹಿತ ಕಾಪಾಡಿ.
ಅರವಿಂದ ಅರಳಿ, ಎಂಎಲ್‌ಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ
ಗುತ್ತಿಗೆದಾರ ಸಚಿನ್ ಕೇಸ್: ಪ್ರಕರಣ ಮುಚ್ಚಿಹಾಕಲು ಸರ್ಕಾರದ ಯತ್ನ: ಸಹೋದರಿ ಆರೋಪ
Bidar: ಸಚಿನ್ ಆತ್ಮಹತ್ಯೆ ಪ್ರಕರಣ; ನಿಗೂಢ ಸಾವಿನ ತನಿಖೆ, ಮೃತ ಕುಟುಂಬಕ್ಕೆ ಪರಿಹಾರ:ಆಗ್ರಹ
Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್ ಸಹೋದರಿ ಸುರೇಖಾ
Bidar; ಗುತ್ತಿಗೆದಾರ ಸಚಿನ್ ಮನೆಗೆ ಭೇಟಿ ನೀಡಿದ ಸಚಿವ ಈಶ್ವರ ಖಂಡ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.