ಲಸಿಕೆಯ ಗಾಳಿಸುದ್ದಿಗೆ ಕಿವಿಗೊಡದಿರಿ; ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ
ಅಡ್ಡಪರಿಣಾಮಗಳು ಉಂಟಾಗುತ್ತದೆ ಎಂಬ ಗಾಳಿ ಸುದ್ದಿ ಹಬ್ಬುತ್ತಿದ್ದು, ಸಾರ್ವಜನಿಕರು ಕಿವಿಗೊಡಬಾರದು
Team Udayavani, Jan 16, 2021, 4:26 PM IST
ವಿಜಯಪುರ: ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಬಹುನಿರೀಕ್ಷಿತ ಕೋವಿಡ್ ಲಸಿಕೆ ಬಗ್ಗೆ ಭಾರತೀಯರಾದ ನಾವು ಹೆಮ್ಮೆಪಡಬೇಕು. ಸರಕಾರದ ನಿರ್ದೇಶಾನುಸಾರ ಲಸಿಕೆಯನ್ನು ವಿವಿಧ ಹಂತಗಳಲ್ಲಿ ಆರೋಗ್ಯ ಸಿಬ್ಬಂದಿ, ಪೊಲೀಸ್ ಇಲಾಖೆ, ವಿವಿಧ ಇಲಾಖೆ ನೌಕರರು ಮತ್ತು ನಂತರದ ದಿನಗಳಲ್ಲಿ ಜನಸಮಾನ್ಯರಿಗೆ ನೀಡಲಾಗುವುದು ಎಂದು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ ತಿಳಿಸಿದ್ದಾರೆ.
ಕೇಂದ್ರ ಸರಕಾರದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ತುಳಜಾ ಭವಾನಿ ಕಾಲೇಜ್ ಆಫ್ ನರ್ಸಿಂಗ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ ಸಹಭಾಗಿತ್ವದಲ್ಲಿ ಶುಕ್ರವಾರ ಕೋವಿಡ್ ಲಸಿಕೆಯ ಮಹತ್ವ ಮತ್ತು ಅನಾವರಣ ಕುರಿತಾಗಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಲಸಿಕೆ ಪಡೆಯುವುದರಿಂದ ಸಾಕಷ್ಟು ಅಡ್ಡಪರಿಣಾಮಗಳು ಉಂಟಾಗುತ್ತದೆ ಎಂಬ ಗಾಳಿ ಸುದ್ದಿ ಹಬ್ಬುತ್ತಿದ್ದು, ಸಾರ್ವಜನಿಕರು ಕಿವಿಗೊಡಬಾರದು ಎಂದರು.
ಈಗಾಗಲೇ ಪರವಾನಗಿ ಪಡೆದಿರುವ ಎರಡು ಲಸಿಕೆಗಳು ಸಾಕಷ್ಟು ಪ್ರಯೋಗಾರ್ಥಗಳನ್ನು ನಡೆಸಿ ಯಶಸ್ವಿಯಾಗಿವೆ. ಆದ್ದರಿಂದ ಯಾರೂ ಲಸಿಕೆ ಬಗ್ಗೆ
ಅನಾವಶ್ಯಕವಾಗಿ ಮಾನಸಿಕವಾಗಿ ನಾಕಾರಾತ್ಮಕ ಚಿಂತೆಗೆ ಒಳಗಾಗಬಾರದು ಎಂದರು. ಲಸಿಕೆ ನೀಡುವ ಅಭಿಯಾನ ಜ. 16ರಿಂದ ಜಿಲ್ಲೆಯಲ್ಲಿ ಪ್ರಾರಂಭವಾಗಲಿದ್ದು, ಮೊದಲ ಹಂತದಲ್ಲಿ ಸರಕಾರಿ ಮತ್ತು ಖಾಸಗಿ ವೈದ್ಯಕೀಯ ಮತ್ತು ಆರೋಗ್ಯ ಕಾರ್ಯಕರ್ತರಿಗೆ ನೀಡಲು ಸಕಲ ಸಿದ್ಧತೆ
ಮಾಡಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ:ಪ್ರತಿಯೊಬ್ಬ ದೇಶಭಕ್ತನ ದೇಣಿಗೆ ಸಲ್ಲಲಿ: ಮಲ್ಲಿಕಾರ್ಜುನ ಹಿಪ್ಪರಗಿ
ಎರಡನೇ ಹಂತದಲ್ಲಿ ಪೊಲೀಸ್ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ನೀಡಲಾಗುತ್ತದೆ. ಮೂರನೇ ಹಂತದಲ್ಲಿ
50 ವರ್ಷಕ್ಕೆ ಮೇಲ್ಪಟ್ಟ ನಾಗರಿಕರಿಗೆ ನೀಡಲಾಗುವುದು ಎಂದರು. ತದನಂತರ ಜನಸಾಮಾನ್ಯರಿಗೆ ನೀಡುವ ಬಗ್ಗೆ ಸರಕಾರ ನಿರ್ಧಾರಕ್ಕೆ ಬರಲಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಸಿ.ಕೆ. ಸುರೇಶ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಸಂಕಲ್ಪಕ್ಕೆ
ದ್ಯೋತಕವಾಗಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ಸಿದ್ಧಪಡಿಸಲಾಗಿದ್ದು, ವಿದೇಶಗಳಿಂದಲ್ಲೂ ಈ ಲಸಿಕೆಗಳಿಗೆ ಬೇಡಿಕೆ ಬಂದಿದೆ. ಆದ್ದರಿಂದ
ಲಸಿಕೆ ಬಗ್ಗೆ ಸಕಾರಾತ್ಮಕ ಚಿಂತನೆ ನಡೆಸಬೇಕು ಎಂದರು. ರೋಗ ನಿರೋಧಕ ಶಕ್ತಿಗಾಗಿ ಈ ಲಸಿಕೆ ಪಡೆಯಲು ಜನಸಾಮಾನ್ಯರು ಈಗಿನಿಂದಲೇ
ಸನ್ನದ್ಧರಾಗಬೇಕೆಂದರು.
ತುಳಜಾ ಭವಾನಿ ಕಾಲೇಜ್ ಆಫ್ ನರ್ಸಿಂಗ್ ಪ್ರಾಧ್ಯಾಪಕ ಪ್ರೊ| ಸಚಿನ್ ಕಿರಣಿ ಮಾತನಾಡಿ, ಲಸಿಕೆ ಬಗ್ಗೆ ಜನಸಾಮಾನ್ಯರು ಮೇಲಿಂದ ಮೇಲೆ ಕೇಳುವ
ಹಲವು ಪ್ರಶ್ನೆಗಳ ಸಂಬಂಧ ಕೇಂದ್ರ ಸರಕಾರದ ಆರೋಗ್ಯ ಇಲಾಖೆ ನೀಡಿರುವ ಸಮಜಾಯಿಸಿ ನೀಡಿದರು. ತುಳಜಾ ಭವಾನಿ ಕಾಲೇಜಿನ ಪ್ರಾಂಶುಪಾಲೆ ಡಾ|
ಪ್ರಭಾವತಿ ಕಾಳೆ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ| ರಾಜಶೇಖರಯ್ಯ ಕಣಕಾಲಮಠ ನಿರೂಪಿಸಿದರು. ತುಳಜಾ ಭವಾನಿ ಕಾಲೇಜ್ ಆಫ್ ನರ್ಸಿಂಗ್
ಆಡಳಿತಾಧಿಕಾರಿ ಶಿನಾನಂದ ರಾಠೊಡ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.