ಸಾಲ ವಾಪಸ್ ಕೇಳಿದ ವೃದ್ಧೆಯನ್ನೇ ಕೊಂದು ಬಾವಿಗೆ ಎಸೆದ್ರು : ಇಬ್ಬರು ಆರೋಪಿಗಳು ಸೆರೆ
Team Udayavani, Jan 17, 2021, 10:59 AM IST
ಕೊಳ್ಳೇಗಾಲ: ಪಡೆದ ಸಾಲವನ್ನು ವಾಪಸ್ ನೀಡುವಂತೆ ಕೇಳಿದ ವೃದ್ಧೆಯನ್ನೇ ಕೊಲೆಗೈದು ಆಕೆಯ ಕೈ ಕಾಲು ಕಟ್ಟಿ ಬಾವಿಗೆ ಎಸೆದಿರುವ ಘಟನೆ ತಾಲೂಕಿನ ಮಧುವನಹಳ್ಳಿ ಆಂಜನೇಯಪುರದಲ್ಲಿ ಸಂಭವಿಸಿದೆ.
ಗ್ರಾಮದ ಶಿವಮ್ಮ (70) ಮೃತ ದುರ್ದೈವಿ. ಈಕೆ ಗ್ರಾಮದಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಾ ಕೂಡಿಟ್ಟಿದ್ದ ಹಣವನ್ನು ಪಕ್ಕದ ಮನೆಯ ರಾಜು (25) ಎಂಬಾತನಿಗೆ ಮನೆ ನಿರ್ಮಿಸುವ ಸಲುವಾಗಿ ಸಾಲವಾಗಿ ನೀಡಿದ್ದರು. ತನ್ನ ದೈನಂದಿನ ಖರ್ಚಿಗಾಗಿ ಹಣದ ಅವಶ್ಯಕತೆ ಇದ್ದ ಕಾರಣ ಸಾಲವನ್ನು ಮರು ಪಾವತಿಸುವಂತೆ ಶಿವಮ್ಮ ಕೇಳುತ್ತಿದ್ದರು. ವೃದ್ಧೆ ಸಿಕ್ಕಿದಾಗಲೆಲ್ಲಾ ಹಣ ಕೇಳುತ್ತಾಳೆ ಎಂದು ಕುಪಿತಗೊಂಡ ರಾಜು ತನ್ನ ಸ್ನೇಹಿತ ಶಿವರಾಜು (20) ಎಂಬಾತನ ನೆರವಿನೊಂದಿಗೆ ಆಕೆಯನ್ನು ಕೊಲೆಗೈದು ಸಾಲಮುಕ್ತನಾಗಲು ಯೋಚಿಸಿದ್ದನು. ಅದರಂತೆ ಹಣ ನೀಡುವುದಾಗಿ ಪುಸಲಾಯಿಸಿ ಪಾಳು ಬಾವಿಯ ಬಳಿ ವೃದ್ಧೆಯನ್ನು
ಕರೆಸಿಕೊಂಡಿದ್ದಾರೆ. ಬಳಿಕ ಆಕೆಯ ಕೈಕಾಲುಗಳನ್ನು ಕಟ್ಟಿ ರಾಗಿ ಬೀಸುವ ಕಲ್ಲನ್ನು ಹಗ್ಗದೊಂದಿಗೆ ಬಿಗಿದು ಪಾಳು ಬಾವಿಗೆ ಎಸೆದಿದ್ದರು.
ಇದನ್ನೂ ಓದಿ:ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತನ ತಂದೆಯನ್ನ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ
ಶಿವಮ್ಮ ಕಾಣೆಯಾಗಿರುವ ಕುರಿತು ಆಕೆ ಸಂಬಂಧಿಕರು ಜ13ರಂದು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ವೃದ್ದೆಯನ್ನು ಕಲ್ಲು ಕಟ್ಟಿ ಬಾವಿಗೆ ಬಿಸಾಡಿದ ಆರೋಪಿಗಳು ಮೃತ ದೇಹ ಮೇಲೆ ಬರಬಹುದೆಂದು ಎರಡು ಮೂರು ದಿನ ಬಾವಿಯ ಬಳಿ ಬಂದು ನೋಡುತ್ತಿದ್ದರು. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಇವರ ವಿರುದ್ಧ ಪೊಲೀಸರಿಗೆ
ದೂರು ನೀಡಿದ್ದರು. ಪೊಲೀಸರು ತನಿಖೆ ಕೈಗೊಂಡಿರುವ ಬೆನ್ನಲ್ಲೇ ಗ್ರಾಮದ ಬಾವಿಯೊಂದರಲ್ಲಿ ಕಂಡು ಬಂದ ಶವವನ್ನು ಹೊರ ತೆಗೆದಾಗ ಇದು ವೃದ್ಧೆ ಶಿವಮ್ಮ ಎಂಬುದು ದೃಢಪಟ್ಟಿದೆ. ಪ್ರಕರಣದ ಜಾಡು ಹಿಡಿದಾಗ ವೃದ್ಧೆಯ ಪಕ್ಕದ ಮನೆಯ ರಾಜು ಮತ್ತು ಆತನ ಸ್ನೇಹಿತ ಶಿವರಾಜು ಈ ಕೃತ್ಯ ಎಸಗಿರುವುದು ತಿಳಿದು ಬಂದಿದ್ದು, ಇಬ್ಬರನ್ನೂ ಬಂಧಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಡಿವೈಎಸ್ಪಿ ನಾಗರಾಜು, ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಕಾಂತ್, ಗ್ರಾಮಾಂತರ ಪೊಲೀಸ್ ಠಾಣೆ ಎಸ್‌ಐ ಅಶೋಕ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಶವವನ್ನು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ
Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?
Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್ ಭೇಟಿ ಸಾಧ್ಯತೆ
DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ
DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.