ಮಮತೆಯ ಮಡಿಲು ಅನ್ನದಾಸೋಹದಲ್ಲಿ ಊಟ ವಿತರಿಸಿದ ಶಾಸಕ ಶ್ರೀನಿವಾಸ್
Team Udayavani, Jan 17, 2021, 12:43 PM IST
ಮಂಡ್ಯ: ಮೈಸೂರಿನ ಚಲುವಾಂಬ ಆಸ್ಪತ್ರೆಯ ಮಾದರಿಯಲ್ಲಿ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್‌ನ್ನು 250 ಹಾಸಿಗೆ ಸೌಲಭ್ಯವನ್ನೊಳಗೊಂಡ ಪ್ರತ್ಯೇಕ ಆಸ್ಪತ್ರೆ ನಿರ್ಮಿಸುವ ಚಿಂತನೆ ನಡೆದಿದೆ ಎಂದು ಶಾಸಕ ಎಂ. ಶ್ರೀನಿವಾಸ್ ತಿಳಿಸಿದರು.
ನಗರದ ಮಿಮ್ಸ್‌ನ ಹೆರಿಗೆ ವಾರ್ಡ್ ಬಳಿ ಪರಿಸರ ರೂರಲ್ ಡೆವಲ್‌ಮೆಂಟ್ ಸೊಸೈಟಿ, ಮಮತೆಯ ಮಡಿಲು ವತಿಯಿಂದ ನಿತ್ಯ
ದಾಸೋಹ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾರ್ಥಕ ದಿನವನ್ನಾಗಿ ಆಚರಣೆಗೊಂಡ ಸಂದರ್ಭ ಸಾರ್ವಜನಿಕವಾಗಿ ಆಹಾರ ವಿತರಿಸಿ ಮಾತನಾಡಿದರು.
ಜಿಲ್ಲಾಸ್ಪತ್ರೆ ಪಕ್ಕದಲ್ಲಿರುವ ತಮಿಳು ಕಾಲೋನಿ ತೆರವುಗೊಂಡ ನಂತರ ಆ ಜಾಗದಲ್ಲಿ ಚಲುವಾಂಬ ಆಸ್ಪತ್ರೆ ಮಾದರಿಯಲ್ಲೇ
ಪ್ರತ್ಯೇಕವಾಗಿ ಮಹಿಳೆಯರು ಮತ್ತು ಮಕ್ಕಳ ಹಿತದೃಷ್ಟಿಯಿಂದ ಹೆರಿಗೆ ಆಸ್ಪತ್ರೆ ನಿರ್ಮಾಣ ಮಾಡುವ ಗುರಿ ಹೊಂದಿದೆ. ಸದ್ಯದಲ್ಲೇ ಪ್ರಕ್ರಿಯೆ ಆರಂಭಗೊಳ್ಳುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಹಣ ಮಾಡುವ ಉದ್ದೇಶವಲ್ಲ: ಹಣ ಮಾಡುವುದೇ ಮನುಷ್ಯನ ಮೂಲ ಉದ್ದೇಶವಲ್ಲ. ಮನುಷ್ಯ ಸತ್ತ ಮೇಲೆ ಹಣವನ್ನು
ಹೊತ್ತು ಹೋಗಲು ಸಾಧ್ಯವಿಲ್ಲ. ಆದ್ದರಿಂದ ಉಳ್ಳವರು ತಮ್ಮಲ್ಲಿರುವ ಸಂಪತ್ತನ್ನು ಇಲ್ಲದವರಿಗೆ ನೀಡುವುದರ ಮೂಲಕ
ನೆರವಾಗಬೇಕು. ಮಂಗಲ ಎಂ.ಯೋಗೀಶ್ ದಂಪತಿಗಳ ಮಮತೆಯ ಮಡಿಲುವಿನ ಮೂಲಕ ರೋಗಿಗಳ ಸಂಬಂಧಿಗಳಿಗೆ
ನೆರವಾಗುತ್ತಿರುವ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ:ಶಾರ್ದೂಲ್ ‘ಸುಂದರ’ ಆಟ: 336 ರನ್ ಗಳಿಸಿದ ಟೀಂ ಇಂಡಿಯಾ, ಅಲ್ಪ ಹಿನ್ನಡೆ
ಸ್ವಯಂಶಕ್ತಿಯಿಂದ ಆಹಾರ ತಯಾರಿ:
ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಅದ್ಧೂರಿ ಮದುವೆಗಳಲ್ಲಿ ಪೋಲಾಗುತ್ತಿದ್ದ ಆಹಾರವನ್ನು ಸಂಗ್ರಹಿಸಿ ಮಮತೆಯ ಮಡಿಲುವಿನ ಮೂಲಕ ಆಸ್ಪತ್ರೆಯ ಆವರಣದಲ್ಲಿ ವಿತರಿಸುವ ಕಾರ್ಯಕ್ರಮವನ್ನು ಕಳೆದ ಒಂದು ವರ್ಷದ ಹಿಂದೆ ಆರಂಭಿಸಿದೆವು. ಒಂದು ತಿಂಗಳ ನಂತರ ಸ್ವಯಂ ಶಕ್ತಿಯಿಂದ ನಾವೇ ಆಹಾರವನ್ನು ತಯಾರಿಸಿ ಕೊಡುವ ವ್ಯವಸ್ಥೆಯನ್ನು ರೂಢಿಸಿಕೊಂಡು ಬಂದಿದ್ದೇವೆ ಎಂದರು.
ಕೋವಿಡ್‌ನಂಥ ಸಂದರ್ಭದಲ್ಲಿ ಕೂಡ ಮಧ್ಯಾಹ್ನದ ಊಟದ ವ್ಯವಸ್ಥೆಯ ಜತೆಗೆ ಬೆಳಗಿನ ಉಪಹಾರವನ್ನು ಕೊಡಲಾಗುತ್ತಿದೆ.
ಪೌಷ್ಠಿಕ ಆಹಾರದಿಂದ ಬಳಲುವ ಅಸಂಖ್ಯಾತ ಶ್ರಮಿಕ ಮಹಿಳೆಯರಿಗೆ ಇದು ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನೆರವಿನಿಂದ ಇನ್ನಷ್ಟು ಗುಣಮಟ್ಟದ ಆಹಾರ ವಿತರಣೆಗೆ ಮುಂದಾಗುವುದಾಗಿ ಹೇಳಿದರು. ಮಿಮ್ಸ್ ನಿರ್ದೇಶಕ ಡಾ.ಎಂ.ಆರ್. ಹರೀಶ್, ಸ್ಥಾನೀಯ ವೈದ್ಯಾಧಿಕಾರಿ ಡಾ.ರವೀಂದ್ರ ಬಿ.ಗೌಡ, ಶಂಕರೇಗೌಡ, ಕೆ.ಪಿ.
ಅರುಣಕುಮಾರಿ, ಮಧುಗೌಡ ಸೇರಿದಂತೆ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ:ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶನ
MUST WATCH
ಹೊಸ ಸೇರ್ಪಡೆ
Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.