ಕೋಟೆ: ಅವ್ಯವಸ್ಥೆ ರಸ್ತೆ ಕಾಮಗಾರಿಗೆ ಮರು ಡಾಮರು
Team Udayavani, Jan 18, 2021, 2:35 AM IST
ಕಟಪಾಡಿ,: ಕೋಟೆ ಗ್ರಾ.ಪಂ. ವ್ಯಾಪ್ತಿಯಕೋಟೆ ಬೀಡುವಿನಿಂದ ಶ್ರೀ ದುರ್ಗಾಪರಮೇಶ್ವರೀ ಗುಡಿವರೆಗಿನ ಅವ್ಯಸ್ಥೆಯಿಂದ ಕೂಡಿದ ರಸ್ತೆ ಕಾಮಗಾರಿಗೆ ಮರು ಡಾಮರು ನಡೆಸಲಾಯಿತು.
ಈ ಭಾಗದಲ್ಲಿ ಲೋಕೋಪಯೋಗಿ ಇಲಾಖೆ ಯಡಿ ಈ ಕಾಮಗಾರಿ ನಿರ್ವಹಿಸಲಾಗುತ್ತಿದ್ದು ಗುತ್ತಿಗೆದಾರರು ಕಳಪೆ ಮಟ್ಟದ ಕಾಮಗಾರಿ ನಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದರು. ನಿರ್ಮಿಸಲಾದ ಚರಂಡಿಗಿಂತ ತಗ್ಗು ಮಟ್ಟದಲ್ಲಿ ಡಾಮರು ಹಾಕಿ ಕ್ರಶರ್ ಹುಡಿ ಫಿನಿಶಿಂಗ್ ನಡುವೆ ಡಾಮರು ರಸ್ತೆಯಲ್ಲಿಯೂ ಬಿರುಕು ಕಂಡುಬಂದಿದ್ದು ಇದರ ಗುಣಮಟ್ಟದ ಬಗ್ಗೆ ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದು, ಮಳೆಗಾಲದಲ್ಲಿ ನೀರು ಚರಂಡಿಗೆ ಇಳಿಯುವುದಿಲ್ಲ, ಪೈಪ್ ಅಳವಡಿಕೆಯ ವ್ಯತ್ಯಾಸವಾಗಿದೆ ಎಂದು ಅಸಹನೆ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಉದಯವಾಣಿಯು ವರದಿ ಪ್ರಕಟಿಸಿದ್ದು, ಸ್ಪಂದಿಸಿದ ಸಂಬಂಧಪಟ್ಟ ಅಧಿಕಾರಿಗಳ ಸೂಚನೆಯ ಮೇರೆಗೆ ಮರುಡಾಮರು ಹಾಗೂ ಅಳವಡಿಸಲಾದ ಪೈಪ್ ತೆರವು ಮಾಡಲಾಗಿದೆ. ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.