ಪರ್ಯಾಯದ 500ನೇ ವರ್ಷ: ಇಂದು ಮುಖ್ಯಮಂತ್ರಿ ಉದ್ಘೋಷ
Team Udayavani, Jan 18, 2021, 7:00 AM IST
ಉಡುಪಿ: ಶ್ರೀಕೃಷ್ಣ ಮಠದ ದ್ವೆ„ವಾರ್ಷಿಕ ಪರ್ಯಾಯ ಪದ್ಧತಿಯ ಪಂಚ ಶತಮಾನೋತ್ಸವದಲ್ಲಿ ಜ. 18ರಂದು ಪಾಲ್ಗೊಳ್ಳುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 500ನೇ ವರ್ಷಾಚರಣೆಯನ್ನು ಉದ್ಘೋಷಿಸುವರು.
ಸಂಜೆ 5ಕ್ಕೆ ಆಗಮಿಸುವ ಮುಖ್ಯಮಂತ್ರಿ ಯವರು ಯಾತ್ರಾರ್ಥಿ ಗಳು ದರ್ಶನ ಪಡೆಯುವ ನೂತನ ಮಾರ್ಗ “ವಿಶ್ವಪಥ’ವನ್ನು ಉದ್ಘಾಟಿಸಿ ದೇವರ ದರ್ಶನ ಪಡೆಯುವರು. ರಾಜಾಂಗಣದಲ್ಲಿ ಏರ್ಪಡಿಸಲಾದ ಗ್ರಾಮೀಣ ಕರಕುಶಲ ಮತ್ತು ಕೈಮಗ್ಗದ ಮಳಿಗೆಯನ್ನು ಉದ್ಘಾಟಿಸಿ ಪಂಚ ಶತಮಾನೋತ್ಸವದ ಸಭೆಯಲ್ಲಿ ಪಾಲ್ಗೊಳ್ಳುವರು. ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದರು, ಶಾಸಕರು ಭಾಗವಹಿಸುವರು ಎಂದು ಮಠದ ವ್ಯವಸ್ಥಾಪಕ ಗೋವಿಂದರಾಜ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ 4ಕ್ಕೆ ಜೋಡುಕಟ್ಟೆಯಿಂದ ಹಳೆ ಡಯಾನ ವೃತ್ತ, ತೆಂಕಪೇಟೆ ಮಾರ್ಗವಾಗಿ ಮಠದವರೆಗೆ ಆಕರ್ಷಕ ಶೋಭಾಯಾತ್ರೆ ನಡೆಯಲಿದೆ. ಡೊಳ್ಳುಕುಣಿತ, ಒಡಿಶಾದ ಶಂಖವಾದನ, ಮಲ್ಲಕಂಬ ಇತ್ಯಾದಿ ಕಲಾಪ್ರಕಾರಗಳು, ಮಧ್ವ-ವಾದಿರಾಜರ ಕೃತಿ ಗಳು, ವೇದಘೋಷ, ಭಜನ ತಂಡಗಳು ಭಾಗವಹಿಸಲಿವೆ. ಶೋಭಾ ಯಾತ್ರೆಯನ್ನು ಯೂನಿ ಯನ್‌ಬ್ಯಾಂಕ್ ಆಫ್ ಇಂಡಿಯಾದ ಆಡಳಿತ ನಿರ್ದೇಶಕ ರಾಜಕಿರಣ ರೈ, ಹೊಸಪೇಟೆ ಉದ್ಯಮಿ ಪ್ರಭಾಕರ ಶೆಟ್ಟಿ ಉದ್ಘಾಟಿಸುವರು ಎಂದು ಕಲಾವಿದ ಪುರುಷೋತ್ತಮ ಅಡ್ವೆ ತಿಳಿಸಿದರು.
ಸೀಮಿತ ಪ್ರವೇಶ ಕೋವಿಡ್ ಕಾರಣ ಸೀಮಿತ ಜನರಿಗೆ ಮಾತ್ರ ಪ್ರವೇಶ ಕೊಡಲಾಗುತ್ತಿದೆ. ಶ್ರೀಕೃಷ್ಣಮಠದಿಂದ ನೀಲಿ ಮತ್ತು ಕಿತ್ತಳೆ ಬಣ್ಣದ ಪಾಸ್ ನೀಡಲಾದ ಸ್ಥಳೀಯ ಭಕ್ತರು ಸಭೆಯಲ್ಲಿ ಪಾಲ್ಗೊಳ್ಳಬಹುದು ಎಂದು ಗೋವಿಂದರಾಜ್ ಅವರು ತಿಳಿಸಿದರು. ಮಠದ ಅಧಿಕಾರಿಗಳಾದ ವೈ.ಎನ್. ರಾಮಚಂದ್ರ ರಾವ್, ಶ್ರೀಶ ಭಟ್, ಸಂತೋಷ ಕುಮಾರ್ ಪತ್ರಿಕಾಗೋಷ್ಠಿಯಲ್ಲಿದ್ದರು.
ವಿಸ್ತರಣೆಗೊಳ್ಳುತ್ತ ಬಂದ ಪರ್ಯಾಯ ಪದ್ಧತಿ: ಅದಮಾರು ಶ್ರೀ
ಉಡುಪಿ: ಶ್ರೀಕೃಷ್ಣ ಮಠದ ಪೂಜಾ ಪದ್ಧತಿ ವಿಸ್ತರಣೆಗೊಳ್ಳುತ್ತ ಬಂದಿರುವುದಾಗಿ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದ್ದಾರೆ.
ರವಿವಾರ ರಾಜಾಂಗಣದಲ್ಲಿ ನಡೆದ ದ್ವೆ„ವಾರ್ಷಿಕ ಪರ್ಯಾಯ ಪದ್ಧತಿಯ ಪಂಚ ಶತಮಾನೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಅವರು, ಸುಮಾರು 800 ವರ್ಷಗಳ ಹಿಂದೆ ಪೂಜಾ ವಿಧಿವಿಧಾನಗಳು ಮಾತ್ರ ಇದ್ದವು. ವಾದಿರಾಜರ ಕಾಲದಲ್ಲಿ ಎರಡು ತಿಂಗಳಿನಿಂದ ಎರಡು ವರ್ಷಗಳಿಗೆ ವಿಸ್ತರಣೆಯಾಯಿತು. ಈಗ ಉಡುಪಿಯ
ಉತ್ಸವವಾಗಿದೆ ಎಂದರು.
ಕೆನರಾ ಬ್ಯಾಂಕ್ ಮಹಾಪ್ರಬಂಧಕ ಮಂಗಳೂರಿನ ಯೋಗೀಶ ಆಚಾರ್ಯ, ಕಟೀಲು ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಮುಖ್ಯ ಅತಿಥಿಗಳಾಗಿದ್ದರು. ವಿವಿಧ ಸಾಧಕರನ್ನು ಸಮ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.