ನಿಮ್ಮ ಗ್ರಹಬಲ: ಈ ರಾಶಿಯವರ ಸಂಬಂಧದಲ್ಲಿ ಬಿರುಕುಗಳು ಕಂಡು ಬಂದು ಏರುಪೇರಾಗಬಹುದು!
Team Udayavani, Jan 18, 2021, 8:23 AM IST
18-01-2021
ಮೇಷ: ತಾಳ್ಮೆ ಸಹನೆ ನಿಮಗಿಂದು ಅವಶ್ಯಕವಿದೆ. ವಾದವಿವಾದಕ್ಕೆ ಎಂದೂ ಕೈಹಾಕದಿರಿ. ನಿಮ್ಮ ಮೇಲೆಯೇ ನಿಯಂತ್ರಣ ಹೇರಿಕೊಂಡವರಂತೆ ವರ್ತಿಸುವಿರಿ. ಅತೀ ಭಾವುಕರಾಗಿ ನಿಯಂತ್ರಣ ಕಳೆದುಕೊಳ್ಳುವುದು ಬೇಡ.
ವೃಷಭ: ಯಾವುದೇ ಕೆಲಸವನ್ನು ಆತುರದಿಂದ ಮಾಡಲು ಹೋಗಿ ದುಡುಕಬೇಡಿರಿ. ನಿಯತ್ತಿ ನಿಂದ ಹಾಗೂ ಕಠಿಣ ಪರಿಶ್ರಮದಿಂದ ದುಡಿಯುವ ನಿಮಗೆ ಹೆಚ್ಚಿನ ಪ್ರತಿಫಲ ದೊರಕದು. ಆರೋಗ್ಯದಲ್ಲಿ ಸುಧಾರಣೆ ಇದೆ.
ಮಿಥುನ: ನಿಮ್ಮೆಣಿಕೆಯಂತೆ ಕೆಲಸ ಕಾರ್ಯಗಳು ನಡೆದಿಲ್ಲವೆಂದು ಹತಾಶರಾಗದಿರಿ. ಯೋಚಿಸಿ ಮುಂದಡಿ ಇಡಿರಿ. ಸಹೋದ್ಯೋಗಿಗಳೊಂದಿಗೆ ವ್ಯವಹರಿಸುವಾಗ ಸಹನೆ ಇರಲಿ. ಕಾರ್ಮಿಕ ವರ್ಗಕ್ಕೆ ಅಭಿವೃದ್ಧಿ ಇದೆ.
ಕರ್ಕ: ಸಂಬಂಧದಲ್ಲಿ ಬಿರುಕುಗಳು ಕಂಡು ಬಂದು ಏರುಪೇರಾಗಬಹುದು. ಆದರಿದು ತಾತ್ಕಾಲಿಕ ಸ್ಥಿತಿ. ಶೀಘ್ರದಲ್ಲೇ ಎಲ್ಲವೂ ಸರಿಹೋಗಲಿದೆ. ತಾಳ್ಮೆಯನ್ನು ಕಳೆದುಕೊಳ್ಳದಿರಿ. ಗುರಿಯತ್ತ ನಿಮ್ಮ ದೃಷ್ಟಿ ಇರಲಿ.
ಸಿಂಹ: ನೀವು ಎದುರಿಸಿದಷ್ಟು ಕಷ್ಟ ಕೋಟಲೆ ಇನ್ನಾರೂ ಅನುಭವಿಸಲಿಕ್ಕಿಲ್ಲ. ಆದರೂ ಧೃತಿಗೆಡದೆ ಮುನ್ನಡೆಯುತ್ತಾ ಹೆಜ್ಜೆ ಹಾಕಿರಿ. ನಿಧಾನವಾದರೂ ವಿಧಿಯು ನಿಮ್ಮನ್ನು ಮುನ್ನಡೆಸಲಿದೆ. ಧೈರ್ಯಂ ಸರ್ವತ್ರ ಸಾಧನಂ.
ಕನ್ಯಾ: ಈ ದಿನವು ಅಷ್ಟೇನೂ ಉತ್ತಮ ವಾಗಿರುವುದಿಲ್ಲ. ಹತಾಶೆ ಉಂಟಾಗಲಿದೆ. ಆದರೆ ಅದಕ್ಕೆ ಕಾರಣ ಎಂಬುದು ಇರುವುದಿಲ್ಲ. ಇದರಿಂದ ನಿಮಗೇನೂ ಹಾನಿಯಾಗದು. ಒಳ್ಳೆಯ ಸ್ವಾಭಿಮಾನಿ ಜೀವನ ನಿಮ್ಮದು.
ತುಲಾ: ಮೋಜು ಮಸ್ತಿಗೆ ಸೂಕ್ತ ದಿನವಲ್ಲ. ಸಂತೋಷ ಕೂಟ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ. ಕೌಟುಂಬಿಕವಾಗಿ ಉದ್ವಿಗ್ನತೆ ಹಾಗೂ ಕೋಪತಾಪ ಹೆಚ್ಚುವುದು. ಧೃತಿಗೆಡದಿರಿ. ವಾಗ್ವಾದಕ್ಕೆ ಇಳಿಯದಿರಿ.
ವೃಶ್ಚಿಕ: ಕಾರ್ಯಕ್ಷೇತ್ರದಲ್ಲಿ ಯಾ ಗೃಹದಲ್ಲಿ ಕೋಲಾಹಲ ಉಂಟಾಗಲಿದೆ. ನಿಯಂತ್ರಣ ಮಾಡಲು ತೊಂದರೆಯಾದೀತು. ಸಹನೆ ಇರಲಿ. ಮನೆಯಲ್ಲಿ ಅತಿಥಿಗಳ ಆಗಮನವಿದ್ದೀತು. ಗೃಹ ನಿರ್ಮಾಣದಲ್ಲಿ ವಿಳಂಬವಾದೀತು.
ಧನು: ಐಶಾರಾಮಿ ಜೀವನಕ್ಕೆ ಹೋಗಬೇಡಿರಿ. ಇದರಿಂದ ಚಿಂತೆ ಹಾಗೂ ಕಷ್ಟ ಹೆಚ್ಚಾದೀತು. ಅನಾವಶ್ಯಕ ಪ್ರಯಾಣದಿಂದ ಖರ್ಚು ಅಧಿಕವಾಗಲಿದೆ. ಶಾಪಿಂಗ್‌ಮಾಲ್‌ಗೆ ಹೋಗದಿದ್ದರೆ ಉತ್ತಮ. ಖರ್ಚು ನಿಭಾಯಿಸಿರಿ.
ಮಕರ: ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯವಿದೆ. ಚಾಲನೆಯಲ್ಲಿ ಜಾಗ್ರತೆ ಮಾಡಿರಿ. ಎಲೆಕ್ಟ್ರಿಕ್ ವಸ್ತುಗಳಿಂದ ದೂರವಿರಿ. ಅವಘಡ ಸಂಭವಿಸೀತು. ಮಕ್ಕಳ ವಿದ್ಯಾಭ್ಯಾಸದ ಕುರಿತು ಚಿಂತೆ ತರಲಿದೆ.
ಕುಂಭ: ನಿಮ್ಮ ಸುತ್ತಲಿನವರು ಹೊಣೆಗೇಡಿಯಾಗಿ ವರ್ತಿಸಬಹುದು. ಇದರಿಂದ ನಿಮಗೆ ಕಿರಿಕಿರಿ ಎನಿಸಲಿದೆ. ಸಂಘರ್ಷಕ್ಕೆ ಇಳಿಯದಿರಿ. ನಿಮ್ಮ ಮೈಮೇಲೆ ಹಾರಿಯಾರು. ಆರೋಗ್ಯದಲ್ಲಿ ಉತ್ತಮ ಸುಧಾರಣೆ ಇದೆ.
ಮೀನ: ಕಚೇರಿ ಕಾರ್ಯದಲ್ಲಿ ವಿಳಂಬಗತಿಯು ಅಸಹನೆ ಮೂಡಿಸಲಿದೆ. ನೀವು ಎಚ್ಚರ ವಹಿಸದಿದ್ದಲ್ಲಿ ಖರ್ಚುವೆಚ್ಚ ಮಿತಿ ಮೀರಬಹುದು. ಅದಕ್ಕೆ ಕಡಿವಾಣ ಹಾಕಿರಿ. ಅತೀ ಸ್ನೇಹ ಅತೀ ಸಲುಗೆ ನಿಮಗೆ ಕಷ್ಟ ತರಲಿದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.