ಸಾರಿಗೆ ನೌಕರರಿಗೆ ಅರ್ಧದಷ್ಟೇ ವೇತನ : ತರಬೇತಿ ಅವಧಿ ಸಿಬ್ಬಂದಿಗೆ 4 ಸಾವಿರಕ್ಕೂ ಕಡಿಮೆ ಸಂಬಳ
Team Udayavani, Jan 18, 2021, 12:55 PM IST
ಹುಬ್ಬಳ್ಳಿ: ವೇತನ ತಾರತಮ್ಯ ವಿರೋಧಿಸಿ ಸಾರಿಗೆ ಸೇವೆ ಸ್ಥಗಿತಗೊಳಿಸಿ ಹೋರಾಟಕ್ಕಿಳಿದಿದ್ದ ಸಾರಿಗೆ ನೌಕರರು ಇದೀಗ ಅರ್ಧ ವೇತನ ಪಡೆಯುವಂತಹ ಸ್ಥಿತಿಗೆ ಬಂದು ತಲುಪಿದ್ದಾರೆ. ಸರಕಾರ ಮಾತು ತಪ್ಪಿದ ಹಿನ್ನೆಲೆಯಲ್ಲಿ ತರಬೇತಿ ಸಿಬ್ಬಂದಿ ಇದೀಗ ಕೇವಲ 4 ಸಾವಿರ ರೂ.ಗೂ ಕಡಿಮೆ ಪಡೆಯುವಂತಾಗಿದ್ದು, ಇಷ್ಟರಲ್ಲಿ ಜೀವನ ನಡೆಸುವುದಾದರೂ ಹೇಗೆ ಎನ್ನುವ ಪ್ರಶ್ನೆ ನೌಕರರದ್ದಾಗಿದೆ.
ಕೋವಿಡ್-19 ಪರಿಣಾಮ ಸಾರಿಗೆ ಸಂಸ್ಥೆಗಳಿಗೆ ಇಂಧನ, ಇನ್ನಿತರೆ ಖರ್ಚುಗಳನ್ನು ನಿರ್ವಹಿಸುವುದು ದುಸ್ತರವಾಗಿದ್ದ ಸಂದರ್ಭದಲ್ಲಿ ಸರಕಾರ ದೊಡ್ಡ ಮನಸ್ಸು ಮಾಡಿ ಮುಂದಿನ ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ರಿಯಾಯಿತಿ ಬಸ್ ಪಾಸ್‌ಗಳಿಗೆ ಸರಕಾರ ತನ್ನ ವಂತಿಗೆಯನ್ನು ಮುಂಗಡವಾಗಿ ನೀಡಿ ವೇತನಕ್ಕೆ ಪಾವತಿಗೆ ನೆರವಾಗಿತ್ತು. 2020 ಡಿಸೆಂಬರ್ ತಿಂಗಳ
ಅಂತ್ಯದವರೆಗೂ ಶೇ.50 ವೇತನ ನೀಡುವುದಾಗಿ ಭರವಸೆ ನೀಡಿತ್ತಾದರೂ ಅದು ಸಾಧ್ಯವಾಗಿಲ್ಲ.
ನಾಲ್ಕು ಸಾವಿರ ರೂ.ಗೂ ಕಡಿಮೆ: ಕೆಎಸ್‌ಆರ್ ಟಿಎಸ್ ಲೆಕ್ಕಪತ್ರ ಶಾಖೆಯ ಸೂಚನೆಯ ಮೇರೆಗೆ ಪ್ರತಿಯೊಬ್ಬರಿಗೂ ನಿವ್ವಳ ವೇತನದ ಅರ್ಧದಷ್ಟು ಮಾತ್ರ ವೇತನ ಪಾವತಿಸಲಾಗಿದೆ. ಆದರೆ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿರುವ ಸುಮಾರು 10 ಸಾವಿರಕ್ಕೂ ಹೆಚ್ಚು ನೌಕರರು ತರಬೇತಿ ಅವ ಧಿಯಲ್ಲಿದ್ದು, ಇವರಿಗೆ 9500 ರೂ. ಗೌರವಧನ ನೀಡಲಾಗುತ್ತದೆ.
ಇದನ್ನೂ ಓದಿ:ಪಾಕಿಸ್ತಾನ ಸಿಂಧ್ ಪ್ರಾಂತ್ಯ; ಸ್ವಾತಂತ್ರ್ಯ ಪರ ರಾಲಿಯಲ್ಲಿ ಪ್ರಧಾನಿ ಮೋದಿ ಪೋಸ್ಟರ್!
ಇವರಿಗೂ ಕೂಡ ಅರ್ಧದಷ್ಟು ವೇತನ ಪಾವತಿಸಿದ್ದು, ಎಲ್‌ಐಸಿ ಶಿಸ್ತು ಪ್ರಕರಣಗಳಲ್ಲಿ ವೇತನ ಕಡಿತಗೊಂಡರೆ ಕಡಿತಗೊಂಡು 3 ಸಾವಿರ ರೂ. ಕಡಿಮೆ ವೇತನ ಪಡೆದವರು ಇದ್ದಾರೆ.
3-4 ಸಾವಿರ ರೂ. ವೇತನದಲ್ಲಿ ಮನೆ ಬಾಡಿಗೆ ಕೊಡಲು ಸಾಧ್ಯವಿಲ್ಲ. ಮಡದಿ, ಮಕ್ಕಳ ಹೊಟ್ಟೆಗೆ ಹಿಟ್ಟಿನ ಗತಿ ಏನು? ಎನ್ನುವ ಚಿಂತೆ ನೌಕರರಲ್ಲಿ ಮೂಡಿದೆ. ಈ ಸಂಕಷ್ಟ ಇನ್ನೆಷ್ಟು ತಿಂಗಳು ಮುಂದುವರಿಯಲಿದೆ ಎನ್ನುವ ಆತಂಕವೂ ಶುರುವಾಗಿದೆ.
ಸರಕಾರ ಮಾತು ತಪ್ಪಿತೆ?: 2020 ಸೆಪ್ಟಂಬರ್ ತಿಂಗಳಾಂತ್ಯಕ್ಕೆ ಸಾರಿಗೆ ಆದಾಯ ಸಹಜ ಸ್ಥಿತಿಗೆ ಆಗಮಿಸದ ಹಿನ್ನೆಲೆಯಲ್ಲಿ ಸರಕಾರ ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳಿಗೆ ಶೇ.50 ರಷ್ಟು ವೇತನ ಸರಕಾರದಿಂದ ನೀಡಲಾಗುವುದು ಎಂದು ಭರವಸೆ ನೀಡಿತ್ತು. ನಾಲ್ಕು ಸಂಸ್ಥೆಗಳಿಗೆ ಪ್ರತಿ ತಿಂಗಳು ವೇತನಕ್ಕೆ ಬೇಕಾಗುವ 364 ಕೋಟಿ ರೂ. ಶೇ.50 ನೀಡುವುದಾಗಿ ಘೋಷಣೆ ಮಾಡಿತ್ತು. ಸಾರಿಗೆ ಸಂಸ್ಥೆಗಳ ಆದಾಯ ಸಹಜ ಸ್ಥಿತಿಗೆ ಬರುತ್ತಿದ್ದು, ನೀವೇ ವೇತನ ಪಾವತಿ ಮಾಡಿ ಎಂದು ಕೈ ಎತ್ತಿದೆ. ಡಿಸೆಂಬರ್ ತಿಂಗಳಿಗೂ ಅರ್ಧದಷ್ಟು ವೇತನ ನೀಡುವುದಾಗಿ ಮಾತು ನೀಡಿದ್ದ ಸರಕಾರ ಮಾತು ತಪ್ಪಿದೆ ಎನ್ನುವುದು ಸಾರಿಗೆ ನೌಕರರ
ಅಸಮಾಧಾನವಾಗಿದೆ. ತರಬೇತಿ ನೌಕರರ ಸಂಕಷ್ಟ ಒಂದೆಡೆಯಾದರೆ ಇನ್ನೂ ಸಣ್ಣ ವೇತನದವರು ಬ್ಯಾಂಕ್ ಸಾಲ, ಮನೆ ಬಾಡಿಗೆ, ಮಕ್ಕಳ ಓದಿನ ಖರ್ಚು, ಕುಟುಂಬ ನಿರ್ವಹಣೆ, ಆರೋಗ್ಯ ಸೇರಿದಂತೆ ಇನ್ನಿತರೆ ಖರ್ಚು ವೆಚ್ಚ ಹೇಗೆ ಎಂದು ತಲೆ ಮೇಲೆ ಕೈಹೊತ್ತುಕೊಳ್ಳುವಂತಾಗಿದೆ.
ಇನ್ನಷ್ಟು ತಿಂಗಳು ಇದೇ ಪರಿಸ್ಥಿತಿ ಮುಂದುವರಿದರೆ ಖಾಸಗಿದಾರರ ಬಳಿ ಸಾಲ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎನ್ನುತ್ತಾರೆ ಸಂಸ್ಥೆ ನೌಕರರು. ಕನಿಷ್ಠ ಮಾರ್ಚ್ ತಿಂಗಳವರೆಗಾದರೂ ವೇತನಕ್ಕೆ ಆರ್ಥಿಕ ನೆರವು ನೀಡಬೇಕು ಎನ್ನುವುದು ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಬೇಡಿಕೆಯಾಗಿದೆ. ಆದರೆ ಡಿಸೆಂಬರ್ ಅಂತ್ಯಕ್ಕೆ ಸಾರಿಗೆ ಆದಾಯ ಉತ್ತಮವಾಗಿದ್ದು, ನೀವೇ ಪಾವತಿಸಿಕೊಳ್ಳಿ ಎಂದು ಹಣಕಾಸು ಇಲಾಖೆ ಸಾರಿಗೆ ಸಂಸ್ಥೆಯ ಕಡತ ಮರಳಿಸಿದೆ ಎನ್ನಲಾಗಿದೆ.
– ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
CT Ravi case:ಬೆಳಗಾವಿ ಕೋರ್ಟ್ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ
Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
Mangaluru: ಕೊಕ್ಕಡದ ʼಸಾಂತಾ ಕ್ಲಾಸ್ʼ ವಿನ್ಸೆಂಟ್ ಕ್ರಿಸ್ಮಸ್ ತಿರುಗಾಟಕ್ಕೆ 25 ವರ್ಷ!
Bantwal: ಪುರಸಭೆ ಆಸ್ತಿ ರಕ್ಷಣೆಗೆ ಸದಸ್ಯರ ಆಗ್ರಹ
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Akhila Bharata Kannada Sahitya Sammelana: ಹಚ್ಚೇವು ಕನ್ನಡದ ದೀಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.