ಚಿಕ್ಕಬಳ್ಳಾಪುರ : ದ್ವಿತೀಯ ಹಂತದ ಕೋವಿಡ್ ಲಸಿಕೆ ಅಭಿಯಾನ ಆರಂಭ- 2358 ಫಲಾನುಭವಿಗಳಿಗೆ
Team Udayavani, Jan 18, 2021, 11:01 PM IST
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ ಕೋವಿಡ್ ಲಸಿಕಾ ಅಭಿಯಾನ ಯಶಸ್ವಿಯಾದ ಬಳಿಕ ಸೋಮವಾರದಿಂದ ದ್ವಿತೀಯ ಹಂತದ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು ಜಿಲ್ಲಾದ್ಯಂತ 37 ಕೇಂದ್ರಗಳಲ್ಲಿ 2951 ಫಲಾನುಭವಿಗಳಿಗೆ ಲಸಿಕೆ ನೀಡುವ ಗುರಿ ನಿಗಧಿಗೊಳಿಸಲಾಗಿದ್ದು ಈ ಪೈಕಿ ಜಿಲ್ಲಾದ್ಯಂತ 2358 ಫಲಾನುಭವಿಗಳಿಗೆ ಲಸಿಕೆಯನ್ನು ನೀಡಿ ಶೇಕಡ 79.91% ಸಾಧನೆ ಮಾಡಲಾಗಿದೆ.
ಮೊದಲನೇ ಹಂತದಲ್ಲಿ ಜಿಲ್ಲೆಯಲ್ಲಿ ಒಟ್ಟು 511 ಫಲಾನುಭವಿಗಳಿಗೆ ಲಸಿಕೆ ಹಾಕಲಾಗಿದ್ದು ದ್ವಿತೀಯ ಹಂತದಲ್ಲಿ ಜಿಲ್ಲೆಯ ಬಾಗೇಪಲ್ಲಿಯಲ್ಲಿ 7 ಕೇಂದ್ರಗಳಲ್ಲಿ 337 ಫಲಾನುಭವಿಗಳಿಗೆ, ಚಿಕ್ಕಬಳ್ಳಾಪುರದಲ್ಲಿ 7 ಕೇಂದ್ರಗಳಲ್ಲಿ 495 ಫಲಾನುಭವಿಗಳು, ಚಿಂತಾಮಣಿಯಲ್ಲಿ 6 ಕೇಂದ್ರ 357 ಫಲಾನುಭವಿಗಳು, ಗೌರಿಬಿದನೂರು 8 ಕೇಂದ್ರ 425 ಫಲಾನುಭವಿಗಳು, ಗುಡಿಬಂಡೆಯಲ್ಲಿ 3 ಕೇಂದ್ರ 346 ಫಲಾನುಭವಿಗಳು, ಶಿಡ್ಲಘಟ್ಟದಲ್ಲಿ 6 ಕೇಂದ್ರ 398 ಫಲಾನುಭವಿಗಳು ಸೇರಿದಂತೆ ಜಿಲ್ಲಾದ್ಯಂತ 2358 ಫಲಾನುಭವಿಗಳಿಗೆ ಲಸಿಕೆಯನ್ನು ನೀಡಲಾಗಿದೆ.
ಜಿಲ್ಲೆಯ ಗುಡಿಬಂಡೆಯಲ್ಲಿ 130.57%,ಶಿಡ್ಲಘಟ್ಟ 82.57%, ಚಿಕ್ಕಬಳ್ಳಾಪುರ 78.57%,ಗೌರಿಬಿದನೂರು 74.04%,ಚಿಂತಾಮಣಿ 69.86%,ಬಾಗೇಪಲ್ಲಿ 68.92% ರಷ್ಟು ಸಾಧನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.