ಭಾರತದ ಲಸಿಕೆ ರಾಜತಾಂತ್ರಿಕತೆಗೆ ತತ್ತರಿಸುವುದೇ ಚೀನ


Team Udayavani, Jan 19, 2021, 7:02 AM IST

ಭಾರತದ ಲಸಿಕೆ ರಾಜತಾಂತ್ರಿಕತೆಗೆ ತತ್ತರಿಸುವುದೇ ಚೀನ

ಶನಿವಾರದಿಂದ ದೇಶಾದ್ಯಂತ ಲಸಿಕೆ ವಿತರಣೆ ಆರಂಭವಾಗಿದ್ದು, ಜಗತ್ತಿನ ಅತಿದೊಡ್ಡ ಲಸಿಕ ಪ್ರಕ್ರಿಯೆ ಎಂಬ ಗರಿಮೆ ಹೊತ್ತ ಈ ಅಭಿಯಾನವನ್ನು ಜಗತ್ತು ಕುತೂಹಲದಿಂದ ಗಮನಿಸುತ್ತಿದೆ. ಗಮನಾರ್ಹ ಸಂಗತಿ   ಎಂದರೆ, ಕೋವಿಡ್‌ ಆರಂಭದ ಸಮಯದಲ್ಲಿ “ನೆರೆ ರಾಷ್ಟ್ರಗಳಿಗೆ ಆದ್ಯತೆ’ ಎಂಬ ನೀತಿಯಡಿಯಲ್ಲಿ ಭಾರತ ಸುತ್ತಲಿನ ಅನೇಕ ರಾಷ್ಟ್ರಗಳಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡಿತ್ತು. ಈಗ ಭಾರತ್‌ ಬಯೋಟೆಕ್‌ ಅಭಿವೃದ್ಧಿ ಪಡಿಸಿರುವ ಕೊವ್ಯಾಕ್ಸಿನ್‌ ಹಾಗೂ ಸೀರಂ ಇನ್‌ಸ್ಟಿಟ್ಯೂಟ್‌ ಉತ್ಪಾದಿಸುತ್ತಿರುವ ಕೊವಿಶೀಲ್ಡ್‌ನ ಬಳಕೆಗೂ ಅನೇಕ ರಾಷ್ಟ್ರಗಳು ಇಚ್ಛೆ ವ್ಯಕ್ತಪಡಿಸುತ್ತಿದ್ದು, ಮುಂದಿನ ಕೆಲವೇ ವಾರಗಳಲ್ಲಿ ಭಾರತ ಅವುಗಳಿಗೆಲ್ಲ ಲಸಿಕೆ ಪೂರೈಸಲು ಸಿದ್ಧತೆ ನಡೆಸಿದೆ. ಭಾರತದ ಈ “ವ್ಯಾಕ್ಸಿನ್‌ ಡಿಪ್ಲೊಮಸಿ’ ಹೆಸರು ಕೆಡಿಸಿಕೊಂಡಿರುವ ಚೀನಕ್ಕೆ ಭಾರೀ ಮುಖಭಂಗ ಉಂಟುಮಾಡುತ್ತಿದೆ ಎನ್ನುತ್ತಿದ್ದಾರೆ ಪರಿಣತರು…

ಮುಂದಿನ ಕೆಲವೇ ವಾರಗಳಲ್ಲಿ… :

ಮುಂದಿನ ಕೆಲವೇ ವಾರಗಳಲ್ಲಿ ಭಾರತವು ಕೋವಿಡ್‌ ಲಸಿಕೆಯ ಲಕ್ಷಾಂತರ ಡೋಸ್‌ಗಳನ್ನು ನೇಪಾಲ, ಭೂತಾನ್‌, ಬಾಂಗ್ಲಾದೇಶ, ಮ್ಯಾನ್ಮಾರ್‌, ಶ್ರೀಲಂಕಾ, ಆಫ್ಘಾನಿಸ್ಥಾನ, ಮಾಲ್ಡೀವ್ಸ್‌ ಮತ್ತು ಮಾರಿಶಷ್‌ಗೆ ಕಳುಹಿಸಿಕೊಡಲು ಸಜ್ಜಾಗುತ್ತಿದೆ (ಈ ಪಟ್ಟಿಯಲ್ಲಿ ಪಾಕಿಸ್ಥಾನವಿಲ್ಲ). ಗಮನಾರ್ಹ ಸಂಗತಿಯೆಂದರೆ, ಈ ರಾಷ್ಟ್ರಗಳಿಗೆಲ್ಲ ಮೊದಲ ಹಂತವಾಗಿ ಉಚಿತವಾಗಿ ಲಸಿಕೆಯನ್ನು ಕಳುಹಿಸಿಕೊಡಲಿದ್ದು, ಅನಂತರದ ದಿನಗಳಲ್ಲಿ ಈ ರಾಷ್ಟ್ರಗಳು ಸೀರಂ ಇನ್‌ಸ್ಟಿಟ್ಯೂಟ್‌ ಅಥವಾ ಭಾರತ್‌ ಬಯೋಟೆಕ್‌ಗೆ ಹಣ ಪಾವತಿ ಮಾಡಿ ಖರೀದಿಸಬೇಕಾಗುತ್ತದೆ. ಕಳೆದ ಕೆಲವು ತಿಂಗಳಿಂದ ಚೀನದ ತಾಳಕ್ಕೆ ಕುಣಿಯುತ್ತಾ ಭಾರತಕ್ಕೆ ತೊಂದರೆ ಉಂಟುಮಾಡುತ್ತಿದ್ದ ನೇಪಾಲ ಕೂಡ ಈಗ ಲಸಿಕೆ ನಮಗೂ ಕೊಡಿ ಎಂದು ಭಾರತಕ್ಕೆ ವಿನಂತಿಸಿದೆ.

ಪ್ರತ್ಯೇಕ ಒಪ್ಪಂದ :

ದಕ್ಷಿಣ ಕೊರಿಯಾ, ಕತಾರ್‌, ಬಹ್ರೇನ್‌, ಸೌದಿ ಅರೇಬಿಯಾ, ಮೊರಕ್ಕೋ ಮತ್ತು ದಕ್ಷಿಣ ಆಫ್ರಿಕಾ ಸಹ ಭಾರತದಲ್ಲಿ ಉತ್ಪಾದನೆಯಾದ ಲಸಿಕೆಯನ್ನು ಪಡೆಯಲು ಉತ್ಸುಕತೆ ತೋರಿಸುತ್ತಿವೆ. ಇನ್ನೊಂದೆಡೆ ಬಾಂಗ್ಲಾದೇಶ, ಮ್ಯಾನ್ಮಾರ್‌, ಬ್ರೆಜಿಲ್‌ನ ಫಿಯೋಕ್ರಜ್‌ ಸಂಸ್ಥೆ, ಯುಎಇ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ ಪ್ರತ್ಯೇಕವಾಗಿ ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾದ ಜತೆಗೂ ಒಪ್ಪಂದ ಮಾಡಿಕೊಂಡಿವೆ. ಬಾಂಗ್ಲಾದೇಶ 30 ಲಕ್ಷ ಡೋಸ್‌ಗಳ ಖರೀದಿಗಾಗಿ ನವೆಂಬರ್‌ ತಿಂಗಳಲ್ಲೇ ಸೀರಂ  ಇನ್‌ಸ್ಟಿಟ್ಯೂಟ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆದರೆ ಸೀರಂನಿಂದ ಆಮದು ಮಾಡಿಕೊಳ್ಳಲು ಇವು ಭಾರತ ಸರಕಾರದ ಅನುಮತಿ ಪಡೆಯಬೇಕಿರುವುದು ಅಗತ್ಯ. ಈ ನಿರ್ಧಾರವನ್ನು ಲಸಿಕೆ ವಿತರಣೆಯ ಮೇಲಿನ ರಾಷ್ಟ್ರೀಯ ಪರಿಣತ ಪಡೆ(ಎನ್‌ಐಜಿವಿಎಸಿ) ಕೈಗೊಳ್ಳಲಿದೆ. ಭಾರತೀಯರಿಗೆ ಅಗತ್ಯವಿರುವಷ್ಟು ಡೋಸ್‌ಗಳನ್ನು ಖಾತ್ರಿ ಪಡಿಸಿಕೊಂಡ ಮೇಲೆಯೇ ಈ ರಾಷ್ಟ್ರಗಳು ಸೀರಂನಿಂದ ಲಸಿಕೆಗಳನ್ನು ಆಮದು ಮಾಡಿಕೊಳ್ಳಬಹುದು ಎಂದು ಕೇಂದ್ರ ಸ್ಪಷ್ಟಪಡಿಸಿದೆ.

ಸಂಕಷ್ಟ ಹೆಚ್ಚಾದಾಗ ಸ್ನೇಹ  ಹಸ್ತ ಚಾಚಿತ್ತು ಭಾರತ  :

ಕೋವಿಡ್‌-19 ಹಾವಳಿ ಆರಂಭವಾದಾಗ, ಐರೋಪ್ಯ ರಾಷ್ಟ್ರಗಳೆಲ್ಲ ಇಟಲಿಯ ಕೈಬಿಟ್ಟು, ಆ ದೇಶವನ್ನು ಕಂಗೆಡುವಂತೆ ಮಾಡಿದ್ದವು. ಆದರೆ, ಇತ್ತ ಭಾರತ ಮಾತ್ರ ಬಿಕ್ಕಟ್ಟಿನ ನಡುವೆಯೂ ಅಫ್ಘಾನಿಸ್ಥಾನ, ಬಾಂಗ್ಲಾದೇಶ, ಭೂತಾನ್‌, ನೇಪಾಲ, ಮಾಲ್ಡೀವ್ಸ್‌, ಶ್ರೀಲಂಕಾ, ಸೀಚೆಲ್ಸ್‌ನಂಥ ಪುಟ್ಟರಾಷ್ಟ್ರಗಳಿಗೆ ಹೈಡ್ರಾಕ್ಸಿ ಕ್ಲೊರೊಕ್ವಿನ್‌ ಮಾತ್ರೆಗಳಿಂದ ಹಿಡಿದು, ಕೈಗವಸು, ಬಾಡಿ ಬ್ಯಾಗ್‌ಗಳು, ಸಿರಿಂಜ್‌ಗಳು, ಡೀಫಿಬ್ರಿಲೇಟರ್‌ಗಳನ್ನು ಕಳುಹಿಸಿ ಜವಾಬ್ದಾರಿ ಮೆರೆಯಿತು. ಇದಷ್ಟೇ ಅಲ್ಲದೇ ಭಾರತ, ಮಾಲ್ಡೀವ್ಸ್‌, ಶ್ರೀಲಂಕಾಕ್ಕೆ  ಕ್ಷಿಪ್ರ ಪ್ರತಿಕ್ರಿಯೆ ತಂಡ (ಆರ್‌ಆರ್‌ಟಿಯ)ದ ವೈದ್ಯರು, ನರ್ಸ್‌ಗಳು ಮತ್ತು ಪ್ಯಾರಾಮೆಡಿಕ್ಸ್‌ಗಳನ್ನು ಕಳುಹಿಸಿಕೊಟ್ಟು ಆ ರಾಷ್ಟ್ರಕ್ಕೆ ಟೆಸ್ಟಿಂಗ್‌ ಪ್ರಯೋಗಾಲಯ ಸ್ಥಾಪಿಸಲು, ವೈದ್ಯರಿಗೆ ತರಬೇತಿ ನೀಡಲು ಸಹಕರಿಸಿತು. ಇನ್ನು ಬ್ರೆಜಿಲ್‌, ಬ್ರಿಟನ್‌ ಹಾಗೂ ಅಮೆರಿಕಕ್ಕೂ ಹೈಡ್ರಾಕ್ಸಿ ಕ್ಲೊರೊಕ್ವಿನ್‌ ಮಾತ್ರೆಗಳನ್ನು ಕಳುಹಿಸಿಕೊಟ್ಟಿತು. ಈ ಎಲ್ಲ ಅಂಶಗಳೂ ಭಾರತದೆಡೆಗೆ ಅನ್ಯ ರಾಷ್ಟ್ರಗಳ ಮೈತ್ರಿ ಮತ್ತಷ್ಟು ಬಲಿಷ್ಠವಾಗುವುದಕ್ಕೆ ಖಂಡಿತ ಕಾರಣವಾಗಲಿದೆ ಎನ್ನುತ್ತಾರೆ ಪರಿಣತರು.

ಚೀನ ಲಸಿಕೆಯ ರಾಜತಾಂತ್ರಿಕತೆ :

ಚೀನ ಈಗಾಗಲೇ ಮಲೇಷ್ಯಾ, ಫಿಲಿಪ್ಪೀನ್ಸ್‌, ಟರ್ಕಿ, ಬ್ರೆಜಿಲ್‌, ಮೆಕ್ಸಿಕೋಗೆ ಲಕ್ಷಾಂತರ ಡೋಸ್‌ಗಳನ್ನು ನೀಡುವ ಭರವಸೆ ನೀಡಿದೆಯಾದರೂ, ಈಗ ಅದರ ಲಸಿಕೆಯ ಮೇಲೆ ಅನುಮಾನಗಳು ಹೆಚ್ಚಾಗಲಾರಂಭಿಸಿದ್ದೇ, ಈ ರಾಷ್ಟ್ರಗಳೆಲ್ಲ ಭಾರತದತ್ತ ನೋಡಲಾರಂಭಿಸಿವೆ. ಒಂದೆಡೆ ಭಾರತದ ಲಸಿಕೆಗಳಿಗೆ ಅನ್ಯ ರಾಷ್ಟ್ರಗಳು ತಾವಾಗಿಯೇ ಬೇಡಿಕೆ ಇಡುತ್ತಿದ್ದರೆ, ಇನ್ನೊಂದೆಡೆ ಚೀನ ಮಾತ್ರ ತನ್ನ ರಾಯಭಾರಿಗಳನ್ನು ಅನ್ಯ ರಾಷ್ಟ್ರಗಳಿಗೆ ಕಳುಹಿಸಿ, ಲಸಿಕೆ ಖರೀದಿಸಬೇಕೆಂದು ಮನವೊಲಿಸುತ್ತಿದೆ! ಇತ್ತೀಚೆಗಷ್ಟೇ ಚೀನದ ವಿದೇಶಾಂಗ ಸಚಿವ ವ್ಯಾಂಗ್‌ ಯೀ, ಮ್ಯಾನ್ಮಾರ್‌, ಇಂಡೋನೇಷ್ಯಾ ಮತ್ತು ಬ್ರೂನೈಗೆ ತೆರಳಿ ತಮ್ಮ ಲಸಿಕೆ ಖರೀದಿಸಬೇಕೆಂದು ಮಾತುಕತೆ ನಡೆಸಿ ಬಂದಿದ್ದಾರೆ. ಚೀನದ ಅತ್ಯಾಪ್ತ ರಾಷ್ಟ್ರವಾದ ಕಾಂಬೋಡಿಯಾ ಕೂಡ ಚೀನಿ ಲಸಿಕೆಯಿಂದ ದೂರ ಉಳಿಯಲು ಯೋಚಿಸುತ್ತಿದೆ!

ಚೀನಿ ಲಸಿಕೆ ಕೇವಲ 50 ಪ್ರತಿಶತ ಪರಿಣಾಮಕಾರಿ? :

ಕ್ಲಿನಿಕಲ್‌ ಟ್ರಯಲ್‌ಗಳ ವಿಚಾರದಲ್ಲಿ ಚೀನ ಕಾಯ್ದುಕೊಂಡು ಬಂದ ರಹಸ್ಯದಿಂದಾಗಿ ಅದನ್ನು ಅನುಮಾನದಿಂದಲೇ ನೋಡುವಂತಾಗಿದೆ. ಚೀನ ತನ್ನ ಲಸಿಕೆ 90 ಪ್ರತಿಶತಕ್ಕೂ ಹೆಚ್ಚು ಪರಿಣಾಮಕಾರಿ ಎನ್ನುತ್ತದಾದರೂ ಇತ್ತೀಚೆಗೆ ಬ್ರೆಜಿಲ್‌ನಲ್ಲಿ ನಡೆದ ಅಧ್ಯಯನವೊಂದು ಚೀನದ ಸೈನೋವ್ಯಾಕ್‌ ಲಸಿಕೆ ಕೇವಲ 50.4 ಪ್ರತಿಶತ ಪರಿಣಾಮಕಾರಿ ಎಂದಿದೆ! ಅದಷ್ಟೇ ಅಲ್ಲದೇ, ಬ್ರಿಟನ್‌, ಇಂಡೋನೇಷ್ಯಾದಲ್ಲಿ ಪ್ರಕಟವಾದ ಇತ್ತೀಚಿನ ವರದಿಗಳೂ ಚೀನದ ಲಸಿಕೆಯ ಮೇಲೆ ಅಪನಂಬಿಕೆ ವ್ಯಕ್ತಪಡಿಸುತ್ತಿದ್ದರೆ, ಪಾಕಿಸ್ಥಾನ ಮಾತ್ರ ಚೀನದ ಸಿನೋ

ಫಾರ್ಮ್ ಲಸಿಕೆಯ 12 ಲಕ್ಷ ಡೋಸ್‌ಗಳಿಗೆ ಆರ್ಡರ್‌ ಮಾಡಿದೆ. ಇನ್ನು ಚೀನದ ವಿವಿಧ ಸಂಸ್ಥೆಗಳು ಅಭಿವೃದ್ಧಿಪಡಿಸುತ್ತಿರುವ ಲಸಿಕೆಗಳ ಮೂರನೇ ಹಂತದ ಪ್ರಯೋಗವನ್ನೂ ತನ್ನ ಪ್ರಜೆಗಳ ಮೇಲೆ ನಡೆಸುತ್ತಿದೆ ಪಾಕಿಸ್ಥಾನ!

ಕಳಪೆ ಕಿಟ್‌ ನೀಡಿ ಮುಖ ಕೆಡಿಸಿಕೊಂಡ ಚೀನ :

ಒಂದೆಡೆ ಪಾಶ್ಚಿಮಾತ್ಯ ರಾಷ್ಟ್ರಗಳ ದುಬಾರಿ ಲಸಿಕೆಯನ್ನು ಎಲ್ಲಾ ರಾಷ್ಟ್ರಗಳಿಗೂ ಖರೀದಿಸುವುದು ಕಷ್ಟದ ಕೆಲಸವಾಗಲಿದೆ. ಅದರಲ್ಲೂ ತೃತೀಯ ಜಗತ್ತಿನ ರಾಷ್ಟ್ರಗಳಿಗೆ ಇದು ಕನಸಿನ ಮಾತೇ ಸರಿ. ಈ ಕಾರಣಕ್ಕಾಗಿಯೇ, ಏಷ್ಯಾ, ಆಫ್ರಿಕಾ ಸೇರಿದಂತೆ ವಿವಿಧ ಖಂಡಗಳ ಚಿಕ್ಕ ರಾಷ್ಟ್ರಗಳು ಪರ್ಯಾಯಗಳಿಗಾಗಿ ಕಾದು ಕುಳಿತಿವೆ. ಜಗತ್ತಿಗೆ ಕೋವಿಡ್‌ ಪಿಡುಗನ್ನು ಪಸರಿಸಿ, ವರ್ಚಸ್ಸು ಕೆಡಿಸಿಕೊಂಡಿರುವ ಚೀನ ಈ ಅವಕಾಶವನ್ನು ಬಳಸಿಕೊಂಡು ಮುಖ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆಯಾದರೂ, ಅದರ ಮೇಲೆ ಸೃಷ್ಟಿಯಾಗಿರುವ ಅಪನಂಬಿಕೆಯು ಈ ರಾಷ್ಟ್ರಗಳು ಹಿಂದೇಟು ಹಾಕುವಂತೆ ಮಾಡುತ್ತಿದೆ. ಕೋವಿಡ್‌ ಆರಂಭಿಕ ಸಮಯದಲ್ಲಿ ಏಷ್ಯನ್‌ ಹಾಗೂ ಐರೋಪ್ಯ ರಾಷ್ಟ್ರಗಳಿಗೆ ಚೀನ ಮಾರಿದ ಮಾಸ್ಕ್, ಗ್ಲೌಸ್‌, ಪರೀಕ್ಷೆ ಕಿಟ್‌ ಹಾಗೂ ಪಿಪಿಇ ಕಿಟ್‌ಗಳು ಕಳಪೆ ಗುಣಮಟ್ಟ ಹೊಂದಿದ್ದ ವಿಚಾರವನ್ನು ಯಾವ ರಾಷ್ಟ್ರಗಳೂ ಮರೆತಿಲ್ಲ. ಈ ಕಾರಣಕ್ಕಾಗಿಯೇ, ಚೀನ ಅಭಿವೃದ್ಧಿಪಡಿಸಿರುವ ಲಸಿಕೆಯ ಮೇಲೂ ಬಹುತೇಕ ರಾಷ್ಟ್ರಗಳಿಗೆ ನಂಬಿಕೆ ಬರುತ್ತಿಲ್ಲ. ಒಂದೆಡೆ ಕೋವಿಡ್‌ ಸಂಕಷ್ಟದ ಸಮಯದಲ್ಲಿ ಭಾರತ ದೊಡ್ಡತನ ಮೆರೆಯುತ್ತಾ ಹೋದರೆ, ಚೀನ ಈ ಸಂಕಷ್ಟದ ದುರ್ಲಾಭ ಪಡೆಯಲು ಹೋಗಿ ಈಗ ಮುಗ್ಗರಿಸುವಂತಾಗಿದೆ!

 

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.