ನೀನೂ ಇದ್ದೀಯ, ದಂಡಕ್ಕೆ… ಅವರನ್ನು ನೋಡಿ ಕಲೀಬಾರ್ದಾ?


Team Udayavani, Jan 19, 2021, 4:29 PM IST

ನೀನೂ ಇದ್ದೀಯ, ದಂಡಕ್ಕೆ… ಅವರನ್ನು ನೋಡಿ ಕಲೀಬಾರ್ದಾ?

“ಅವನು ನೋಡು ಎಷ್ಟು ಹುಷಾರಿ, ವೇದಿಕೆಯ ಮೇಲೆ ಪಟಪಟ ಅಂತ ಮಾತಾಡ್ತಾನೆ. ನೀನೂ ಇದ್ದೀಯ.. ಅವಳು ನೋಡು, ಯಾವಾಗ್ಲೂ ರ್‍ಯಾಂಕೇ ಬರೋದು. ನೀನೂ ಇದ್ದೀಯ. ಅವನು ನೋಡು, ಆಟ ಮತ್ತು ಪಾಠದಲ್ಲಿ ಯಾವತ್ತೂ ಮುಂದು. ಇವಳು
ಇದರಲ್ಲಿ ಫಸ್ಟು..ನೀನೂ ಇದ್ದೀಯ…” ಈ “ನೀನೂ ಇದ್ದೀಯ’ ಎನ್ನುವಂತಹ ಅವಮಾನದ ಮೂದಲಿಕೆಗಳನ್ನು ಬಾಲ್ಯದಲ್ಲಿ
ಬಹುತೇಕ ಕೇಳಿಯೇ ಬೆಳೆದಿರುತ್ತೇವೆ. ನಮ್ಮದೇ ಮನೆಗಳಲ್ಲಿ, ಸುತ್ತಮುತ್ತಲಿನ ಮನೆಗಳಲ್ಲಿ ಕೂಡ ಪೋಷಕರು ಇಂಥ ಮಾತುಗಳಿಂದ ಮಕ್ಕಳನ್ನು ಚುಚ್ಚುತ್ತಲೇ ಇರುತ್ತಾರೆ. ಈಗ, ಈ ಕೊರೊನಾ ರಜೆಯ ಸಂದರ್ಭದಲ್ಲಂತೂ ಈ ಬಗೆಯ
ಚುಚ್ಚುಮಾತು ಹಲವು ಪೋಷಕರ ನಿತ್ಯದ ಡೈಲಾಗ್‌ ಆಗಿಹೋಗಿದೆ.

“”ಈ ಲಾಕ್‌ಡೌನ್‌ ರಜೆಯಲ್ಲಿ ಅವನು ಹೊಸದೇನನ್ನೋ ಕಲಿತನಂತೆ, ಅವಳು ಯಾವುದೋ ಕೋರ್ಸ್‌ ಮುಗಿಸಿದಳಂತೆ, ನೀನು
ಮನೆಯಲ್ಲೇ ಇದ್ದೆ. ಏನೂ ಕಲಿಯಲಿಲ್ಲ. ಅವರನ್ನು ನೋಡಿಯಾದರೂ ನೀನು ಕಲಿಯಬಾರದಾ?”- ಹೀಗೆ ಸಾಗುತ್ತದೆ ಮಾತು. ಇಂತಹ ನಕಾರಾತ್ಮಕ ಹೋಲಿಕೆಗಳಿಂದ ಮಕ್ಕಳಿಗೆ ಎಷ್ಟು ಬೇಸರ ಆಗುತ್ತದೆ ಎನ್ನುವ ಅರಿವಿದ್ದೂ ಹೆತ್ತವರು ಹೀಗೆ ಮಾತಾಡಿಬಿಡುತ್ತಾರೆ. ಆ ಕ್ಷಣಕ್ಕೆ ಮುಖ ಸಪ್ಪಗೆ ಮಾಡಿಕೊಂಡ ಮಗುವಿನ ಮನಸ್ಸಿನೊಳಗೆ ಏನಾಗುತ್ತಿರಬಹುದು?
ಮಕ್ಕಳ ಮನಸ್ಸಿಗೆ ನಾವು ಹೊರಗಿನವರಾಗಿ ಕಾಣಬಹುದೇ? ಎಂದು ಆ ಕ್ಷಣಕ್ಕೆ ಯಾರೂ ಯೋಚಿಸುವುದಿಲ್ಲ.
ಮುಂದೊಮ್ಮೆ ಇದೇ ಯೋಚನೆಯಿಂದ ಮಕ್ಕಳು ಡಿಪ್ರಶನ್‌ಗೆ ತುತ್ತಾಗಿದ್ದಾರೆ ಎಂಬ ಸಂಗತಿ ಗೊತ್ತಾದಾಗ ಮಾತ್ರ ಆತಂಕ
ಕಾಡುತ್ತದೆ.

ಜೆರಾಕ್ಸ್ ಆಗಬಾರದು
ಅಷ್ಟಕ್ಕೂ ನಮ್ಮ ಮಕ್ಕಳು ಇನ್ಯಾರಂತೆಯೋ ಇರಬೇಕು, ಅವರಂತೆ ಆಗಬೇಕು ಎನ್ನುವ ನಿರೀಕ್ಷೆಗಳೇ ಬಾಲಿಶವಾದದ್ದು. ಎಲ್ಲರೂ ಅವರಂತೆ ಇವರಂತೆ ಆಗಿಬಿಟ್ಟರೆ, ತಮ್ಮಂತೆ ತಾವಿರುವ, ಸ್ವಂತ ವ್ಯಕ್ತಿತ್ವ ರೂಪಿಸಿಕೊಳ್ಳುವ ಅವಕಾಶವೇ ಇರುವುದಿಲ್ಲವಲ್ಲ? ಹಾಗಿದ್ದರೆ ಮಕ್ಕಳ ಮುಂದೆ ಬೇರೆ ಮಕ್ಕಳನ್ನು ಹೊಗಳುವುದು, ಒಂದು ಆದರ್ಶವನ್ನು ತಲೆಯಲ್ಲಿ ತುಂಬುವುದೇ ತಪ್ಪೇ?
ಎನ್ನುವಂತೆಯೂ ಇಲ್ಲ. ಖಂಡಿತ ಮಕ್ಕಳು ಬೇರೆಯವರನ್ನು ನೋಡಿಯೇ ಕಲಿಯಬೇಕು. ಆದರೆ ತಮ್ಮ ಸ್ವಂತ ದಾರಿಗೆ ಬೇರೆಯವರು ಸ್ಫೂರ್ತಿಯಾಗಬೇಕೇ ಹೊರತು, ಅವರನ್ನೇ ಅನುಸರಿಸುವ ಜೆರಾಕ್ಸ್ ಕಾಪಿ ಆಗಿಬಿಡಬಾರದು.

ಇದನ್ನೂ ಓದಿ:ಕೆರೆ -ದಂಡೆ, ದಂಡೆ -ಕೆರೆ! ನಾವು ಮರೆತ ಹಳೆಯ ಆಟ

ಮಕ್ಕಳ ಭವಿಷ್ಯತ್ತನ್ನು ನಿರ್ಧರಿಸುವುದರಲ್ಲಿ, ನಿರ್ದೇಶಿಸುವುದರಲ್ಲಿ ಹೆತ್ತವರ ಸ್ಥಾನ, ಅದರಲ್ಲೂ ವಿಶೇಷವಾಗಿ ತಾಯಿಯ
ಪಾತ್ರ ದೊಡ್ಡದು. ಯಾವುದೋ ಮಗು ಏನೋ ಮಾಡಿತು ಅಂದ ಕೂಡಲೇ ನಮ್ಮ ಮಗುವನ್ನು ಅಂತಹ ಹವ್ಯಾಸಕ್ಕೆ ಹಚ್ಚಲು ಹೆಣಗಾಡು ವುದು, ಅವರನ್ನು ಅದನ್ನು ಕಲಿಯುವಂತೆ ಬಲವಂತ ಮಾಡುವುದು ಯಾವತ್ತೂ ಒಳ್ಳೆಯದಲ್ಲ. ಬದಲಿಗೆ ನಾವು ನಮ್ಮ ಹವ್ಯಾಸಗಳಿಂದ, ನಡೆ ನುಡಿಯಿಂದ ಅವರನ್ನು ಪ್ರಭಾವಿಸಬಹುದು.

ಬಲವಂತದ ಸ್ನಾನ ಬೇಡ ಹೆತ್ತವರಿಗೆ ಓದುವ ಆಸಕ್ತಿ ಇದೆಯೆಂದ ಮಾತ್ರಕ್ಕೆ ಮಕ್ಕಳೂ ಹಾಗೆಯೇ ಮಾಡಬೇಕು ಎಂದು ಒತ್ತಾಯಿಸುವುದು ತಪ್ಪು. ಬದಲಾಗಿ, ಮಕ್ಕಳ ಕೈಗೆ ತಕ್ಷಣ ಸಿಗುವ ಸ್ಥಳದಲ್ಲಿ ಪುಸ್ತಕವನ್ನು ಇಡಿ. ಅದರಲ್ಲಿ ಇರುವ ಮಹತ್ವದ ಅಂಶದ ಬಗ್ಗೆ ಚುಟುಕಾಗಿ ಹೇಳಿ. ಹಾಗೆಯೇ, ನಿಮಗೆ ಸಂಗೀತ- ಕಲೆಯಲ್ಲಿ ಆಸಕ್ತಿ ಇದ್ದರೆ ಮಗುವೂ ಸಂಗೀತ- ಕಲೆಯನ್ನು ಕಲಿತೇ ತೀರಬೇಕು ಎನ್ನುವ ಹಠ ಬೇಡ. ಆದರೆ ಮಗುವಿನ ಎದುರೇ ಹಾಡಿ, ಅಭ್ಯಾಸ ಮಾಡಿ. ಹೀಗೆ ಮಾಡುವುದರಿಂದ ಮಕ್ಕಳಿಗೂ ಆಸಕ್ತಿ ಹುಟ್ಟಬಹುದು. ಅದು ಸಹಜವಾಗಿ ನಡೆಯುವಂಥ ಪ್ರಕ್ರಿಯೆ. ಹೀಗೆ ಮಾಡುವ ಮೂಲಕ ಅವರಲ್ಲಿ ಆಸಕ್ತಿ ಹುಟ್ಟಿಸಬೇಕೇ ಹೊರತು ಅವರನ್ನು ಬಲವಂತದಿಂದ ಕಲಿಕೆಗೆ ಹಚ್ಚಬಾರದು.

ಯಾವುದೇ ವಿಷಯವನ್ನಾದರೂ ಒತ್ತಾಯದಿಂದ ಕಲಿಸಲು ಹೋದರೆ, ಅವರಿಗಿದ್ದ ಸಹಜ ಆಸಕ್ತಿಯನ್ನೂ ಮಕ್ಕಳು ಕಳೆದುಕೊಳ್ಳುವ ಸಾಧ್ಯತೆಯಿದೆ. ಎಂಜಿನಿಯರ್‌ ಮಕ್ಕಳು ಎಂಜಿನಿಯರ್‌ಗಳೇ ಆಗಬೇಕು, ಡಾಕ್ಟರ್‌ ಮಕ್ಕಳು ಡಾಕ್ಟರ್‌ ಆಗಬೇಕು, ಲಾಯರ್‌ ಮಕ್ಕಳು ಲಾಯರ್‌ಗಳೇ ಆಗಬೇಕು… ಹೀಗೆ, ಮಕ್ಕಳು ಪೋಷಕರ ವೃತ್ತಿಯನ್ನೇ ಅನುಸರಿಸಬೇಕು ಎನ್ನುವುದೂ ಅರ್ಥಹೀನವೇ. ಅವರ ಬದುಕಿನ ಹಾದಿಯನ್ನು, ಅವರದ್ದೇ ಆಸೆ ಆಕಾಂಕ್ಷೆಗಳನ್ನು ಹೆತ್ತವರು ಪ್ರೋತ್ಸಾಹಿಸಬೇಕೇ ವಿನಃ ನಮ್ಮ
ಗತಕಾಲದ ಆಸೆಗಳನ್ನು ಅವರ ಮೇಲೆ ಹೇರುವುದು ಸರಿಯಲ್ಲ.

ಒತ್ತಡ ಹಾಕುವುದು ತಪ್ಪು ಪ್ರತಿಯೊಂದು ಮಗುವೂ ತನ್ನ ರೀತಿಯಲ್ಲಿ ವಿಶೇಷವೇ. ಈ ಸತ್ಯವನ್ನು ಅರ್ಥ ಮಾಡಿಕೊಳ್ಳದೆ,
ಅದನ್ನೇ ಮಾಡು, ಇದನ್ನೇ ಮಾಡು ಎಂದು ಮಕ್ಕಳಿಗೆ ಆರ್ಡರ್‌ ಮಾಡುವುದು, ನಾನು ನನ್ನ ಮಗುವನ್ನು ಹಾಗೆ ಬೆಳೆಸುತ್ತೇನೆ, ಈ
ಆದರ್ಶಗಳನ್ನು ಅವನ(ಳ)ಲ್ಲಿ ತುಂಬುತ್ತೇನೆ ಎನ್ನುವಂಥ ಹೆತ್ತವರ ಬಡಬಡಿಕೆಗಳು ಮಕ್ಕಳ ಬೆಳವಣಿಗೆಗೆ ಉರುಳಾಗಬಲ್ಲವು. “”ನಾನು ನಿನಗಾಗಿ ವಿಪರೀತ ತ್ಯಾಗ ಮಾಡಿದೆ, ತುಂಬಾ ಕಷ್ಟಪಟ್ಟೆ…” ಎಂದೆಲ್ಲಾ ಹೇಳಲು ಹೋದರೆ- ಬೇರೆಯವರು ಮಾಡದೇ ಇರೋದನ್ನೇನೂ ನೀವು ಮಾಡಿಲ್ಲ, ಎಂದು ಮಕ್ಕಳು ಮುಂದೊಂದು ದಿನ ಮುಖಕ್ಕೆ ಹೊಡೆದಂತೆ ಹೇಳಿಬಿಡುತ್ತಾರೆ.

ಇದನ್ನೂ ಓದಿ:ಯೋಗ ನಿರೋಗ : ಸುಖಾಸನ

ಒಂದು ಸಂಗತಿ ಎಲ್ಲಾ ಹೆತ್ತವರಿಗೂ ನೆನಪಲ್ಲಿ ಇರಬೇಕು. ಹೆಚ್ಚಿನ ಸಂದರ್ಭದಲ್ಲಿ ನಮ್ಮ ಬುದ್ಧಿಯನ್ನೇ ಮಕ್ಕಳೂ ಕಲಿಯುತ್ತಾರೆ. ಹಾಗಾಗಿ, ಮಕ್ಕಳು ಒಳ್ಳೆಯ ಬುದ್ಧಿ ಕಲಿಯಲಿ ಎಂದು ಆಸೆಪಡುವ ಪೋಷಕರು ಮೊದಲು ಆ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳು ನಮ್ಮ ಒಳ್ಳೆಯತನಕ್ಕಿಂತ ದೌರ್ಬಲ್ಯಗಳನ್ನೇ ಬೇಗ ಗ್ರಹಿಸುತ್ತಾರೆ. ಅವರ ಎದುರು ಸದಾ ಕಾಲ ಯಾರನ್ನಾದರೂ ತೆಗಳುತ್ತಿದ್ದರೆ, ಒಂದಲ್ಲ ಒಂದು ರಗಳೆ ಮಾಡುತ್ತಿದ್ದರೆ, ಸಣ್ಣತನ ತೋರುತ್ತಿದ್ದರೆ, ಪತಿ-ಪತ್ನಿ ಜಗಳವಾಡುತ್ತಿದ್ದರೆ ಅವರೂ ಅದನ್ನಲ್ಲದೆ ಇನ್ನೇನು ಕಲಿತಾರು? ನಮ್ಮ ಮನಸ್ಸು ವಿಶಾಲವಾಗಿರದ ಹೊರತು, ವಿಶಾಲವಾಗಿ ಯೋಚಿಸದ ಹೊರತು, ಅದು ಅವರಿಗೆ ಬರಲು ಸಾಧ್ಯವಿಲ್ಲ. ಹೆತ್ತವರಾಗಿ ನಾವೇ ಅವರ ತಪ್ಪುಗಳನ್ನು, ದೌರ್ಬಲ್ಯಗಳನ್ನು
ಹೀಯಾಳಿಸಿದರೆ, ಕ್ಷಣಕ್ಷಣಕ್ಕೂ ಅವರ ಅಸಮರ್ಥತೆಯನ್ನು ತೋರಿಸಿಕೊಟ್ಟರೆ ಖನ್ನತೆಗೆ ಒಳಗಾಗದೇ ಇರರು. ಅವರ ದೌರ್ಬಲ್ಯಗಳನ್ನು ತಕ್ಷಣ ಗುರುತಿಸಿ ಅದನ್ನು ತಿದ್ದಿಕೊಳ್ಳುವುದು ಹೇಗೆಂದೂ ಹೇಳಿಕೊಟ್ಟರೆ, ನಮ್ಮ ಮಕ್ಕಳು ಖಂಡಿತ ಯಶಸ್ಸಿನತ್ತ ಹೆಜ್ಜೆ ಹಾಕುತ್ತಾರೆ. ಅವರದೇ ಸ್ವಂತ ವ್ಯಕ್ತಿತ್ವ ಬೆಳೆಸಿಕೊಳ್ಳುತ್ತಾರೆ…

– ಕವಿತಾ ಭಟ್‌

ಟಾಪ್ ನ್ಯೂಸ್

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

ಸಿಎಸ್‌ ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

Ranchi

Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್‌; ಆರೋಪಿ ಸೆರೆಗೆ 3 ತಂಡ ರಚನೆ

Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್‌; ಆರೋಪಿ ಸೆರೆಗೆ 3 ತಂಡ ರಚನೆ

Bomb Threat: ಹೋಟೆಲ್‌, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಸಂದೇಶ

Bomb Threat: ಹೋಟೆಲ್‌, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಸಂದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.