ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಭರ್ಜರಿ 834 ಅಂಕ ಏರಿಕೆ: ನಿಫ್ಟಿ 14,500
ಬಜಾಜ್ ಫಿನ್ ಸರ್ವ್ ಷೇರು ಶೇ. 7 ರಷ್ಟು ಲಾಭ ಕಂಡುಕೊಂಡಿದೆ.
Team Udayavani, Jan 19, 2021, 4:40 PM IST
ಮುಂಬೈ : ಜಾಗತಿಕವಾಗಿ ಷೇರುಪೇಟೆಗಳಲ್ಲಿನ ಸಕಾರಾತ್ಮಕ ಬೆಳವಣಿಗೆಯಿಂದಾಗಿ ಮಂಗಳವಾರ (ಜನವರಿ 19, 2021) ಮುಂಬೈ ಷೇರುಪೇಟೆ ವಹಿವಾಟಿನ ಮೇಲೂ ಭಾರಿ ಪರಿಣಾಮ ಉಂಟುಮಾಡಿದೆ. ಇದರಿಂದ ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಹೆಚ್ಚಿನ ಲಾಭಗಳಿಸಿದೆ.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ(ಬಿಎಸ್ ಇ) 834.02 ಅಂಕಗಳಷ್ಟು ಏರಿಕೆಯೊಂದಿಗೆ 49, 398.29 ಅಂಕಗಳೊಂದಿಗೆ ವಹಿವಾಟು ಮುಕ್ತಾಯಗೊಂಡಿದೆ.
ಇದನ್ನೂ ಓದಿ:ರಾಷ್ಟ್ರ ರಾಜಧಾನಿಯಲ್ಲಿ ಇಂಧನ ಬೆಲೆ ದುಪ್ಪಟ್ಟು, ಮುಂಬೈಯಲ್ಲಿ ಪೆಟ್ರೋಲ್ ಲೀಟರ್ ಗೆ 92ರೂ.
ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 239.85 ಅಂಕಗಳಷ್ಟು ಏರಿಕೆಯೊಂದಿಗೆ 14,521.15 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇಂದಿನ ಭರ್ಜರಿ ಷೇರು ಖರೀದಿ ವಹಿವಾಟಿನಲ್ಲಿ ಬಜಾಜ್ ಫಿನ್ ಸರ್ವ್ ಷೇರು ಶೇ. 7 ರಷ್ಟು ಲಾಭ ಕಂಡುಕೊಂಡಿದೆ. ಇನ್ನುಳಿದಂತೆ ಬಜಾಜ್ ಫೈನಾನ್ಸ್, ಎಚ್ ಡಿಎಫ್ ಸಿ, ಎಲ್ ಆ್ಯಂಡ್ ಟಿ, ಐಸಿಐಸಿಐ ಬ್ಯಾಂಕ್, ಸನ್ ಫಾರ್ಮಾ ಮತ್ತು ಎನ್ ಟಿಪಿಸಿ ಷೇರುಗಳು ಲಾಭ ಗಳಿಸಿದೆ. ಇಂದಿನ ಷೇರು ವಹಿವಾಟಿನಲ್ಲಿ ಟೆಕ್ ಮಹೀಂದ್ರಾ, ಐಟಿಸಿ ಮತ್ತು ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯ ಷೇರುಗಳು ನಷ್ಟ ಅನುಭವಿಸಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.