ಬಸವಣ್ಣ ಜಗತ್ತಿನ ಶ್ರೇಷ್ಠ ಆರ್ಥಿಕ ತಜ್ಞ; ಸಿಎ ರುದ್ರಮೂರ್ತಿ
ನಾವು ಹೇಗೆ ಎಲ್ಲಿ ಎಂಥವರ ಹತ್ತಿರ ಹೂಡಿಕೆ ಮಾಡಬೇಕೆಂಬುದನ್ನು ಅರಿವು ಉಳ್ಳವರಾಗಿರಬೇಕು ಎಂದರು.
Team Udayavani, Jan 19, 2021, 5:56 PM IST
ಬೀದರ: ಬಸವಣ್ಣ ಒಬ್ಬ ಜಗತ್ತಿನ ಶ್ರೇಷ್ಠ ಆರ್ಥಿಕ ತಜ್ಞ. ಅಂತೆಯೇ ಬಸವ ಕಲ್ಯಾಣದಲ್ಲಿ ಅಂದು ಕೊಡುವವರುಂಟು ಬೇಡುವವರಿಲ್ಲ. ಬೇಡುವರಿಲ್ಲದ ಕಾರಣ ನಾನು ಬಡವನಾದೆ ಎಂದು ಹೇಳಿರುವುದು ಇಂದಿಗೂ ಪ್ರಸ್ತುತ ಎಂದು ಆರ್ಥಿಕ ತಜ್ಞ ಸಿಎ ರುದ್ರಮೂರ್ತಿ ಹೇಳಿದರು. ನಗರದ ಸಮರ್ಥ ಕಲ್ಯಾಣ ಮಂಟಪದಲ್ಲಿ ನಡೆದ ಶರಣ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಣ ಎಲ್ಲರಿಗೂ ಬೇಕು.
ಆದರೆ, ಅದು ಸತ್ಯ ಶುದ್ಧ ಕಾಯಕದಿಂದ ಇದ್ದರೆ ಅದು ಸತ್ ಪಾತ್ರಕ್ಕೆ ಸಲ್ಲುತ್ತದೆ. ನಿರಂತರ ಕಾಯಕ ಮಾಡಿ ಖರ್ಚು ಕಡಿಮೆ ಮಾಡಿ ಉಳಿತಾಯದ ಹಣವನ್ನು ಹೂಡಿಕೆ ಮಾಡುವ ಪ್ರವೃತ್ತಿ ನಿಮ್ಮದಾದರೆ ಆರ್ಥಿಕ ಪ್ರಗತಿಗೆ ಇದು ಪೂರಕವಾಗುತ್ತದೆ. ನಾವು ಹೇಗೆ ಎಲ್ಲಿ ಎಂಥವರ ಹತ್ತಿರ ಹೂಡಿಕೆ ಮಾಡಬೇಕೆಂಬುದನ್ನು ಅರಿವು ಉಳ್ಳವರಾಗಿರಬೇಕು ಎಂದರು.
ಪ್ರಾರ್ಥನೆ ಪುಸ್ತಕ ಬಿಡುಗಡೆ ಮಾಡಿದ ಬೈಲೂರಿನ ಶ್ರೀ ನಿಜಗುಣಾನಂದ ಸ್ವಾಮಿಗಳು, ಡಾ| ಶಿವಾನಂದ ಸ್ವಾಮಿಗಳು ಮತ್ತು ಸಿದ್ದರಾಮ ಶರಣರು ಬೆಲ್ದಾಳ ಮಾತನಾಡಿದರು. ಅಕ್ಕ ಅನ್ನಪೂರ್ಣ ತಾಯಿ, ಡಾ| ಗಂಗಾಂಬಿಕೆ ತಾಯಿ, ಶಶಿಕುಮಾರ ಹೆಗಡೆ, ಶರಣಪ್ಪ ಮಿಠಾರೆ, ಸುರೇಶ ಚನ್ನಶೆಟ್ಟಿ, ಶಿವಸ್ವಾಮಿ ಚೀನಕೇರಾ, ಸಂಗಪ್ಪಾ ನಾವದಗೇರೆ ಮಾತನಾಡಿದರು.
ವಿವಿಧ ಕಾಯಕ ಜೀವಿಗಳಾದ ಗಾರೆ ಕೆಲಸದ ಶಂಕರ ಜಮಾದರ, ಕಾರ್ಮಿಕ ಫಾರೂಕ, ಹಡಪದ ಶಾಂತಕುಮಾರ ಶ್ರೀ ಮಂಗಲೆ ಸ್ವತ್ಛ ಭಾರತದ ಗುರುನಾಥ ಮುದ್ಧ, ನೇಕಾರ ಕಾಯಕದ ಜಗನಾಥ ಜಮಾದರ, ವಿದ್ಯುತ್ ಕರ್ಮಿ ಶಿವಕುಮಾರ ಆಲೂರೆ, ಹೂಗಾರ ಕಾಯಕದ ಬಲರಾಮ ಹಾಗೂ ಕೃಷಿಕ ಸತೀಶ ಚಿನಕೇರ ಅವರಿಗೆ ನಿಜ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೈಜಿನಾಥ ಸಜ್ಜನಶೆಟ್ಟಿ ನಿರೂಪಿಸಿದರು. ಶಿವಕುಮಾರ ಸಾಲಿ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.