ಸುಂದರಿಯೊಂದಿಗೆ ಮದುವೆ ಮತ್ತು ಮೋಕ್ಷ


Team Udayavani, Jan 20, 2021, 6:45 AM IST

ಸುಂದರಿಯೊಂದಿಗೆ ಮದುವೆ ಮತ್ತು ಮೋಕ್ಷ

ಮೋಕ್ಷದ ದಾರಿಯಲ್ಲಿ ನಡೆಯುವುದು ಹೇಗೆ, ಜ್ಞಾನೋದಯ ಹೇಗಾಗುತ್ತದೆ, ಗುರುವಿನ ಕೆಲಸವೇನು ಎಂಬುದನ್ನು ಸುಂದರವಾಗಿ ವಿವರಿಸುವ ಒಂದು ಕತೆ ಪುರಾತನ ಚೀನೀ ಬೌದ್ಧರಲ್ಲಿದೆ.

ಒಂದು ಪಟ್ಟಣ. ಒಂದು ದಿನ ಮುಂಜಾನೆ ಒಬ್ಬಳು ಸುಂದರಿ ಅಲ್ಲಿ ಪ್ರತ್ಯಕ್ಷಳಾದಳು. ಆಕೆ ಎಲ್ಲಿಂದ ಬಂದಳು, ಊರ್ಯಾವುದು, ಕುಲಗೋತ್ರ ಯಾರಿಗೂ ತಿಳಿದಿರಲಿಲ್ಲ. ಆಕೆ ಮಾತ್ರ ಪರಮ ಸುಂದರಿ. ಆಕೆಯ ಸುತ್ತ ಇಡೀ ಪಟ್ಟಣದವರು ಜಮಾಯಿಸಿದರು. ಯುವಕರು ನಾ ಮುಂದು ತಾಮುಂದು ಎಂದು ಆಕೆಯನ್ನು ವರಿಸಲು ಹಾತೊರೆ ದರು. ಮುನ್ನೂರು ಮಂದಿ ಯೌವ್ವನಿಗರು ಆಕೆಯನ್ನು ವಿವಾಹ ವಾಗಲು ಸಿದ್ಧರಿದ್ದರು.

ಯುವತಿ ಹೇಳಿದಳು, “ನೀವು ಮುನ್ನೂರು ಮಂದಿ ಇದ್ದೀರಿ. ನಾನೊಬ್ಬಳೆ. ಯಾರಾದರೂ ಒಬ್ಬರನ್ನು ಮದುವೆಯಾಗಲು ಸಾಧ್ಯ. ಹಾಗಾಗಿ 24 ತಾಸು ಸಮಯ ಕೊಡುತ್ತೇನೆ. ಯಾರು ಬುದ್ಧನ ಪದ್ಮಸೂತ್ರವನ್ನು ನಾಳೆ ಇದೇ ಸಮಯದ ಒಳಗೆ ಕಂಠಸ್ಥ ಮಾಡಿಕೊಂಡು ಬರುತ್ತೀರೋ ಅವರನ್ನು ವರಿಸುತ್ತೇನೆ’. ಎಲ್ಲರೂ ಮನೆಗೆ ಹಿಂದಿರು ಗಿದರು. ಪೆಟ್ಟಿಗೆಯಿಂದ ಪದ್ಮಸೂತ್ರ ಗ್ರಂಥ ಹೊರತೆಗೆದು ಬಾಯಿಪಾಠ ಆರಂಭಿಸಿದರು.

ಮರುದಿನ ಸಂಖ್ಯೆ ಹತ್ತಕ್ಕೆ ಇಳಿದಿತ್ತು. ಯುವತಿ ಅವರಿಂದ ಪದ್ಮಸೂತ್ರ ಕೇಳಿದಳು. ಬಳಿಕ, “ಸಮಸ್ಯೆ ಈಗಲೂ ಬಗೆಹರಿದಿಲ್ಲ. ನೀವು ಹತ್ತು ಮಂದಿ, ನಾನೊಬ್ಬಳೆ. ಇನ್ನೂ 24 ತಾಸು ಸಮಯ ಕೊಡುತ್ತೇನೆ. ಯಾರು ನಾಳೆಯೊಳಗೆ ಪದ್ಮಸೂತ್ರವನ್ನು ವ್ಯಾಖ್ಯಾನಿಸಬಲ್ಲರೋ ಅವರೊಂದಿಗೆ ನನ್ನ ವಿವಾಹ’. ಎಲ್ಲರೂ ಅವರವರ ಮನೆಗಳಿಗೆ ಹಿಂದಿರುಗಿದರು. ಉಣ್ಣದೆ, ನಿದ್ರಿಸದೆ ಪದ್ಮಸೂತ್ರವನ್ನು ಜೀರ್ಣಿಸಿಕೊಂಡರು. ಮೂವರು ಇದರಲ್ಲಿ ಯಶಸ್ವಿಯಾದರು.

ಮರುದಿನ ಅವರು ಯುವತಿಯ ಮುಂದೆ ಯಶಸ್ವಿಯಾಗಿ ಪದ್ಮಸೂತ್ರವನ್ನು ವಾಖ್ಯಾನಿಸಿದರು. ಎಲ್ಲವನ್ನೂ ಕೇಳಿದ ಬಳಿಕ ಆ ಸುಂದರಿ, “ಸಮಸ್ಯೆ ಮುಂದು ವರಿದಿದೆ. ನಾಳೆ ಇದೇ ಸಮಯದ ಒಳಗೆ ಯಾರು ಪದ್ಮಸೂತ್ರವನ್ನು ಹೃದ್ಗತಗೊಳಿಸಿ ಕೊಳ್ಳುವರೋ ಅವರ ಕೈಹಿಡಿಯುವೆ. ನೀವು ಇದುವರೆಗೆ ಬಹಳ ಕಷ್ಟಪಟ್ಟಿದ್ದೀರಿ, ಒಳ್ಳೆಯದೇ. ಇದುವರೆಗೆ ನೀವು ಬಾಯಿಪಾಠ ಮಾಡಿದಿರಿ, ವ್ಯಾಖ್ಯಾನಿ ಸಿದಿರಿ. ಆದರೆ ಪದ್ಮಸೂತ್ರ ರಕ್ತಗತವಾಗ ಬೇಕು. ನಿಮ್ಮ ಕಣಕಣದಲ್ಲಿ ಅದರ ಸುವಾಸನೆ ಉಕ್ಕಬೇಕು’ ಎಂದಳು.

ಮೂವರೂ ಸಾಕಷ್ಟು ಶ್ರಮಿಸಿದರು. ಆದರೆ ಮರುದಿನ ಒಬ್ಬ ಯುವಕ ಮಾತ್ರ ಆಕೆಯಿದ್ದಲ್ಲಿಗೆ ಬಂದ. ಆತನ ಆಗಮನವೇ ಆತ ನಲ್ಲಾದ ಬದಲಾ ವಣೆಯನ್ನು ಸಾರಿಹೇಳು ತ್ತಿತ್ತು. ಆ ಯುವಕನ ಮುಖ ಅಪೂರ್ವ ತೇಜಸ್ಸಿನಿಂದ ಕೂಡಿತ್ತು.

ಯುವತಿ ಅವನ ಕೈಹಿಡಿದು ಪಟ್ಟಣದ ಹೊರಗೆ ತನ್ನ ಮನೆಗೆ ಕರೆದೊಯ್ದಳು. ಆ ಮನೆ ಅಲೌಕಿಕವಾಗಿತ್ತು. ಸ್ವರ್ಗಸದೃಶ ವಾಗಿತ್ತು. ಮನೆಯ ಹೆಬ್ಟಾಗಿಲಿನಲ್ಲಿ ಯುವತಿಯ ಹೆತ್ತವರು ನಿಂತಿದ್ದರು. ಅವರೊಡನೆ ಮಾತನಾಡುತ್ತ ಯುವಕ ಸ್ವಲ್ಪ ಹೊತ್ತು ನಿಂತ, ಯುವತಿ ಮನೆಯೊಳಗೆ ಹೊಕ್ಕಳು. ಮಾತುಕತೆಯ ಬಳಿಕ ಅವಳ ಹೆತ್ತವರು ಯುವಕನಿಗೆ ಹೇಳಿದರು, “ಒಳಗೆ ಹೋಗು, ಅವಳು ಕಾಯುತ್ತಿರಬಹುದು…’

ಯುವಕ ಒಳಹೊಕ್ಕ. ಆದರೆ ಅಲ್ಲಿ ಯಾರೂ ಇರಲಿಲ್ಲ. ಹಿಂದಿನ ಬಾಗಿಲು ತೆರೆದಿತ್ತು. ಆಕೆ ಎಲ್ಲೋ ಹೋಗಿದ್ದಂತೆ ಪಾದದ ಅಚ್ಚುಗಳಿದ್ದವು. ಯುವಕ ಅದನ್ನನುಸರಿಸಿ ನಡೆದ. ಪಥ ಒಂದು ನದಿಯ ದಂಡೆಯಲ್ಲಿ ಕೊನೆಯಾಗಿತ್ತು. ಅಲ್ಲೂ ಯುವತಿ ಇರಲಿಲ್ಲ. ಹೆಜ್ಜೆಯ ಅಚ್ಚುಗಳು ಅಲ್ಲಿ ಕೊನೆಯಾಗಿದ್ದವು. ಅಲ್ಲಿ ಯುವತಿಯ ಎರಡು ಸ್ವರ್ಣ ಪಾದರಕ್ಷೆಗಳಿದ್ದವು.

ಯುವಕನಿಗೆ ಅಚ್ಚರಿ. ಆತ ಹಿಂದಿರುಗಿ ನೋಡಿದ. ತಾನು ನಡೆದು ಬಂದಿದ್ದ ದಾರಿ, ಮನೆ ಎಲ್ಲವೂ ಮಾಯವಾಗಿದ್ದವು. ಮುಂದೆ ತಿರುಗಿದರೆ ನದಿ, ಪಾದರಕ್ಷೆಗಳೂ  ಮಾಯ. ಎಲ್ಲೆಡೆಯೂ ಅನಂತ ಶೂನ್ಯ ಮತ್ತು ಜ್ಞಾನೋದಯದ ನಗು ಕೇಳಿಸುತ್ತಿತ್ತು. ಯುವಕನಲ್ಲೂ ಮೆಲು ನಗು ಮೂಡಿತು.

ಜ್ಞಾನಪಥ, ಮೋಕ್ಷಪಥದಲ್ಲಿ ನಮ್ಮನ್ನು ಗುರು ಮುನ್ನಡೆಸುವುದು ಹೀಗೆ.

(ಸಾರ ಸಂಗ್ರಹ)

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.