ಶಬರಿಮಲೆ ಯಾತ್ರೆ ಕೊನೆ: ಭಕ್ತರ ಸಂಖ್ಯೆ ತೀರಾ ವಿರಳ
Team Udayavani, Jan 20, 2021, 2:03 AM IST
ಕಾಸರಗೋಡು: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಕರ ಸಂಕ್ರಮಣ ಅವಧಿಯ ತೀರ್ಥಾಟನೆ ಮುಕ್ತಾಯಗೊಂಡಿದ್ದು, ಜ. 20ರಂದು ದೇವಸ್ಥಾನದ ಬಾಗಿಲನ್ನು ಮುಚ್ಚ ಲಾಗುವುದು.
ಮಂಗಳವಾರ ಸಂಜೆ 5.30ರ ವರೆಗೆ ಮಾತ್ರ ಭಕ್ತರಿಗೆ ಪಂಪಾದಿಂದ ಸನ್ನಿಧಾನಕ್ಕೆ ತೆರಳಲು ಅವಕಾಶ ನೀಡಲಾಯಿತು. ಕೋವಿಡ್ 19ರಮಾನದಂಡದಂತೆ ಈ ವರ್ಷ ಭಕ್ತರು ಕ್ಷೇತ್ರ ದರ್ಶನಕ್ಕೆ ಆನ್‌ಲೈನ್‌ನಲ್ಲಿ ಮುಂಗಡವಾಗಿ ಕಾದಿರಿಸಬೇಕಾಗಿತ್ತು.
ಪ್ರತಿದಿನ 5,000 ಭಕ್ತರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗಿತ್ತು. ಆದರೆ ಅಷ್ಟು ಸಂಖ್ಯೆಯ ಭಕ್ತರೂ ಕ್ಷೇತ್ರದಲ್ಲಿ ಕಂಡುಬಂದಿಲ್ಲ. ಜ. 19ರ ಮಂಗಳವಾರ ಮಾತ್ರ ತುಪ್ಪಾಭಿಷೇಕ ಅವಕಾಶ ನೀಡಲಾಗಿತ್ತು.ಪ್ರತೀ ವರ್ಷ ಲಕ್ಷಾಂತರ ಭಕ್ತರು ಶಬರಿಮಲೆ ದರ್ಶನಕ್ಕೆ ತೆರಳುತ್ತಿದ್ದರು. ಆದರೆ ಈ ಬಾರಿ ಕೋವಿಡ್ 19ರ ಹಿನ್ನೆಲೆಯಲ್ಲಿ ಸರಕಾರದ ಕಟ್ಟುನಿಟ್ಟಿನಿಂದಾಗಿ ಬಹಳಷ್ಟು ಕಡಿಮೆ ಸಂಖ್ಯೆಯಲ್ಲಿ ಭಕ್ತರು ಶಬರಿಮಲೆ ದರ್ಶನ ಮಾಡಿದ್ದರು. ಕರ್ನಾಟಕದ ಭಕ್ತರ ಸಂಖ್ಯೆಯಂತೂ ತೀರಾ ವಿರಳವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.