ಜಲಾಶಯದಲ್ಲಿ ಮೀನಿನ ಬಲೆಗೆ ಸಿಲುಕಿ ನರಳಾಡುತ್ತಿದ್ದ ಕಾಡಾನೆ ರಕ್ಷಣೆ
Team Udayavani, Jan 20, 2021, 12:45 PM IST
ಎಚ್.ಡಿ.ಕೋಟೆ: ಆಹಾರ ಅರಸಿ ಕಾಡಿನಿಂದ ಬಂದ ಕಾಡಾನೆಯೊಂದು ಮೀನಿನ ಬಲೆಗೆ ಸಿಲುಕಿ ಹೊರಬರಲಾಗದೆ ಪರದಾಡಿದ ಘಟನೆ ಸರಗೂರು ತಾಲೂಕಿನ ನುಗು ಹಿನ್ನೀರಿನಲ್ಲಿ ಮಂಗಳವಾರ ನಡೆದಿದೆ.
ಮೀನುಗಾರರು ಹರಡಿದ್ದ ಬಲೆಗೆ ಸಿಲುಕಿದ್ದ ಆನೆಯನ್ನು ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ಬೆಳಗ್ಗೆ ನುಗು ಜಲಾಶಯದ ಸಿಬ್ಬಂದಿ ಜಲಾಶಯದ ಲೈಟ್‌ಆಫ್ ಮಾಡಲು ಬಂದಾಗ ಈ ದೃಶ್ಯ ಕಂಡು ಬಂದಿದ್ದು, ನಂತರ ಡ್ಯಾಂನ ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿ ತಕ್ಷಣ ಹೆಡಿಯಾಲ ವನ್ಯಜೀವಿ ವಲಯದ ಎಸಿಎಫ್ ರವಿಶಂಕರ್ ನೇತೃತ್ವದಲ್ಲಿ ಬೋಟ್ ತರಿಸಿ, ಮೀನು ಬಲೆಗೆ ಸಿಲುಕಿದ್ದ ಗಂಡು ಕಾಡಾನೆ ಸಂರಕ್ಷಣೆಗೆ ಮುಂದಾದರೂ, ಬೋಟ್ ಮೂಲಕ ಬಲೆ ಬಿಡಿಸಲು ಪ್ರಯತ್ನ ನಡೆಸಲಾಯಿತು. ಬಳಿಕ ಅನೆ ವೈದ್ಯರು, ಅರ್ಜುನ ಆನೆ ಕರೆಸಿ ಕಾರ್ಯಾಚರಣೆ ಮಾಡಲು ತಯಾರಿ ನಡೆಸುತ್ತಿರುವಾಗ ಬೋಟ್ ಶಬ್ದಕ್ಕೆ ಮೀನಿನ ಬಲೆಗೆ ಸಿಲುಕಿದ್ದ ಕಾಡಾನೆ
ಬೆಲೆಯಿಂದ ತಾನೇ ಬಿಡಿಸಿಕೊಂಡು ದಡ ಸೇರಿತು.
ಕಾರ್ಯಚರಣೆಯಲ್ಲಿ ಹೆಡೆಯಾಲ ಎಸಿಎಫ್ ರವಿಶಂಕರ್, ವಿವಿಧ ವಲಯಗಳ ಆರ್‌ಎಫ್ ಒಗಳಾದ ಮಧು, ಪುಟ್ಟರಾಜು, ಗೀತಾನಾಯಕ್, ಮಂಜುನಾಥ್, ರಮೇಶ್, ಸರಗೂರು ಎಸ್‌ಐ ದಿವ್ಯ ಸೇರಿದಂತೆ ಸರಗೂರು, ನುಗು, ಹೆಡಿಯಾಲ ವಲಯಗಳ ಅರಣ್ಯ ಇಲಾಖೆ ಸಿಬ್ಬಂದಿ, ಎಸ್ ಟಿಪಿಪಿಎಫ್ ಸಿಬ್ಬಂದಿ ಇದ್ದರು.
ಇದನ್ನೂ ಓದಿ:ಭೂತಾನ್ ಗೆ ಭಾರತದ ಕೋವಿಡ್ ಲಸಿಕೆ ರವಾನೆ : 1.5 ಲಕ್ಷ ಲಸಿಕೆ ರವಾನಿಸಿದ ಭಾರತ
10 ವರ್ಷದ ಹಿಂದಿನ ಪ್ರಕರಣ ನೆನಪಿಸಿದ ಘಟನೆ
ಸೋಮವಾರ ರಾತ್ರಿ ನುಗು ಜಲಾಶಯದ ಹಿನ್ನೀರಿಗೆ ನೀರು ಕುಡಿಯಲು ಬಂದು ಮೀನಿನ ಬಲೆಗೆ ಸಿಲುಕಿ ನದಿಯಿಂದ ಮೇಲೆ ಬಾರಲಾಗದೆ ನಿತ್ರಾಣಗೊಂಡಿದ್ದ ಕಾಡಾನೆಯಂತೆ ಕಳೆದ 10 ವರ್ಷಗಳ ಹಿಂದೆ ಕೂಡ ಕಾಡಾನೆಯೊಂದು ಮೀನಿನ ಬಲೆಗೆ ಸಿಲುಕಿ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದನ್ನು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಯೊಬ್ಬರು ಸ್ಮರಿಸಿದರು. ಈ ಭಾಗದಲ್ಲಿ ಆಗಾಗ ಮೀನಿನ ಬಲೆಗೆ ಸಿಲುಕಿ ಕೆಲ ಪ್ರಾಣಿಗಳು ನರಳಾಡಿ ಕಷ್ಟಪಟ್ಟು ಬದುಕುಳಿದಿರುವ ಘಟನೆಗಳು ಜರಗುತ್ತಿದ್ದು, ನುಗು ಹಿನ್ನೀರಿನಲ್ಲಿ ಮೀನು ಶಿಕಾರಿಗೆ ಸಂಪೂರ್ಣ ತಡೆ ನೀಡಬೇಕಿದೆ ಎಂದು ಪ್ರಾಣಿ ಪ್ರೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸಿದ್ದರಾಮಯ್ಯ ಮಾಸ್ ಲೀಡರ್, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.