ಇಂದು ಮತ್ತಷ್ಟು ಸ್ಟಾರ್ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್
Team Udayavani, Jan 20, 2021, 3:53 PM IST
ಈಗಾಗಲೇ ಒಂದೊಂದೇ ಸ್ಟಾರ್ ಸಿನಿಮಾಗಳು ತಮ್ಮ ಬಿಡುಗಡೆಯ ದಿನಾಂಕವನ್ನು ಘೋಷಿಸಿಕೊಳ್ಳುತ್ತಿವೆ. ಈಗಾಗಲೇ “ಪೊಗರು’, “ರಾಬರ್ಟ್’, “ಯುವರತ್ನ’ ಚಿತ್ರತಂಡಗಳು ಬಿಡುಗಡೆಯ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿವೆ. ಬುಧವಾರ ಮತ್ತಷ್ಟು ಚಿತ್ರತಂಡಗಳು ತಮ್ಮ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಮಾಡಲಿವೆ.
ಮುಖ್ಯವಾಗಿ ಕೆ.ಪಿ.ಶ್ರೀಕಾಂತ್ ನಿರ್ಮಾಣದ “ಸಲಗ’, ಸುದೀಪ್ ಅಭಿನಯದ “ಕೋಟಿಗೊಬ್ಬ-3′, ಶಿವರಾಜ್ ಕುಮಾರ್ ನಟನೆಯ “ಭಜರಂಗಿ-2′ ಹಾಗೂ ಶ್ರೀಮುರಳಿ ನಟನೆಯ “ಮದಗಜ’ ಚಿತ್ರಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಳ್ಳಲಿವೆ.
ಬುಧವಾರ “ಪೊಗರು’ ಚಿತ್ರದ ಪತ್ರಿಕಾಗೋಷ್ಠಿ ಇದ್ದು, ಅಲ್ಲಿಗೆ ಎಲ್ಲಾ ಸ್ಟಾರ್ ಸಿನಿಮಾಗಳ ನಿರ್ಮಾಪಕರು ಬಂದು ತಮ್ಮ ಸಿನಿಮಾ ಬಿಡುಗಡೆಯ ದಿನಾಂಕವನ್ನು ಅನೌನ್ಸ್ ಮಾಡಲಿದ್ದಾರೆ. ಈ ಮೂಲಕ 2021ರಲ್ಲಿ ಬಿಡುಗಡೆಯಾಗುವ ಸ್ಟಾರ್ ಸಿನಿಮಾಗಳ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ.
ಹಾಗಂತ ಸ್ಟಾರ್ ಸಿನಿಮಾಗಳ ಬಿಡುಗಡೆ ಪರ್ವ 2021ರ ವರ್ಷಪೂರ್ತಿ ನಡೆಯಲಿದೆ. “ಕೆಜಿಎಫ್ -2′, “ಕಬj’, “777 ಚಾರ್ಲಿ’, “ಜೇಮ್ಸ್’, “ಗಾಳಿಪಟ-2′, “ತ್ರಿಬಲ್ ರೈಡಿಂಗ್’ … ಹೀಗೆ ಸಾಕಷ್ಟು ಸ್ಟಾರ್ ಸಿನಿಮಾಗಳು ಈ ವರ್ಷವೇ ರಿಲೀಸ್ ಆಗಲಿವೆ. ಸ್ಟಾರ್ ಸಿನಿಮಾಗಳು ಮೂರು ವಾರಗಳ ಗ್ಯಾಪ್‌ನಲ್ಲಿ ಬಿಡುಗಡೆ ಯಾಗಬೇಕೆಂದು ಕನ್ನಡ ಚಿತ್ರರಂಗದ ಮುಂಚೂಣಿ ನಿರ್ಮಾಪಕರೆಲ್ಲಾ ಸೇರಿ ನಿರ್ಧರಿಸಿದ್ದಾರೆ.
ಈ ಮೂಲಕ ಬಿಡುಗಡೆ ಸಮಯದಲ್ಲಿ ಆಗುವ ವಿವಾದ, ಚಿತ್ರಮಂದಿರ ಸಮಸ್ಯೆಯನ್ನು ತಪ್ಪಿಸಬೇಕೆಂ ಬುದು ಅವರ ಉದ್ದೇಶ. ಸದ್ಯದ ಮಟ್ಟಿಗೆ ಅದೇ ನಿರ್ಧಾರದಲ್ಲಿ ಸ್ಟಾರ್ ಸಿನಿಮಾಗಳ ಡೇಟ್ ಅನೌನ್ಸ್ ಆಗುತ್ತಿದೆ. ಸ್ಟಾರ್ ಸಿನಿಮಾಗಳ ಗ್ಯಾಪ್‌ನಲ್ಲಿ ಹೊಸಬರ ಹಾಗೂ ಇತರ ನಟರ ಚಿತ್ರಗಳು ಬಿಡುಗಡೆಯಾ ಗಬೇಕಿದೆ. ಈ ಬಾರಿಯೂ ಬೇರೆ ಬೇರೆ ಕಾರಣಗಳಿಗಾಗಿ ನಿರೀಕ್ಷೆ ಹುಟ್ಟಿಸಿರುವ ಹೊಸಬರ ಸಿನಿಮಾಗಳ ಪಟ್ಟಿ ದೊಡ್ಡದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಹೊಸ ಸೇರ್ಪಡೆ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.