ಸರ್ವಿಸ್ ಆನ್ ವೀಲ್ಸ್ : ಮನೆ ಬಾಗಿಲಿಗೆ ಸರಕಾರಿ ಸೇವೆ
Team Udayavani, Jan 20, 2021, 5:41 PM IST
ಉದ್ಯಾವರ: ಸರ್ವಿಸ್ ಆನ್ ವೀಲ್ಸ್ ಎನ್ನುವ ಧ್ಯೇಯ ವಾಕ್ಯದೊಂದಿಗೆ ದ್ವಿಚಕ್ರ ವಾಹನದ ಮೂಲಕ ಮಹಿಳೆಯೋರ್ವರು ಜನರ
ಮನೆ ಬಾಗಿಲಿಗೆ ತೆರಳಿ ಸೇವಾ ಸಿಂಧುವಿನ ಸರಕಾರಿ ಸೇವೆಗಳನ್ನು ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ, ಗರ್ಭಿಣಿ ಸ್ತ್ರೀಯರಿಗೆ ಮನೆ ಬಾಗಿಲಿಗೆ ಸೇವೆಯನ್ನು ಒದಗಿಸುವ ವಿನೂತನ ಯೋಜನೆಯನ್ನು ರಾಜ್ಯದಲ್ಲಿ ಪ್ರಥಮವಾಗಿ ಉಡುಪಿ ಜಿಲ್ಲೆಯ ಉದ್ಯಾವರದ ಎಚ್. ಎಸ್. ಡಿಜಿಟಲ್ಸ್ ಪ್ರಾರಂಭಿಸಿದ್ದು ಆ ಮೂಲಕ ಜನಮನ್ನಣೆ ಗಳಿಸುತ್ತಿದೆ.
ಭಾರತ ಸರಕಾರದ ವಿದ್ಯುನ್ಮಾನ, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ಸೇವಾ ಸಿಂಧು ಯೋಜನೆಯ ನೋಡಲ್
ಇಲಾಖೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಇಲಾಖೆಗಳ ಹಲವಾರು ಸೇವೆಗಳನ್ನು
ನಾಗರಿಕರಿಗೆ ತಡೆರಹಿತವಾಗಿ ನೀಡುವಂತೆ ಅನುವಾಗಲು ಮತ್ತು ಇಲಾಖೆಗಳ ದಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಸೇವಾ
ಸಿಂಧು ಯೋಜನೆಯನ್ನು ಪರಿಕಲ್ಪಿಸಲಾಗಿದೆ.
ಉದ್ಯಾವರ ಗ್ರಾಮದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ ಎಚ್. ಎಸ್ ಡಿಜಿಟಲ್ಸ್ ಸೇವಾ ಸಿಂಧು ಸಂಸ್ಥೆಯು
ವಿವಿಧ ಇಲಾಖೆಗಳ ಸುಮಾರು 500ಕ್ಕೂ ಮಿಕ್ಕಿದ ಸೇವೆಗಳನ್ನು ಒಂದೇ ಸೂರಿನಡಿಯಲ್ಲಿ ತ್ವರಿತವಾಗಿ ನೀಡುತ್ತಿದೆ.
ಎಚ್.ಎಸ್. ಡಿಜಿಟಲ್ಸ್ ಸೇವಾ ಸಿಂಧು ಸಂಸ್ಥೆಯ ಸೌಮ್ಯಾ ಅವರು ಸರ್ವಿಸ್ ಆನ್ ವೀಲ್ಸ್ ಎನ್ನುವ ಧ್ಯೇಯ ವಾಕ್ಯದೊಂದಿಗೆ
ದ್ವಿಚಕ್ರ ವಾಹನದ ಮೂಲಕ ಜನರ ಮನೆ ಬಾಗಿಲಿಗೆ ತೆರಳಿ ಸೇವಾ ಸಿಂಧುವಿನ ಸರಕಾರಿ ಸೇವೆಗಳನ್ನು ಅರ್ಹರಿಗೆ ಒದಗಿಸುವ ವಿನೂತನ ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲಿ ಪ್ರಥಮವಾಗಿ ಪ್ರಾರಂಭಿಸಿರುತ್ತಾರೆ. ಇದರಿಂದ ಸ್ಥಳೀಯ ಘಟನೆಗಳು ಉದ್ಯೋಗಾವಕಾಶಗಳು ಹಾಗೂ ಇತರ ಉಪಯುಕ್ತ ಮಾಹಿತಿಗಳು ಬಡಜನರಿಗೆ ಒದಗಿದಂತಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.