ಬೈಡೆನ್‌ ಆಗಮನ, ಟ್ರಂಪ್‌ ನೀತಿಗಳ ನಿರ್ಗಮನ


Team Udayavani, Jan 21, 2021, 6:55 AM IST

ಬೈಡೆನ್‌ ಆಗಮನ, ಟ್ರಂಪ್‌ ನೀತಿಗಳ ನಿರ್ಗಮನ

ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್‌ ನಾಯಕ ಜೋ ಬೈಡೆನ್‌ ಅಧಿಕಾರ ವಹಿಸಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ರಿಪಬ್ಲಿಕನ್‌ ಪಕ್ಷದ ನೀತಿಗಳಿಗೆ ಸಾಕ್ಷಿಯಾದ ಜಗತ್ತು, ಈಗ ಡೆಮಾಕ್ರಾಟ್‌ಗಳ ಆಡಳಿತ ಹೇಗಿರಲಿದೆಯೋ ಎಂದು ಕುತೂಹಲ ತಾಳಿವೆ. ಬೈಡೆನ್‌ ಸರ್ಕಾರದ ವಿದೇಶಾಂಗ ನೀತಿ ತಮ್ಮೆಡೆಗೆ ಹೇಗಿರಬಹುದು ಎಂದು ಪ್ರತಿಯೊಂದು ದೇಶವೂ ಲೆಕ್ಕಾಚಾರ ಹಾಕತೊಡಗಿವೆ. ಆದರೆ, ಅವೆಲ್ಲದಕ್ಕೂ ಮುನ್ನ ಬೈಡೆನ್‌ ಅಮೆರಿಕದ ವಿಷಯದಲ್ಲಿ ಟ್ರಂಪ್‌ ತಂದಿದ್ದ ಕೆಲವು ಪ್ರಮುಖ ನೀತಿಗಳನ್ನು ಬದಲಿಸಲೇಬೇಕು ಎಂದು ಪಣತೊಟ್ಟಂತಿದೆ.

ಈ ಕಾರಣಕ್ಕಾಗಿ, ಆಡಳಿತದ ಮೊದಲ ದಿನವೇ ಅವರು ಪ್ಯಾರಿಸ್‌ ಒಪ್ಪಂದದಲ್ಲಿ ಅಮೆರಿಕದ ಮರುಸೇರ್ಪಡೆ, ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸಂಬಂಧ ಸುಧಾರಣೆ,  ವಿವಿಧ ಮುಸ್ಲಿಂ ರಾಷ್ಟ್ರಗಳ ನಾಗರಿಕರ ಮೇಲಿನ ನಿರ್ಬಂಧ ತೆರವು ಹಾಗೂ ಮುಖ್ಯವಾಗಿ ಅಮೆರಿಕ-ಮೆಕ್ಸಿಕೋ ಗಡಿಯಲ್ಲಿ ನಿರ್ಮಾಣವಾಗುತ್ತಿರುವ ಟ್ರಂಪ್‌ರ ಮಹತ್ವಾಕಾಂಕ್ಷೆಯ ಗೋಡೆ ನಿರ್ಮಾಣ ಕಾರ್ಯವನ್ನು ನಿಲ್ಲಿಸಲು ಆದೇಶಿಸುವ ಮೂಲಕ ಹಲವು ಪ್ರಮುಖ ಬದಲಾವಣೆಗೆ ನಾಂದಿ ಹಾಡಲಿದ್ದಾರೆ. ಒಟ್ಟಾರೆಯಾಗಿ ಆರಂಭಿಕ ಸಮಯದಲ್ಲೇ 17ಕ್ಕೂ ಹೆಚ್ಚು ನೀತಿಗಳನ್ನು ಬದಲಿಸಲಿರುವುದು ಖಚಿತ ಎನ್ನಲಾಗುತ್ತಿದೆ.

ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅಧಿಕಾರಕ್ಕೆ ಬಂದದ್ದು ವಲಸಿಗರ ವಿರುದ್ಧ ಸಮರ ಸಾರಿ ಹಾಗೂ ಅಮೆರಿಕನ್ನರಿಗೇ ಆದ್ಯತೆ ಎಂಬ ಭರವಸೆಗಳ ಮೂಲಕ. ಮುಂದೆ ಅವರು ಎಚ್‌1ಬಿ ವೀಸಾ ರದ್ದತಿಯಂಥ ಕ್ರಮಕ್ಕೆ ಮುಂದಾದರು. ಇನ್ನು 2017ರಲ್ಲಂತೂ 7 ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ಅಮೆರಿಕದ ಪ್ರವೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದರು. ಗಮನಾರ್ಹ ಸಂಗತಿಯೆಂದರೆ ಈ ಆದೇಶಗಳಿಗೆ ಅಂದು ಅಮೆರಿಕದಲ್ಲಿ ಗುಣಾತ್ಮಕ ಪ್ರತಿಕ್ರಿಯೆಯೇ ದೊರೆತಿತ್ತು. ಹೀಗಾಗಿ, ಬೈಡೆನ್‌ ಸರ್ಕಾರ ಈ ನಿರ್ಬಂಧವನ್ನು ತೆರವುಗೊಳಿಸುವುದಕ್ಕೆ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೋ ತಿಳಿಯದು. ಆದರೆ ತನ್ನ ಮತವರ್ಗದ ಮನಕ್ಕೆ ಹಿಡಿಸುವಂಥ ನೀತಿಯನ್ನೇ ಅವರು ತರುತ್ತಿದ್ದಾರೆ ಎನ್ನುವುದು ನಿಶ್ಚಿತ. ಮೆಕ್ಸಿಕೋ ಗಡಿಯುದ್ದಕ್ಕೂ ಗೋಡೆ ನಿರ್ಮಿಸುವ ಟ್ರಂಪ್‌ ನಿರ್ಣಯದ ಹಿಂದೆ, ಅಮೆರಿಕಕ್ಕೆ ಮೆಕ್ಸಿಕನ್ನರು ಅಕ್ರಮವಾಗಿ ನುಸುಳುತ್ತಿದ್ದಾರೆ ಎನ್ನುವ ಸಂಗತಿಯೇ ಕಾರಣವಾಗಿತ್ತು. ಈ ಸಮಸ್ಯೆ ನಿಜವೇ ಆದರೂ, ಗೋಡೆ ನಿರ್ಮಾಣ ಅತ್ಯಂತ ಅವೈಜ್ಞಾನಿಕ ಹಾಗೂ ಅನಗತ್ಯವಾಗಿ ಲಕ್ಷಾಂತರ ಕೋಟಿ ರೂ.ಗಳನ್ನು ಪೋಲು ಮಾಡುವ ಕೆಲಸ ಎಂದು ಪರಿಣತರು ಹೇಳುತ್ತಲೇ ಬಂದರು. ಅಲ್ಲದೇ ಗೋಡೆ ನಿರ್ಮಿಸುವುದರಿಂದ ಅಕ್ರಮ ವಲಸೆ ನಿಲ್ಲುವುದಿಲ್ಲ, ಅದನ್ನು ತಡೆಯುವುದಕ್ಕೆ ಅನ್ಯಮಾರ್ಗಗಳಿವೆ ಎನ್ನುವುದು ಡೆಮಾಕ್ರಾಟ್‌ಗಳ ವಾದ. ಹೀಗಾಗಿ ಈಗ ಗೋಡೆ ನಿರ್ಮಾಣದ ಕಥೆಯೂ ಕೊನೆಯಾಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ಯಾರಿಸ್‌  ಹವಾಮಾನ ಒಪ್ಪಂದದಲ್ಲಿ ಅಮೆರಿಕವನ್ನು ಮತ್ತೆ ಸೇರ್ಪಡೆಗೊಳಿಸಲು ನಿರ್ಧರಿಸಿರುವುದು ಜಾಣ ನಡೆ. ಹವಾಮಾನ ವೈಪರೀತ್ಯದ ವಿಚಾರದಲ್ಲಿ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ ಎಂದು ಅಮೆರಿಕದಂಥ ರಾಷ್ಟ್ರವೇ ಹಿಂದೆ ಸರಿದ ಕಾರಣ, ಉಳಿದ ರಾಷ್ಟ್ರಗಳೂ ಅದೇ ಧೋರಣೆ ತಾಳುವ ಅಪಾಯವಿದ್ದೇ ಇತ್ತು. ಇನ್ನು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಟ್ರಂಪ್‌ರ ಜಗಳವೂ ಉತ್ತುಂಗಕ್ಕೇರಿದ್ದು ಕಾರಣ, ಆ ಸಂಸ್ಥೆಯಿಂದ ಅಮೆರಿಕ ಅಂತರ ಕಾಯ್ದುಕೊಳ್ಳಲು, ನಿಧಿ ನೀಡುವಿಕೆಯನ್ನು ನಿಲ್ಲಿಸಲು ಯೋಚಿಸುತ್ತಿತ್ತು. ಆದರೆ, ಈ ವಿಚಾರದಲ್ಲೂ ಬೈಡೆನ್‌ ವ್ಯತಿರಿಕ್ತ ಯೋಚನೆ ಹೊಂದಿದ್ದಾರೆ. ಆದರೂ ಡಬ್ಲ್ಯುಎಚ್‌ಒ ಚೀನದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎನ್ನುವ ಅಂಶವನ್ನು ಅವರ ಸರಕಾರ ಅವಗಣಿಸಲೇಬಾರದು.

ಟಾಪ್ ನ್ಯೂಸ್

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

1-s-v

ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.