ತೆಲಂಗಾಣದಲ್ಲಿ ನಾಯಕತ್ವ ಬದಲು?
Team Udayavani, Jan 21, 2021, 7:00 AM IST
ಹೈದರಾಬಾದ್: ತೆಲಂಗಾಣದಲ್ಲಿ ನಾಯಕತ್ವ ಬದಲಾವಣೆಯಾಗ ಲಿ ದೆಯೇ? ಹೈದರಾಬಾದ್‌ನಲ್ಲಿ ಕಳೆದ ಕೆಲವು ಸಮಯಗಳಿಂದ ಚಾಲ್ತಿಯ ಲ್ಲಿರುವ ವದಂತಿಗಳ ಪ್ರಕಾರ ಹೌದು. ಮುಂದಿನ ತಿಂಗಳು ಮುಖ್ಯಮಂತ್ರಿ ಸ್ಥಾನಕ್ಕೆ ಕವಲಕುಂಟ ಚಂದ್ರಶೇಖರ ರಾವ್ ಪುತ್ರ ಕವಲಕುಂಟ ತಾರಕ ರಾಮ ರಾವ್ ನೇಮಕವಾಗುವುದು ಬಹುತೇಕ ಖಚಿತವೇ ಆಗಿದೆ.
ಈ ಬಗ್ಗೆ ಹಾಲಿ ಮುಖ್ಯಮಂತ್ರಿ ಕವಲಕುಂಟ ಚಂದ್ರಶೇಖರ ರಾವ್ ಕುಟುಂಬ ಸದಸ್ಯರಲ್ಲಿ ಚರ್ಚೆ ನಡೆಯುತ್ತಿದೆ. ಮುಂದಿನ ಮುಖ್ಯಮಂತ್ರಿ ಕೆ.ಟಿ.ರಾಮ ರಾವ್ ಅವ ರೇ ಆಗಲಿದ್ದಾರೆ. ಶೀಘ್ರ ವೇ ಅಂದರೆ ಮುಂದಿನ ತಿಂಗಳೇ ನಾಯಕತ್ವ ಬದಲಾಗಲಿದೆ. ಜತೆಗೆ ಹಾಲಿ ಸಂಪುಟದಲ್ಲಿಯೂ ಮಹತ್ವಪೂರ್ಣ ಬದಲಾವಣೆ ನಡೆಯಲಿದೆ ಎಂದು ರಾವ್ ಕುಟುಂಬದ ನಿಕಟ ವರ್ತಿಗಳನ್ನು ಉಲ್ಲೇಖೀಸಿ “ನ್ಯೂಸ್18′ ಆಂಗ್ಲ ಸುದ್ದಿವಾಹಿನಿ ವರದಿ ಮಾಡಿದೆ.
ತೆಲಂಗಾಣದ ಹಾಲಿ ವಿಧಾನಸಭೆಯ ಅವಧಿ 2023ಕ್ಕೆ ಮುಕ್ತಾಯಗೊಳ್ಳಲಿದೆ. ಇತ್ತೀಚೆಗಷ್ಟೇ “10 ಟಿವಿ ನ್ಯೂಸ್’ ಎಂಬ ಸುದ್ದಿವಾಹಿನಿಗೆ ನೀಡಿದ್ದ ಸಂದರ್ಶ ನದಲ್ಲಿ ಮಾತನಾಡಿದ್ದ ಆರೋಗ್ಯ ಸಚಿವ ಎಟೇಲ ರಾಜೇಂದ್ರ “ತೆಲಂಗಾಣ ಸರಕಾರದ ಪ್ರಮುಖ ನಿರ್ಧಾರಗಳೆಲ್ಲವೂ ಕೆ.ಟಿ.ರಾಮ ರಾವ್ ಅವರ ಜತೆಗೆ ಚರ್ಚೆ ನಡೆಸಿಯೇ ಕೈಗೊಳ್ಳಲಾಗುತ್ತದೆ. ನಾಯಕತ್ವ ಬದಲಾವಣೆ ತಪ್ಪೇನಲ್ಲ’ ಎಂದು ಹೇಳಿದ್ದರು.
ರಾಷ್ಟ್ರ ರಾಜಕಾರಣಕ್ಕೆ ಕೆಸಿಆರ್: 2023ರ ವರೆಗೆ ಕೆ.ಚಂದ್ರಶೇಖರ ರಾವ್ ಅವರೇ ಮುಖ್ಯಮಂತ್ರಿಯಾಗಿ ಇರಲಿ. ಸದ್ಯಕ್ಕೆ ನಾಯಕತ್ವ ಬೇಡ ಎನ್ನುವುದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್)ಯ ನಾಯಕರೆಲ್ಲರ ಒಲವಾಗಿತ್ತು. ಜತೆಗೆ ರಾಮ ರಾವ್ ಸಹಜವಾಗಿಯೇ ಕೆಸಿಆರ್ ಸ್ಥಾನಕ್ಕೆ ಬರಲಿದ್ದಾರೆ ಎನ್ನುವುದನ್ನು ಚರ್ಚಿಸಿದ್ದರು. ಕೆಸಿಆರ್ ಅವರಿಗೆ ರಾಷ್ಟ್ರ ರಾಜಕಾರಣದಲ್ಲಿ ಮುಂದುವರಿಯುವ ನಿಟ್ಟಿನಲ್ಲಿ ಈ ಬದಲಾವಣೆ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.