ಭಜರಂಗಿ-2, ಸಲಗ.. ಸ್ಟಾರ್ ಸಿನಿಮಾಗಳ ರಿಲೀಸ್‌ಗೆ ಕೊನೆಗೂ ಡೇಟ್ ಫಿಕ್ಸ್
Team Udayavani, Jan 21, 2021, 9:12 AM IST
ಕನ್ನಡದಲ್ಲಿ ಸಾಲಾಗಿ ರಿಲೀಸ್‌ಗೆ ರೆಡಿಯಾಗಿ ನಿಂತಿರುವ ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬರೋದು ಯಾವಾಗ? ಅನೇಕ ಸ್ಟಾರ್ ಸಿನಿಮಾಗಳ ಬಿಡುಗಡೆ ಬಗ್ಗೆ ದಿನಕ್ಕೊಂದು ಅಂತೆ-ಕಂತೆ ಸುದ್ದಿಗಳು ಗಾಂಧಿನಗರದಲ್ಲಿ ಹರಿದಾಡುತ್ತಿರುವುದರಿಂದ, ನಿಖರವಾಗಿ ಯಾವ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಅನ್ನೋದು ಪ್ರೇಕ್ಷಕರಿಗೂ, ಚಿತ್ರರಂಗದ ಮಂದಿಗೂ ದೊಡ್ಡ ಪ್ರಶ್ನೆಯಾಗಿತ್ತು. ಆದರೆ ಇದೀಗ ಅದೆಲ್ಲ ಪ್ರಶ್ನೆಗಳಿಗೂ ಒಂದೇ ವೇದಿಕೆಯಲ್ಲಿ ಏಕಕಾಲಕ್ಕೆ ಉತ್ತರ ಸಿಕ್ಕಿದೆ.
ಹೌದು, ಈ ಸಂಬಂಧ ಬುಧವಾರ ಮಾಧ್ಯಮಗಳ ಮುಂದೆ ಬಂದಿದ್ದ ಬಿಡುಗಡೆಗೆ ಸಿದ್ಧವಿರುವ ಸ್ಟಾರ್ ಸಿನಿಮಾಗಳು ಮತ್ತು ಬಿಗ್ ಬಜೆಟ್ ಸಿನಿಮಾಗಳ ನಿರ್ಮಾಪಕರು ಅಧಿಕೃತವಾಗಿ ತಮ್ಮ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಒಕ್ಕೊರಲಿನಿಂದ ಘೋಷಿಸಿದ್ದಾರೆ. ಈ ಮೂಲಕ ಕಳೆದ ಮೂರ್‍ನಾಲ್ಕು ತಿಂಗಳಿನಿಂದ ಕನ್ನಡ ಚಿತ್ರರಂಗದಲ್ಲಿ ಬಿಗ್ ಸ್ಟಾರ್ ಸಿನಿಮಾಗಳ ಬಿಡುಗಡೆಯ ಬಗ್ಗೆ ಹರಿದಾಡುತ್ತಿದ್ದ ಎಲ್ಲ ಅಂತೆ-ಕಂತೆಗಳಿಗೆ ತೆರೆ ಬಿದ್ದಿದೆ.
ಒಟ್ಟಾರೆ ಫೆಬ್ರವರಿ ಮೊದಲ ವಾರದಿಂದ ಮೇ ಎರಡನೇ ವಾರದವರೆಗೆ ಬಿಡುಗಡೆಯಾಗಲಿರುವ ಕನ್ನಡದ ಸ್ಟಾರ್ ನಟರ ಮತ್ತು ಬಿಗ್ ಬಜೆಟ್ ಸಿನಿಮಾಗಳ ಬಿಡುಗಡೆಯ ದಿನಾಂಕ ಅಧಿಕೃತವಾಗಿ ಅನೌನ್ಸ್ ಆಗಿದ್ದು, ಚಿತ್ರರಂಗದಲ್ಲಿ ಚಟುವಟಿಕೆಗಳು ಮತ್ತಷ್ಟು ಗರಿಗೆದರಿದೆ.
ಇದನ್ನೂ ಓದಿ:ಪಂತ್ ಇರುವುದೇ ಹೀಗೆ, ಅಂಜದ ಗಂಡಿನ ಹಾಗೆ
ಇನ್ನು ಒಂದರ ಹಿಂದೊಂದರಂತೆ ಸ್ಟಾರ್ ಸಿನಿಮಾಗಳು ಬಿಡುಗಡೆಯಾಗುತ್ತಿದ್ದರೂ, ಥಿಯೇಟರ್‌ಗಳಲ್ಲಿ ಸ್ಟಾರ್ ವಾರ್‌ಗೆ ಕಾರಣವಾಗದಂತೆ, ಎರಡು ವಾರಗಳ ಅಂತದಲ್ಲಿ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಈ ಮೂಲಕ ಬಿಗ್ ಬಜೆಟ್ ಸಿನಿಮಾಗಳ ನಿರ್ಮಾಪಕರು ಸಮನ್ವಯತೆಯ ಸೂತ್ರದಂತೆ, ಬಿಡುಗಡೆಯ ತಂತ್ರ ಅನುಸರಿಸಿ ತಮ್ಮ ಸಿನಿಮಾಗಳನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಇನ್ನು ಬಿಗ್ ಸ್ಟಾರ್‌ಗಳ ಸಿನಿಮಾಗಳ ಡೇಟ್ ನಿಗಧಿಯಾಗುತ್ತಿದ್ದಂತೆ, ತೆರೆಗೆ ಬರಲು ಸಿದ್ಧವಾಗಿರುವ ಅನೇಕ ಹೊಸಬರ ಸಿನಿಮಾಗಳು ಕೂಡ ತಮ್ಮ ಬಿಡುಗಡೆಯ ದಿನಾಂಕ ನಿಶ್ವಯಿಸಿಕೊಳ್ಳಲು ಮುಂದಾಗುತ್ತಿದ್ದು, ಸ್ಟಾರ್ ಸಿನಿಮಾಗಳ ನಡುವೆಯೇ ತಮ್ಮ ಅದೃಷ್ಠ ಪರೀಕ್ಷೆಗೆ ಹೊಸಬರು ಮುಂದಾಗುತ್ತಿದ್ದಾರೆ.
ಬಿಡುಗಡೆಯಾಗಲಿರುವ ಸಿನಿಮಾಗಳು ಮತ್ತು ಅವುಗಳ ದಿನಾಂಕ ಹೀಗಿದೆ
* ಫೆ. 5, ಪ್ರಜ್ವಲ್ ದೇವರಾಜ್ ಅಭಿನಯದ “ಇನ್ಸ್‌ಪೆಕ್ಟರ್ ವಿಕ್ರಂ’
* ಫೆ. 19, ಧ್ರುವ ಸರ್ಜಾ ಅಭಿನಯದ “ಪೊಗರು’
* ಮಾ. 11, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ರಾಬರ್ಟ್’
* ಏ. 01, ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ “ಯುವರತ್ನ’
* ಏ. 15, ದುನಿಯಾ ವಿಜಯ್ ಅಭಿನಯ, ನಿರ್ದೇಶನದ “ಸಲಗ’
* ಏ. 29, ಕಿಚ್ಚ ಸುದೀಪ್ ಅಭಿನಯದ “ಕೋಟಿಗೊಬ್ಬ-3′
* ಮೇ. 14 ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ “ಭಜರಂಗಿ-2′
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.