ಫ್ಯೂಚರ್ ಗ್ರೂಪ್ ಆಸ್ತಿ ಖರೀದಿಸಿದ ರಿಲಯನ್ಸ್: ಬಾಂಬೆ ಷೇರುಪೇಟೆ ಸೂಚ್ಯಂಕ 50 ಸಾವಿರದ ದಾಖಲೆ
ಬಾಂಬೆ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 266.96 ಅಂಕ ಏರಿಕೆ
Team Udayavani, Jan 21, 2021, 10:30 AM IST
ಮುಂಬೈ: 24,713 ಕೋಟಿ ರೂಪಾಯಿ ಮೌಲ್ಯದ ಫ್ಯೂಚರ್ ಗ್ರೂಪ್ಸ್ ನ ರಿಟೈಲ್ ಆಸ್ತಿಗಳನ್ನು ಖರೀದಿಸಲು ರಿಲಯನ್ಸ್ ಇಂಡಸ್ಟ್ರೀಸ್ ಗೆ ಮಾರುಕಟ್ಟೆ ನಿಯಂತ್ರಕ ಮಂಡಳಿ ಸೆಬಿ ಅನುಮತಿ ನೀಡಿದ ಪರಿಣಾಮ ಬಾಂಬೆ ಷೇರುಪೇಟೆ ಸೂಚ್ಯಂಕ ಗುರುವಾರ(ಜನವರಿ 21, 2021) 50 ಸಾವಿರಕ್ಕೆ ತಲುಪುವ ಮೂಲಕ ಇತಿಹಾಸ ನಿರ್ಮಿಸಿದೆ.
ಇಂದಿನ ಬಾಂಬೆ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 266.96 ಅಂಕ ಏರಿಕೆಯೊಂದಿಗೆ 50,098.08ರಷ್ಟು ಅಂಕಗಳೊಂದಿಗೆ ಸಾರ್ವಕಾಲಿಕ ದಾಖಲೆ ಬರೆದಿದೆ.
ಇದನ್ನೂ ಓದಿ:ಸಚಿವರ ಖಾತೆ ಬದಲಾವಣೆ: ಮುನಿಸಿಕೊಂಡ ಮಾಧುಸ್ವಾಮಿ, ಸಂಪುಟ ಅತೃಪ್ತರ ಸಭೆ, ರಾಜೀನಾಮೆ?
ಎನ್ ಎಸ್ ಇ ನಿಫ್ಟಿ 82.80 ಅಂಕಗಳಷ್ಟು ಏರಿಕೆಯೊಂದಿಗೆ 14,727.50 ಅಂಕಗಳ ಗಡಿ ತಲುಪಿದೆ. ಷೇರುಪೇಟೆಯ ಭರ್ಜರಿ ವಹಿವಾಟಿನಿಂದ ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಎಚ್ ಸಿಎಲ್ ಟೆಕ್, ಬಜಾಜ್ ಆಟೋ, ಟೈಟಾನ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಟೆಕ್ ಮಹೀಂದ್ರಾ, ಕೋಟಕ್ ಬ್ಯಾಂಕ್, ಇಂಡಸ್ ಲ್ಯಾಂಡ್ ಬ್ಯಾಂಕ್, ಏಷ್ಯನ್ ಪೈಂಟ್, ಆಕ್ಸಿಸ್ ಬ್ಯಾಂಕ್ ಷೇರುಗಳು ಲಾಭ ಗಳಿಸಿವೆ.
ಇದನ್ನೂ ಓದಿ:ಭಜರಂಗಿ-2, ಸಲಗ.. ಸ್ಟಾರ್ ಸಿನಿಮಾಗಳ ರಿಲೀಸ್ಗೆ ಕೊನೆಗೂ ಡೇಟ್ ಫಿಕ್ಸ್
ಮತ್ತೊಂದೆಡೆ ಟಿಸಿಎಸ್, ಎಚ್ ಡಿಎಫ್ ಸಿ, ಎಚ್ ಡಿಎಫ್ ಸಿ ಬ್ಯಾಂಕ್ ಹಾಗೂ ನೆಸ್ಲೆ ಕಂಪನಿಯ ಷೇರುಗಳು ನಷ್ಟ ಅನುಭವಿಸಿವೆ. ಬಾಂಬೆ ಷೇರುಪೇಟೆ ಸೂಚ್ಯಂಕ ಬುಧವಾರದ ದಿನಾಂತ್ಯಕ್ಕೆ 393.83 ಅಂಕಗಳಷ್ಟು ಏರಿಕೆಯೊಂದಿಗೆ 49,792.12 ಅಂಕಗಳೊಂದಿಗೆ ವಹಿವಾಟು ಮುಕ್ತಾಯವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.