ಬಿಜೆಪಿ ಯೋಜನೆಗಳೇ ಮಾಯ
Team Udayavani, Jan 21, 2021, 1:18 PM IST
ಕೊರಟಗೆರೆ: ಬಿಜೆಪಿ ಸರಕಾರದ ಯೋಜನೆಗಳೇ ಮಾಯವಾಗಿವೆ. ಕ್ಷೇತ್ರದ ಅಭಿವೃದ್ಧಿಗೆ ಬಿಡುಗಡೆ ಆಗಿದ್ದ ಅನುದಾನ ಹಿಂದಕ್ಕೆ ಪಡೆದಿದ್ದೀರಾ? ಕೋವಿಡ್ ನಿರ್ವಹಣೆಯ ಹಣಕಾಸಿನ ಅಂಕಿ-ಅಂಶ ಜನರಿಗೆ ನೀಡದಿರಲು ಕಾರಣವೇನು? ಮುಖ್ಯಮಂತ್ರಿಗಳೇ ರಾಜ್ಯ ಸರಕಾರದ ಆರ್ಥಿಕ ಸ್ಥಿತಿಗತಿಯ ಬಗ್ಗೆ ತಕ್ಷಣ ಶ್ವೇತಪತ್ರ ಹೊರಡಿಸಿ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಗ್ರಹಿಸಿದರು.
ಕೊರಟಗೆರೆ ಕ್ಷೇತ್ರದ ಚನ್ನರಾಯನದುರ್ಗ ಹೋಬಳಿಯ ಜೆಟ್ಟಿ ಅಗ್ರಹಾರ, ಬುಕ್ಕಾಪಟ್ಟಣ, ಕುರಂಕೋಟೆ, ತೋವಿನಕೆರೆ, ಸಿದ್ದರಬೆಟ್ಟ ಗ್ರಾಪಂ ವ್ಯಾಪ್ತಿಯ 24 ಗ್ರಾಮಗಳಲ್ಲಿ PWD ಇಲಾಖೆಯ 3 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಮಂಗಳವಾರ ಭೂಮಿಪೂಜೆ ನೇರವೇರಿಸಿದ ವೇಳೆ ಮಾತನಾಡಿದರು.
ನಮ್ಮ ರಾಜ್ಯದಿಂದ ಕೇಂದ್ರ ಸರಕಾರಕ್ಕೆ 1.50 ಲಕ್ಷ ಕೋಟಿ ತೆರಿಗೆ ಪಾವತಿ ಆಗಲಿದೆ. ನಮ್ಮ ರಾಜ್ಯಕ್ಕೆ 30 ಸಾವಿರ ಕೋಟಿ ಹಿಂದಕ್ಕೆ ನೀಡಬೇಕಾಗಿದೆ. 5,600 ಕೋಟಿ ಮತ್ತು 864ಕೋಟಿ ಮಾತ್ರ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸರಕಾರ ನ್ಯಾಯಬದ್ಧವಾಗಿ ನಮ್ಮ ರಾಜ್ಯಕ್ಕೆ ನೀಡುವ ತೆರಿಗೆ ಹಣ ನೀಡಿಲ್ಲ. ತೆರಿಗೆ ಸಂಗ್ರಹಿಸಿ ಯೋಜನೆ ರೂಪಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿ ಪಂಗಡದ ಅಭಿವೃದ್ಧಿಗಾಗಿ ಎಸ್‌ಸಿಪಿ ಟಿಎಸ್‌ಪಿ ಯೋಜನೆ ರೂಪಿಸಲಾಗಿದೆ. ಪ್ರತಿ ವರ್ಷ ಆಯವ್ಯಯದಲ್ಲಿ ಸುಮಾರು 25ಸಾವಿರ ಕೋಟಿ ಅನುದಾನ ಮೀಸಲಿಡಲಾಯಿತು.
ಇದನ್ನೂ ಓದಿ:ಸ್ನೇಹಿತರಿಂದಲೇ ಯುವತಿಗೆ ಬ್ಲ್ಯಾಕ್‌ಮೇಲ್: ಮಾಂಗಲ್ಯ ಸರ ನೀಡಿದರೂ ಬಿಡದ ದುರುಳರು
ಯೋ ಜನೆಯ ಅನುಗುಣವಾಗಿಯೇ ಇಂದು 3 ಕೋಟಿ ರೂ. ಅನುದಾನದ ಕಾಮಗಾರಿ ಭೂಮಿ ಪೂಜೆ ನೇರವೇರಿಸಿದ್ದೇನೆ ಎಂದರು. ಜಂಪೇನಹಳ್ಳಿ, ಬುಕ್ಕಾಪಟ್ಟಣ, ಬಿಕ್ಕೆಗುಟ್ಟೆ, ಹೊಲತಾಳು, ಶಂಭೋನಹಳ್ಳಿ, ಕುರಂಕೋಟೆ, ಮಣುವಿನಕುರಿಕೆ, ದಾಸಲಕುಂಟೆ, ಕುರಿಹಳ್ಳಿ, ಬೋರಪ್ಪನಹಳ್ಳಿ, ಚಿಕ್ಕರಸನಹಳ್ಳಿ, ಚಿಕ್ಕಣ್ಣನಹಳ್ಳಿ, ಸಿಎಸ್‌ಜಿ ಪಾಳ್ಯ, ಜೋನಿಗರಹಳ್ಳಿ, ಮರೇನಾಯಕನಹಳ್ಳಿ, ನೇಗಿಲಾಲ, ಬೆಂಡೋಣಿ, ಕುಂಟೇನಹಳ್ಳಿ, ಗೌಜಗಲ್ಲು, ಮಲ್ಲೇ ಕಾವು ಗ್ರಾಮದಲ್ಲಿ ಸಿಸಿರಸ್ತೆ ಮತ್ತು ಶಾಲಾ ಕಟ್ಟಡ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಜಿಪಂ ಸದಸ್ಯೆ ಅಕ್ಕಮಹಾದೇವಿ, ಮಾಜಿ ಸದಸ್ಯ ಪ್ರಸನ್ನಕುಮಾರ್, ತಾಪಂ ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಸದಸ್ಯೆ ಜ್ಯೋತಿ, ಮಾಜಿ ಗ್ರಾಪಂ ಅಧ್ಯಕ್ಷೆ ಲಕ್ಷಿ¾à, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅರಕೆರೆಶಂಕರ್, ಅಶ್ವತ್ಥನಾರಾಯಣ್, ಯುವ ಅಧ್ಯಕ್ಷ ವಿನಯ್, ಮುಖಂಡರಾದ ನರಸಿಂಹರಾಜು, ಕಿರಣ್, ಕವಿತಾ, ಪುಟ್ಟರಾಜು, ಮಹೇಶ್ ಇತರರಿದ್ದರು.
ಜಲಾಶಯ ಕ್ಕೆ ರೈತರ 5 ಸಾವಿರ ಎಕರೆ ಕೃಷಿ ಭೂಮಿ ಮುಳುಗಡೆ ಆಗಲಿದೆ. ರೈತರಿಗೆ ನ್ಯಾಯಬದ್ಧ ಪರಿಹಾರ ಘೋಷಣೆ ಆದರೇ ಮಾತ್ರ ಭೂಮಿ. ಇಲ್ಲವಾದರೇ 1ಅಡಿ ಭೂಮಿಯು ರೈತರು ನೀಡಲ್ಲ. ನೀರಾವರಿ ಸಚಿವರ ಜೊತೆ ಪರಿಹಾರದ ಬಗ್ಗೆ ಈಗಾಗಲೇ ಚರ್ಚಿಸಿದ್ದೇನೆ.
ಡಾ.ಜಿ.ಪರಮೇಶ್ವರ್, ಶಾಸಕ, ಮಾಜಿ ಉಪಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ
Minister ಸೋಮಣ್ಣ, ಸಿ.ಎಸ್. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್: ಬಂಧನ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.