ಉದ್ಯಮ ಶೀಲತೆಯಿಂದ ಅಭಿವೃದ್ಧಿ ಸಾಧ್ಯ
Team Udayavani, Jan 21, 2021, 3:18 PM IST
ಧಾರವಾಡ: ಉದ್ಯಮ ಶೀಲತೆಯನ್ನು ಮೈಗೂಡಿಸಿಕೊಂಡಾಗಲೇ ಸ್ವ ಉದ್ಯೋಗದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ರುಡ್‌ಸೆಟ್ ಸಂಸ್ಥೆ ಅಧ್ಯಕ್ಷರಾದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಇಲ್ಲಿನ ರುಡ್‌ಸೆಟ್ ಸಂಸ್ಥೆ ಹಮ್ಮಿಕೊಂಡಿರುವ ಮಹಿಳೆಯರಿಗಾಗಿ ವಸ್ತ್ರ ವಿನ್ಯಾಸ ತರಬೇತಿ, ಪುರುಷರಿಗಾಗಿ ದ್ವಿಚಕ್ರ ವಾಹನ ರಿಪೇರಿ ಹಾಗೂ ಫೋಟೋಗ್ರಾಫಿ-ವಿಡಿಯೋಗ್ರಾಫಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಸ್ವಉದ್ಯೋಗದಲ್ಲಿ ಯಶಸ್ಸು ಸಾಧಿಸಲು ಹಣ ಮಾತ್ರ ಮುಖ್ಯವಲ್ಲ. ಬದಲಾಗಿ ಜ್ಞಾನ, ಕೌಶಲ್ಯ, ಸೃಜನಶೀಲತೆ, ಸಮಯ ಪ್ರಜ್ಞೆ ಮತ್ತು ಅನುಭವ ಆಧಾರದ ಮೇಲೆ ಸ್ವಂತ ಉದ್ಯೋಗದಲ್ಲಿ ಯಶಸನ್ನು ಗಳಿಸಬಹುದು. ಗ್ರಾಹಕರೊಡನೆ ಸೌಜನ್ಯದಿಂದ ವರ್ತಿಸುವುದರ ಮೂಲಕ ಅವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಬೇಕು. ಬದಲಾಗುತ್ತಿರುವ ಕಾಲಮಾನಕ್ಕೆ ಅನುಗುಣವಾಗಿ ಕೌಶಲ್ಯ ವೃದ್ಧಿಪಡಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ:ಐದು ವರ್ಷದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ; ಎಚ್.ಎಂ. ಶ್ರೀನಿವಾಸ
ಅತಿಥಿ ಉಪನ್ಯಾಸಕರಾದ ಅಮೃತ್ ಚರಂತಿಮಠ, ಚಂದ್ರಕಾಂತ ಹಾಗೂ ಶೋಭಾ ದುರ್ಗಾ ಇದ್ದರು. ಸಂಸ್ಥೆ ನಿರ್ದೇಶಕ ರಾಜೇಂದ್ರ ಕಗ್ಗೊàಡಿ ಸ್ವಾಗತಿಸಿದರು. ಜಗದೀಶ ಪೂಜಾರ ನಿರೂಪಿಸಿದರು. ಚನ್ನಪ್ಪಾ ದೇವಗಿರಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
BJP ಡಬಲ್ ಗೇಮ್; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
Hubli: ಜನರ ದಿಕ್ಕು ತಪ್ಪಿಸಲು ಬಿಜೆಪಿಯಿಂದ ವಕ್ಫ್ ಹೋರಾಟ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.