ಅನುದಾನ-ಅಧಿಕಾರ ಹೆಚ್ಚಳದಿಂದ ತಾಪಂ ಬಲಗೊಳಿಸಿ

ನಮ್ಮನ್ನು ಚುನಾಯಿಸಿರುವ ಮತದಾರರಿಗೆ ಯಾವುದೇ ಅನುಕೂಲ ಕಲ್ಪಿಸಲು ಸಾಧ್ಯವಾಗುತ್ತಿಲ್ಲ.

Team Udayavani, Jan 21, 2021, 4:06 PM IST

Udayavani Kannada Newspaper

ಬೀದರ: ಅನುದಾನದ ಕೊರತೆ ಮತ್ತು ಅಧಿಕಾರ ಮೊಟಕುದಿಂದಾಗಿ ತಾಪಂ ವ್ಯವಸ್ಥೆಯೇ ದುರ್ಬಲ ಆಗುತ್ತಿರುವ ಹಿನ್ನೆಲೆ ತಾಪಂ ಆಡಳಿತ ರದ್ದುಗೊಳಿಸುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ತಾಪಂಗಳನ್ನು ಮತ್ತಷ್ಟು ಬಲಪಡಿಸಿ ಆಡಳಿತ ವ್ಯವಸ್ಥೆ ಉಳಿಸಿಕೊಳ್ಳಲಿ ಎಂಬ ಅಭಿಪ್ರಾಯ ಜಿಲ್ಲೆಯ ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ. ಅಧಿಕಾರ ವಿಕೇಂದ್ರೀಕರಣದ ಮಹತ್ವಕಾಂಕ್ಷಿ ಉದ್ದೇಶದಿಂದ ರಾಜ್ಯದಲ್ಲಿ ಜಿಪಂ ಮತ್ತು ಗ್ರಾಪಂ ವ್ಯವಸ್ಥೆ ಜತೆಗೆ ತಾಪಂ ಸಹ ಸ್ಥಾಪನೆಗೊಂಡಿದೆ. ಈ ಸ್ಥಳೀಯ ಸಂಸ್ಥೆಗಳು ಗ್ರಾಮೀಣ ಅಭಿವೃದ್ಧಿಗೆ ಜಿಪಂ ಹಾಗೂ ಸರ್ಕಾರಗಳ ನಡುವೆ ಸೇತುವೆಯಾಗಿ ಕಾರ್ಯಹಿಸುತ್ತಿವೆ.

ಆದರೆ, ಅಗತ್ಯ ಅನುದಾನದ ಲಭ್ಯತೆ ಮತ್ತು ಅಧಿಕಾರದ ಇಲ್ಲದಿರುವುದು ಸಂಸ್ಥೆಗಳ ಅಸ್ತಿತ್ವದ ಪ್ರಶ್ನೆಗಳು ಉದ್ಭವಿಸಿವೆ. ಹಾಗಾಗಿ ಮೂರು ಹಂತಗಳಲ್ಲಿರುವ ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ಎರಡು ಹಂತಕ್ಕಿಳಿಸುವ ಕುರಿತು ಚರ್ಚೆಗಳು  ಕೇಳಿಬರಲಾರಂಭವಿಸಿವೆ. ಇದಕ್ಕೆ ಪುಷ್ಠಿ ಎಂಬಂತೆ ಇತ್ತೀಚೆಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಾಪಂ ವ್ಯವಸ್ಥೆ ರದ್ದುಗೊಳಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ಹೇಳಿರುವುದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಪ್ರತಿ ತಾಪಂಗಳಿಗೆ ಮುಖ್ಯಮಂತ್ರಿ ಅಭಿವೃದ್ಧಿ ನಿಧಿಯಿಂದ 2 ಕೋಟಿ ರೂ. ವಾರ್ಷಿಕ ಅನುದಾನ ಬರುತ್ತಿದೆ. ಪ್ರಸಕ್ತ ವರ್ಷದಿಂದ 15ನೇ ಹಣಕಾಸು ಯೋಜನೆಯಡಿ ಪ್ರತಿ ಪಂಚಾಯತಗೆ ಮೂರು ಹಂತದಲ್ಲಿ 80 ಲಕ್ಷ ದಿಂದ 1 ಕೋಟಿ ರೂ. ಅನುದಾನ ನೀಡಲಾಗಿದೆ. ಇದಕ್ಕೆ ಹೊರತಾಗಿ ತಾಪಂಗಳಿಗೆ ಯಾವುದೇ ಹಣಕಾಸಿನ ಲಭ್ಯತೆ ಇಲ್ಲ. ಬಿಡುಗಡೆಯಾದ ಅನುದಾನ ಹಂಚಿಕೆಯಾದರೆ ಒಂದು ಕ್ಷೇತ್ರಕ್ಕೆ ವಾರ್ಷಿಕ 7ರಿಂದ 8 ಲಕ್ಷ ರೂ. ಮಾತ್ರ ಲಭಿಸುತ್ತಿದೆ. ಆದರೆ, ಇದು ಯಾವುದಕ್ಕೂ ಸಾಲದು. ಇದರಿಂದ ತಮ್ಮ ಕ್ಷೇತ್ರ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಕೇವಲ ಕಟ್ಟಡಗಳ ದುರಸ್ತಿ ಕೆಲಸವನ್ನಷ್ಟೇ ಮಾಡಲು ಸಾಧ್ಯ ಎಂದು ತಾಪಂ ಅಧ್ಯಕ್ಷರು, ಸದಸ್ಯರುಗಳು ಬೇಸರ ವ್ಯಕ್ತಪಡಿಸುತ್ತಾರೆ.

ಅನುದಾನ, ಅಧಿಕಾರ ಇಲ್ಲದೇ ತಾಪಂ ಸದಸ್ಯರಾಗಿ ನಮ್ಮನ್ನು ಚುನಾಯಿಸಿರುವ ಮತದಾರರಿಗೆ ಯಾವುದೇ ಅನುಕೂಲ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಕೇವಲ
ಪರಿಶೀಲನಾ ಸಭೆಗಳಿಗೆ ಮತ್ತು ರಾಜಕೀಯ ನಾಯಕರುಗಳಿಗೆ ಅವಕಾಶ ಮಾಡಿಕೊಡಲು ಈ ಸಂಸ್ಥೆ ಸೃಷ್ಟಿಯಾದಂತಾಗಿದೆ. ಸದ್ಯ ಜಿಪಂ-ತಾಪಂಗಳಿಗಷ್ಟೇ ಹೆಚ್ಚಿನ ಅಧಿಕಾರ ಇದೆ. ಮೂಲಕ ಉದ್ಯೋಗ ಖಾತ್ರಿ ಯೋಜನೆ ಮೂಲಕ ಒಂದು ಕೋಟಿ ರೂ.ಗಳಷ್ಟು ಅನುದಾನ ಮತ್ತು ವಸತಿ ಯೋಜನೆಗಳಡಿ ಬಡವರಿಗೆ ಮನೆಗಳನ್ನು ಒದಗಿಸುವ ಅವಕಾಶ ಇರುವುದರಿಂದ ಗ್ರಾಪಂ ಸದಸ್ಯರಾಗುವುದೇ ಉತ್ತಮ ಎಂಬ ಭಾವನೆ ಅವರಲ್ಲಿ ಮೂಡಿದೆ. ಗ್ರಾಪಂ ಮತ್ತು ಜಿಪಂಗೆ ಸೇತುವೆಯಾಗಿರುವ ತಾಪಂಗಳ ವ್ಯವಸ್ಥೆ ಅಗತ್ಯತೆ ಇದೆ. ಆದರೆ, ತಾಪಂಗಳಿಗೆ ವಾರ್ಷಿಕ ಅನುದಾನ ಹೆಚ್ಚಿಸುವ ಜತೆಗೆ ಆಡಳಿತ ವ್ಯವಸ್ಥೆಯಲ್ಲಿ ಮತ್ತಷ್ಟು ಅಧಿಕಾರ ಕಲ್ಪಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸುಗಮ ಆಡಳಿತಕ್ಕಾಗಿ ತಾಪಂ ವ್ಯವಸ್ಥೆ ಅನಿವಾರ್ಯ. ಆದರೆ, ಅನುದಾನ, ಅಧಿಕಾರದ ಕೊರತೆ ಇದೆ. ಅನುದಾನ ಕೇವಲ ಗ್ರಾಮಗಳಲ್ಲಿ ದುರಸ್ತಿ ಕೆಲಸಕ್ಕೆ ಸೀಮಿತವಾಗುತ್ತಿದೆ. ನಮ್ಮನ್ನು ಸದಸ್ಯರಾಗಿ ಮಾಡಿರುವ ಜನರಿಗೆ ಅನುಕೂಲ ಕಲ್ಪಿಸುವ ಸಾಧ್ಯವಾಗುತ್ತಿಲ್ಲ ಎಂಬ ಬೇಸರ ಇದೆ. ತಾಪಂಗಳನ್ನು ಮ ತ್ತಷ್ಟು ಬಲಪಡಿಸಿ ಆಡಳಿತ ವಿಕೇಂದ್ರೀಕರಣ ವ್ಯವಸ್ಥೆ ಪರಿಣಾಮಕಾರಿಗೊಳಿಸುವ ಅಗತ್ಯವಿದೆ. ತಾಪಂ ವ್ಯವಸ್ಥೆ ರದ್ದು ಸರ್ಕಾರಕ್ಕೆ ಬಿಟ್ಟ ವಿಚಾರ.
ರಮೇಶ ಡಾಕುಳಗಿ, ಹುಮನಾಬಾದ ತಾಪಂ ಅಧ್ಯಕ

ಅಧಿಕಾರ ವಿಕೇಂದ್ರೀಕರಣಕ್ಕಾಗಿ ಮೂರು ಹಂತಗಳ ಪಂಚಾಯತ್‌ ವ್ಯವಸ್ಥೆ ಅತ್ಯಗತ್ಯ. ಆದರೆ, ತಾಪಂಗಳಿಗೆ ಅಗತ್ಯ ಅನುದಾನವೇ ಸಿಗದಿರುವುದು ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ಸೌಲಭ್ಯ ಒದಗಿಸಲು  ಸಾಧ್ಯವಾಗುತ್ತಿಲ್ಲ. ಹೆಸರಿಗೆ ಮಾತ್ರ ಸದಸ್ಯ ಎಂಬಂತಾಗಿದೆ. ಹಾಗಾಗಿ ಜನರ ಸೇವೆ ಮಾಡಲು ಗ್ರಾಪಂ ಸದಸ್ಯರಾಗುವುದೇ ಉತ್ತಮ ಎಂಬ ಭಾವನೆ ಮೂಡಿದೆ. ವಿಜಯಕುಮಾರ ಬರೂರ್‌, ಬೀದರ ತಾಪಂ ಅಧ್ಯಕ್ಷ

ಶಶಿಕಾಂತ ಬಂಬುಳಗ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್‌ ಖಂಡ್ರೆ

ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ

Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

Lokayukta Raid: ಜಿಲ್ಲಾ ತರಬೇತಿ‌ ಕೇಂದ್ರದ‌ ಅಧಿಕಾರಿ‌ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ

Lokayukta Raid: ಜಿಲ್ಲಾ ತರಬೇತಿ‌ ಕೇಂದ್ರದ‌ ಅಧಿಕಾರಿ‌ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ

Waqf Issue: ಬೀದರ್‌ ರೈತ ಸಂಘ, ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ

Waqf Issue: ಬೀದರ್‌ ರೈತ ಸಂಘ, ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.