ಗಡಿ ತಾಲೂಕು ಮಾಲೂರಿನಲ್ಲಿ ಕನ್ನಡ ಕಲರವ


Team Udayavani, Jan 21, 2021, 7:47 PM IST

kannada kalarava at malooru

ಮಾಲೂರು: ಸಮಾಜಕ್ಕೆ ನಿಜ ಸ್ವರೂಪ ಸಾರುವ ಶಕ್ತಿ ಹೊಂದಿರುವ ಸಾಹಿತ್ಯದ ಗಟ್ಟಿತನಕ್ಕಾಗಿ ಜಾತಿ ಧರ್ಮಗಳನ್ನು ಮೀರಿ ಪ್ರತಿ ವ್ಯಕ್ತಿಯ ಭಾವನಾತ್ಮಕ ಭಾಷೆಯ ಗಟ್ಟಿತನವನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಆರಂಭಿಸಲಾಗಿದೆ ಎಂದು ಖ್ಯಾತ ನಾಟಕಕಾರ, ವಿಮರ್ಷಕ ಸಾಹಿತಿ ಡಾ.ಕೆ.ವೈ.ನಾರಾಯಣ ಸ್ವಾಮಿ ತಿಳಿಸಿದರು.

ಪಟ್ಟಣದ ಮಹಾರಾಜ ವೃತ್ತದಲ್ಲಿ ಕುಂತೂರು ಚಂದ್ರಪ್ಪ ಹಾಗೂ ಜಾನ್‌ ಅಮ್ಮೇಡ ವೇದಿಕೆಯಲ್ಲಿ ನಡೆದ ತಾಲೂಕು ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ವಿಶ್ವದಲ್ಲಿ ಅತ್ಯಂತ ಹೆಚ್ಚು ಆಯುಧಗಳನ್ನು ಹೊಂದಿರುವ ವ್ಯಕ್ತಿಯ ಅತ್ಯಂತ ಪುಕ್ಕಲು ತನದಿಂದ ಕೂಡಿದ್ದು ಸಾಹಿತ್ಯ ಬಲ್ಲ ವ್ಯಕ್ತಿಯು ಯಾವುದೇ ಅಂಜು ಅಳಕಿಲ್ಲದೆ ಸತ್ಯವನ್ನು ಹೊರ ಹಾಕಬಲ್ಲ. ಜನರ ಹಾಡು ಮಾತುಗಳಿಂದ ರಚಿತವಾದ ಸಾಹಿತ್ಯಕ್ಕೆ ಹೆಚ್ಚು ಗಟ್ಟಿತನವಿದ್ದು ಇಂದಿನ ಅಧುನಿಕ ಯುಗದಲ್ಲಿ ಯೂ ಗಟ್ಟಿ ಯಾಗಿ ನೆಲೆ ಕಂಡಿರುವ ಕನ್ನಡ ಸಾಹಿತ್ಯಕ್ಕೆ ಅಂತ ಹದೊಂದು ಪರಂಪರೆ ಇದ್ದು , ಸಾಹಿತ್ಯ ಸಮ್ಮೇಳನಗಳು ಮಹಾನಗರಗಳಿಂದ ಆರಂಭ ವಾಗಿ ಗ್ರಾಪಂಗಳವರೆಗೂ ಹರಡಿ ಕೊಂಡಿರುವ ಕಾರಣ ಆಧುನೀಕತೆ ಭರಾಟೆಯನಡುವೆಯೂ ಕನ್ನಡ ಸಾಹಿತ್ಯ ಕಟ್ಟಿತನದಿಂದ ಬೇರು ಬಿಟ್ಟಿದೆ ಎಂದರು.

ನಿಲುವಳಿ ಅಂಗೀಕರಿಸಿ:ಮಾಲೂರು ತಾಲೂಕು ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಶದ

ಸಹೃದಯ ಗೆಳೆಯ ಸಿ.ಲಕ್ಷ್ಮೀ ನಾರಾಯಣ್‌ ಸರ್ವಾಧ್ಯಕ್ಷರಾಗಿರುವ ಈ ವೇದಿಕೆಯಿಂದ ರೈತರ ಪರವಾದ ನಿಲುವಳಿ ಅಂಗೀಕರಿಸಿ ಸರ್ಕಾರಕ್ಕೆ ರವಾನಿಸುವ ಕೆಲಸವಾಗಬೇಕಾಗಿದೆ ಎಂದರು.

ಸಮ್ಮೇಳನ ಸರ್ವಾಧ್ಯಕ್ಷ ಸಿ.ಲಕ್ಷ್ಮೀ ನಾರಾಯಣ್‌ ಮಾತನಾಡಿ, ನಾಡಿನ ಅನೇಕ ಕಡೆಗಳಲ್ಲಿ ಇಂದಿಗೂ ಮಾಲೂರಿನ ಹೆಸರು ಹೇಳುವ ನೆನಪುಗಳಾಗಿ ಇಲ್ಲಿ ತಯಾರಿಸಲಾಗುವ ಇಟ್ಟಿಗೆ ಹೆಂಚು ಜೀವಂತವಾಗಿದೆ. ಬದಲಾದ ತಂತ್ರಜ್ಞಾನ, ಆಧುನೀಕತೆ, ಮಣ್ಣಿನ ಕೊರತೆ, ಕೂಲಿ ಕಾರ್ಮಿಕರ ಕೊರತೆಗಳಿಂದ ಇಲ್ಲಿನ ಇಟ್ಟಿಗೆ ಹಾಗೂ ಹೆಂಚಿನ ಉದ್ಯಮ ತೆರೆಮರೆಗೆ ಸರಿಯುತ್ತಿದೆ. ಹೂ ಹಣ್ಣು ತರಕಾರಿ ಬೇಸಾಯದಲ್ಲಿ ಅಗ್ರ ಪಂಕ್ತಿಯಲ್ಲಿನ ಇಲ್ಲಿನ ರೈತರು ಅಂತರ್ಜಲದ ಬತ್ತಿಹೋಗಿದ್ದ ದಿನಗಳಲ್ಲಿ ಬದುಕೇ ಮುಗಿದು ಹೋಯಿತು ಎನ್ನುವ ದಿನಗಳಲ್ಲಿ ಕೆ.ಸಿ.ವ್ಯಾಲಿಯಿಂದು ಕೆರೆಗಳಿಗೆ ನೀರು ಹರಿಸುತ್ತಿರುವುದರಿಂದ ಬತ್ತಿದ ಸೆಲೆಯಲ್ಲಿ ಆಶಾ ಭಾವನೆ ಮೂಡಿಸುತ್ತಿದ್ದಾರೆಂದರು.

ಬದ್ಧನಾಗಿರುವೆ: ಶಾಲಾ ಕಾಲೇಜು ದಿನಗಳಿಂದಲೂ ನಾಡು ಕಂಡ ಮಹನೀಯವರ ವಿಚಾರವಾದಿಗಳ ಮತ್ತು ತತ್ವಜ್ಞಾನಿಗಳ ಬರಹಗಳ ಪ್ರೇರಣೆ ಯಿಂದ ಮತ್ತು ಜಿಲ್ಲೆ ಮತ್ತು ರಾಜ್ಯದ ಸಾಹಿತಿಗಳು ಬುದ್ದಿಜೀವಿಗಳ ಒಡನಾಟದಿಂದ ಸಾಹಿತ್ಯ ಕ್ಷೇತ್ರದಲ್ಲಿ ಇಲ್ಲಿವರೆಗೂ ಉಳಿಯುವಂತೆ ಮಾಡಿರುವುದು ಅತ್ಯಂತ ಹೆಮ್ಮ ಎನಿಸಿದೆ. ಇನ್ನು ಅಧ್ಯಕ್ಷನಾಗಿ ನನ್ನಿಂದಾಗುವ ಕನ್ನಡದ ಕೆಲಸಗಳಿಗೆ ಕಂಕಣ ಬದ್ಧನಾಗಿರುತ್ತೇನೆ ಎಂದು ತಿಳಿಸಿದರು.

ಮೆರವಣಿಗೆ:ಸಮ್ಮೇಳದ ವಿಶೇಷವಾಗಿ ರಾಷ್ಟ್ರಧ್ವಜವನ್ನು ತಹಶೀಲಾœರ್‌ ಎಂ.ಮಂಜುನಾಥ್‌, ನಾಡಧ್ವಜವನ್ನು ಕಸಾಪದ ಜಿಲ್ಲಾ ಅಧ್ಯಕ್ಷ ನಾಗಾನಂದ ಕೆಂಪರಾಜ್‌, ಪರಿಷತ್‌ ಧ್ವಜವನ್ನು ತಾಲೂಕು ಅಧ್ಯಕ್ಷ ದಾ.ಮು.ವೆಂಕಟೇಶ್‌ ಆರೋಹಣ ನಡೆಸಿದರು. ಅದ್ಧೂರಿ ಅರ್ಥಪೂರ್ಣ ಮೆರವಣಿಗೆಗೆ ಶಾಸಕ ಕೆ.ವೈ.ನಂಜೇಗೌಡ ಚಾಲನೆ ನೀಡಿದರು. ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಆರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ಡಾ.ಬಿ.ಆರ್‌.ಅಂಬೇಡ್ಕರ್‌ ಪುತ್ತಳಿಗೆ ಮಾಲಾರ್ಪಣೆಯ ನಂತರ ಪಿ.ಲಂಕೇಶ್‌ ಅವರ ದ್ವಾರದ ಮೂಲಕ ಹಾದು ವೇದಿಕೆ ಕಾರ್ಯಕ್ರಮ ತಲುಪಿತು.  ಕಾರ್ಯಕ್ರಮದ ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷ ಎನ್‌.ವಿ.ಮುರಳೀಧರ, ಆರ್‌  ಪ್ರಭಾಕರ್‌, ತಾಪಂ ಇಒ ವಿ.ಕೃಷ್ಣಪ್ಪ, ಪುರಸಭಾ ಮುಖ್ಯಾಧಿಕಾರಿ ನಜೀರ್‌ಸಾಬ್‌, ಬಿಇಒ ಕೃಷ್ಣಮೂರ್ತಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಮುನೇಗೌಡ ತಾಪಂ ಉಪಾಧ್ಯಕ್ಷೆ ನಾಗವೇಣಿ ಚಂದ್ರು, ಪುರಸಭಾ ಸದಸ್ಯರಾದ ಪರಮೇಶ್‌, ಭಾರತಿ ಶಂಕರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್‌.ನರಸಿಂಹ ಮತ್ತಿತರರು ಇದ್ದರು. ಪಟ್ಟಣದ ಹೆಸರಾಂತ ಗಾಯಕರಾದ ಗುಲ್ಜಾರ್‌, ಸಿ.ಆರ್‌.ನಟರಾಜ್‌, ಪ್ರಸನ್ನ ವೆಂಕಟೇಶ್‌, ಶೀಲಾಸೋಮಶೇಖರ್‌, ಜ.ಮು. ಚಂದ್ರ ನಾಡಗೀತೆ, ರೈತಗೀತೆ ಪ್ರಸ್ತುತ ಪಡಿಸಿದರು

ಇದನ್ನೂ ಓದಿ:ಬೆಳಗಾವಿ ನಮ್ಮದೆಂದ ಮಹಾ ಸಿಎಂ ವಿರುದ್ಧ ಧರಣಿ

ಸಮ್ಮೇಳನಕ್ಕೆ ಪಿಚ್ಚಳ್ಳಿಯ ಗಾಯನ ಮೆರುಗು

ತಾಲೂಕು ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಒಡನಾಡಿಯಾಗಿ ಸಾರಂಗ ರಂಗದ ರೂವಾರಿಗಳಲ್ಲಿ ಒಬ್ಬರಾಗಿರುವ ಸಿ.ಲಕ್ಷ್ಮೀನಾರಾಯಣ್‌ ಅವರ ಕಾರ್ಯಕ್ರಮದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದ ನಾಡಿನ ಖ್ಯಾತ ಜಾನಪದ ಗಾಯಕ ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪಿಚ್ಚಹಳ್ಳಿ ಶ್ರೀನಿವಾಸ್‌ ಸಂತ ಪರಂಪರೆಯ ಖ್ಯಾತಿಯ ಕೈವಾರ ತಾತಯ್ಯನವರು ರಚಿಸಿ ಡಾ.ಕೆ. ವೈ.ನಾರಾಯಣಸ್ವಾಮಿ ಅವರು ಕನ್ನಡಕ್ಕೆ ಅನುವಾದಿಸಿರುವ ಏನಮ್ಮ ಗಂಗಾಭವಾನಿ ಎಂಬ ಗೀತೆಯನ್ನು ಹಾಡಿ ಸಭಿಕರ ಮನದಲ್ಲಿ ಸಾಹಿತ್ಯದ ಪರಂಪರೆ ಬಿತ್ತಿದರು.

ಎಂ.ರವಿಕುಮಾರ್‌

ಟಾಪ್ ನ್ಯೂಸ್

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

Kolar

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

17-bng

Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

16-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವು

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

India’s first FIP ​​Padel tournament begins

FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.