![City](https://www.udayavani.com/wp-content/uploads/2025/02/City-1-415x249.jpg)
![City](https://www.udayavani.com/wp-content/uploads/2025/02/City-1-415x249.jpg)
Team Udayavani, Jan 22, 2021, 8:01 AM IST
22-01-2021
ಮೇಷ: ಹೊಸ ವಾಹನ ಖರೀದಿ ಇದ್ದೀತು. ದೂರ ಪ್ರಯಾಣದಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ವಿದ್ಯಾರ್ಜನೆಯಲ್ಲಿ ಆಶಾಭಂಗವಾದೀತು. ಅಲಂಕಾರಿಕ ಸಾಮಾಗ್ರಿಗಳ ವರ್ತಕರಿಗೆ ಲಾಭಾಂಶ ಕಡಿಮೆ ಇರುವುದು.
ವೃಷಭ: ವೈದ್ಯಕೀಯ ವಿಭಾಗದ ಕೆಲಸಗಾರರಿಗೆ ಮುಂಭಡ್ತಿ ಇದೆ. ಕೃಷಿ ಚಟುವಟಿಕೆಗಳಿಗೆ ವಿಘ್ನ ಪರಂಪರೆ ದವಸಧಾನ್ಯಗಳ ಬೆಲೆ ಏರಿಕೆ ಪಡೆದೀತು. ಸ್ಥಿರಾಸ್ತಿ ಮಾರಾಟ ಯಾ ಗೃಹ ನಿವೇಶನಗಳ ವ್ಯವಹಾರ ಇದೆ.
ಮಿಥುನ: ಗಾಯನ, ನರ್ತನ ಚಿತ್ರಕಲಾರಂಗದವರಿಗೆ ವಿದೇಶ ಯಾನ ಸೌಭಾಗ್ಯ ಯಾತ್ರೆ, ಪುಣ್ಯಕ್ಷೇತ್ರ ಸಂದರ್ಶನವೂ ಇದ್ದೀತು. ಕಾರ್ಮಿಕರಿಗೆ ವರ್ಗಾವಣೆ ಇದ್ದೀತು. ಜವುಳಿ ವಿಭಾಗದವರಿಗೆ ಪುರಸ್ಕಾರ ದೊರಕೀತು.
ಕರ್ಕ: ಮಗನ ವಿದ್ಯಾಭ್ಯಾಸದ ಚಿಂತೆಯಾದೀತು. ಆರ್ಥಿಕವಾಗಿ ಅನೇಕ ಬಗೆಯ ವೆಚ್ಚಗಳು ಕಾಣಿಸುವುದರಿಂದ ಮಾನಸಿಕ ಚಿಂತೆ ಹೆಚ್ಚಲಿದೆ. ಉದ್ಯೋಗ ನಿಮಿತ್ತ ಪರಸ್ಥಳಕ್ಕೆ ಯಾನವು ಕೂಡಿ ಬಂದೀತು.
ಸಿಂಹ: ಸುಖದುಃಖ ಸಮ್ಮಿಶ್ರ ಅನುಭವ ನಿಮ್ಮದಾಗಲಿದೆ. ಗುರುಕರುಣೆ ದೊರಕದೆ ಕ್ಲೇಶ ಪಡುವಿರಿ. ಉದರ ವ್ಯಾಧಿ, ಚರ್ಮರೋಗ, ದೀರ್ಘಕಾಲಿಕ ರಜೆ, ನಿರಂತರ ಬಾಧಕವೆನಿಸಲಿದೆ. ಕಾರ್ಯ ವಿಳಂಬವಿದೆ.
ಕನ್ಯಾ: ಖರ್ಚುವೆಚ್ಚಗಳು ಹೆಚ್ಚಾಗಲಿವೆ. ಕುಟುಂಬಿಕವಾಗಿ ಒಳಜಗಳ ಮನಸ್ಸಿಗೆ ನೋವು ತಂದೀತು. ಧಾರ್ಮಿಕ ಕಾರ್ಯಕ್ರಮಗಳು ಜರಗಲಿದೆ. ಜವಾಬ್ದಾರಿಯುತ ಸ್ಥಾನ ಪ್ರಾಪ್ತಿ ಮಹತ್ಕಾರ್ಯ ಭರಾಟೆಯಿದೆ.
ತುಲಾ: ಕಾಲ್ಕೆರೆದು ಜಗಳ ಮಾಡುವ ಶತ್ರುವೊಬ್ಬನಿಂದಾಗಿ ಕಾರ್ಯಪ್ರವೃತ್ತಿಯಲ್ಲಿ ಕಿರಿಕಿರಿ ಪ್ರವಾಸಾದಿಗಳೂ ಶ್ರಮ ತರಲಿದೆ. ಸಂಚಾರ ಹೆಚ್ಚು ಇದ್ದು ಆರೋಗ್ಯ ಹಾಳಾದೀತು. ವಿದ್ಯಾಪ್ರಗತಿ ಇದ್ದು ಸಂತಸ.
ವೃಶ್ಚಿಕ: ಬಂಧುಗಳಿಗೆ ಸಹಾಯ, ಋಣಬಾಧೆ ಎಲ್ಲಾ ಕಡಿಮೆಯಾದೀತು. ಗೌಪ್ಯ ವಿಚಾರ ಬಹಿರಂಗವಾಗಿ ರಾದ್ಧಾಂತವಾದೀತು. ಮಡದಿಯ ಆರೋಗ್ಯದಲ್ಲಿ ಏರುಪೇರು ಕಂಡುಬಂದೀತು. ಬಂಡವಾಳದಿಂದ ಆದಾಯವಿದೆ.
ಧನು: ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯವಿದೆ. ಯಾಂತ್ರಿಕ ವೃತ್ತಿ, ವ್ಯಾಪಾರ, ವಹಿವಾಟು ಸ್ಥಗಿತಗೊಳ್ಳಲಿದೆ. ಜಾನುವಾರು, ವೈದ್ಯಕೀಯ ವೃತ್ತಿ ನಿರತರರಿಗೆ ಈ ಮಾಸ ಹಿತವಲ್ಲ. ವೃಥಾ ಜನ ವಿರೋಧ ಕಂಡುಬರುವುದು.
ಮಕರ: ಸ್ವಾಭಿಮಾನಿಯಾದ ನೀವು ತುಂಬಾ ಸಹಿಷ್ಣುತೆಯನ್ನು ತೋರಲಿದ್ದೀರಿ. ಗೃಹಭಾವದ ಸಮೃದ್ಧಿಯಿಂದ ಇದ್ದುದರಲ್ಲೇ ತೃಪ್ತಿ ಕಾಣಬೇಕಾದೀತು. ಶುಭ ಕಡಿಮೆಯಾದರೂ ಅಧಿಕ ಅಶುಭ ಕಂಡುಬಾರದು. ಶುಭವಿದೆ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
Modern City: ದುಬಾೖ ಮಾದರಿ ದೇಶದಲ್ಲೂ ಫಿನ್‌ಟೆಕ್ ಸಿಟಿ ನಿರ್ಮಾಣ
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
You seem to have an Ad Blocker on.
To continue reading, please turn it off or whitelist Udayavani.