![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jan 22, 2021, 11:18 AM IST
ಬೆಂಗಳೂರು: ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡಿದ ನಂತರ ಆರಂಭವಾಗಿದ್ದ ಅಸಮಾಧಾನಕ್ಕೆ ಅಂತ್ಯಹಾಕಲು ಸಿಎಂ ಯಡಿಯೂರಪ್ಪ ನಿರ್ಧರಿಸಿದ್ದು, 7 ಮಂದಿ ಸಚಿವರ ಖಾತೆಯಲ್ಲಿ ಬದಲಾವಣೆ ಮಾಡಿದ್ದಾರೆ.
ಕೆ.ಗೋಪಾಲಯ್ಯ ಅವರಿಗೆ ಅಬಕಾರಿ ಖಾತೆ, ಎಂಟಿಬಿ ನಾಗರಾಜ್ ಗೆ ಪೌರಾಡಳಿತ, ಸಕ್ಕರೆ ಖಾತೆ, ಆರ್.ಶಂಕರ್ ಅವರಿಗೆ ತೋಟಗಾರಿಕೆ, ರೇಷ್ಮೆ ಖಾತೆ ಮತ್ತು ಡಾ.ಕೆ.ಸಿ.ನಾರಾಯಣಗೌಡ ಅವರಿಗೆ ಯುವಜನ ಕ್ರೀಡೆ ಜೊತೆಗೆ ಹೆಚ್ಚುವರಿಯಾಗಿ ಯೋಜನೆ ಸಾಂಖ್ಯಿಕ ಅಂಕಿ ಅಂಶಗಳ ಖಾತೆ ನೀಡಲಾಗಿದೆ.
ಮಾಧುಸ್ವಾಮಿ ಅವರಿಂದ ಕನ್ನಡ ಮತ್ತು ಸಂಸ್ಕೃತಿ ಖಾತೆ ಹಿಂಪಡೆದು ಹಜ್ ಮತ್ತು ವಕ್ಫ್ ಖಾತೆ ನೀಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ.
ಸಿಎಂ ಬಿಎಸ್ ವೈ ಅವರು ಗುರುವಾರವಷ್ಟೇ ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡಿದ್ದರು. ಇದರೊಂದಿಗೆ ಕೆಲವು ಸಚಿವರ ಖಾತೆಗಳಲ್ಲಿ ಬದಲಾವಣೆ ಮಾಡಿದ್ದರು. ಬಿಎಸ್ ವೈ ಈ ನಡೆ ಸಚಿವರುಗಳು ಅಸಮಾಧಾನಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ:ಮಾಜಿ ಅತೃಪ್ತರ ಹಾಲಿ ಅತೃಪ್ತಿ : ಕೊಟ್ಟ ಖಾತೆಯಲ್ಲಿ ಕೆಲಸ ಮಾಡಲು ಸಿಎಂ ಸೂಚನೆ
ಎಂಟಿಬಿ ನಾಗರಾಜ್ ಅವರು ವಸತಿ ಖಾತೆಗಾಗಿ ಮನವಿ ಮಾಡಿದ್ದರು ಎನ್ನಲಾಗಿತ್ತು. ಆದರೆ ಅವರಿಗೆ ಅಬಕಾರಿ ಖಾತೆ ನೀಡಲಾಗಿತ್ತು. ಇದರಿಂದ ಮುನಿಸಿಕೊಂಡಿದ್ದ ಅವರು ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಇದೀಗ ಎಂಟಿಬಿಗೆ ಪೌರಾಡಳಿತ, ಸಕ್ಕರೆ ಖಾತೆ ನೀಡಲಾಗಿದೆ.
ನಿನ್ನೆ ತೋಟಗಾರಿಕೆ ಮತ್ತು ಸಕ್ಕರೆ ಸಚಿವರಾಗಿದ್ದ ಕೆ.ಗೋಪಾಲಯ್ಯ ಅವರಿಗೆ ಅಬಕಾರಿ ಖಾತೆ ನೀಡಲಾಗಿದೆ. ಪೌರಾಡಳಿತ ಮತ್ತು ರೇಷ್ಮೆ ಸಚಿವರಾಗಿದ್ದ ಆರ್.ಶಂಕರ್ ಅವರಿಗೆ ತೋಟಗಾರಿಕೆ, ರೇಷ್ಮೆ ಖಾತೆಯನ್ನು ಇಂದು ಸಿಎಂ ಬಿಎಸ್ ವೈ ನೀಡಿದ್ದಾರೆ.
ಇದನ್ನೂ ಓದಿ: ಅತೃಪ್ತಿ ಮುಂದುವರಿಸಿದರೆ ಸಚಿವರ ಮನೆಮುಂದೆ ಧರಣಿ ಮಾಡುತ್ತೇವೆ: ಬಿಜೆಪಿ ಶಾಸಕರ ವಾರ್ನಿಂಗ್
ಯುವಜನ ಸೇವೆ ಮತ್ತು ಕ್ರೀಡೆ ಸಚಿವ ಡಾ.ಕೆ.ಸಿ.ನಾರಾಯಣ ಗೌಡ ಅವರಿಗೆ ಯೋಜನೆ ಸಾಂಖ್ಯಿಕ ಅಂಕಿ ಅಂಶಗಳ ಖಾತೆ ನೀಡಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.