ಅಬಕಾರಿ ಇಲಾಖೆಯಲ್ಲಿ ಮಾಡುವುದೇನಿದೆ?
Team Udayavani, Jan 22, 2021, 12:10 PM IST
ಹೊಸಕೋಟೆ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಳೆದು ತೂಗಿ ಸಂಪುಟಕ್ಕೆ ಸಪ್ತ ಸಚಿವರ ಸೇರ್ಪಡೆ, ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದೆ. ವಸತಿ ಖಾತೆ ಮೇಲೆ ಕಣ್ಣಿಟ್ಟಿದ್ದ ಹೊಸಕೋಟೆಯ ಎಂಟಿಬಿ ನಾಗರಾಜ್ ಅವರಿಗೆ ಅಬಕಾರಿ ಖಾತೆ ಲಭಿಸಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ.
ಗುರುವಾರ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನಿವಾಸದಲ್ಲಿ ಅವರನ್ನು ಭೇಟಿಯಾದ ಬಳಿಕ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಮದ್ಯ ತಯಾರು ಮಾಡುವ ಕಂಪನಿಗಳಿಂದ ಮದ್ಯ ಖರೀದಿಸಿ ಹೋಲ್‌ಸೇಲ್ ದರದಲ್ಲಿ ವಿತರಕರಿಗೆ ಕೊಡಲಾಗುತ್ತದೆ. ವಿತರಕರು ಇದನ್ನು ಅಂಗಡಿಗೆ ಮಾರಾಟ ಮಾಡಿ ಬಂದ ಹಣ ಸರ್ಕಾರಕ್ಕೆ ತಲುಪಿಸುತ್ತಾರೆ. ಇಲ್ಲಿ ನಾನು ಮಾಡುವ ಕೆಲಸ ಏನೂ ಇಲ್ಲ ಎಂದು ಎಂಟಿಬಿ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಚ್ .ನಾಗೇಶ್ ಅವರ ರಾಜೀನಾಮೆಯಿಂದ ಖಾಲಿ ಇದ್ದ ಅಬಕಾರಿ ಖಾತೆಯನ್ನು ಎಂಟಿಬಿ ನಾಗರಾಜ್ ಅವರಿಗೆ ನೀಡಲಾಗಿದ್ದು, ಇದನ್ನು ನಯವಾಗಿ ನಿರಾಕರಿಸಿದ್ದಾರೆ.
ಅಬಕಾರಿಯಿಂದ ಜನಸೇವೆ ಸಾಧ್ಯವೇ?: ಗುರುವಾರ ಸಿಎಂ ಯಡಿಯೂರಪ್ಪ ಅಬಕಾರಿ ಖಾತೆಯನ್ನು ಎಂಟಿಬಿ ನಾಗರಾಜ್ ಅವರಿಗೆ ನೀಡುತ್ತಿದ್ದಂತೆ ಬೇಸರಗೊಂಡಿರುವ ಅವರು, ನಾನು ಕಾಂಗ್ರೆಸ್ ನಲ್ಲಿದ್ದಾಗ ವಸತಿ ಸಚಿವನಾಗಿ ಕಾರ್ಯನಿರ್ವಹಿಸಿದ್ದೆ. ಆ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದಿದ್ದೇನೆ. ಅಬಕಾರಿ ಇಲಾಖೆ ನೀಡಿದರೆ ಜನರಿಗೆ ಏನಾದರೂ ಸೇವೆ ಮಾಡಲು ಸಾಧ್ಯವೇ.?
ವಸತಿ ಖಾತೆ ಕೊಟ್ಟರೆ ರಾಜ್ಯದಲ್ಲಿರುವ ಎಷ್ಟೋ ಜನ ನಿರಾಶ್ರಿತರಿಗೆ, ಬಡವರಿಗೆ ನಿವೇಶನ ಹಂಚಿಕೆ ಮಾಡಬಹುದಿತ್ತು. ಸ್ಲಂಗಳನ್ನು ಅಭಿವೃದ್ಧಿ ಮಾಡುವ ಕೆಲಸ ಮಾಡಬಹುದಾಗಿತ್ತು. ಸಾರ್ವಜನಿಕವಾಗಿ ಕೆಲಸ ಮಾಡಿ ಪಕ್ಷಕ್ಕೆ ಒಳ್ಳೆಯ ಹೆಸರು ತರುವಂತೆ ಕಾರ್ಯ ಮಾಡುತ್ತಿದ್ದೆ. ಕಾಂಗ್ರೆಸ್‌ನಲ್ಲಿ ಇದ್ದಾಗ ನಾನು ನಿರ್ವಹಿಸುತ್ತಿದ್ದ ವಸತಿ ಖಾತೆ ತ್ಯಾಗ ಮಾಡಿ ಬಂದಿದ್ದು, ಅದೇ ಖಾತೆ ನೀಡಿದರೆ ನನಗೆ ಸಮಾಧಾನ, ಪ್ರತಿಫಲ ಸಿಗುತ್ತಿತ್ತು ಎಂದಿದ್ದಾರೆ.
ಖಾತೆ ಹಂಚಿಕೆ ಬೆನ್ನಲ್ಲೇ ಎಂಟಿಬಿ ನಾಗರಾಜ್, ಸಚಿವ ಡಾ.ಕೆ.ಸುಧಾಕರ್ ಅವರನ್ನು ಭೇಟಿಯಾಗಿರುವುದು ಅಚ್ಚರಿ ಮೂಡಿಸಿದೆ. ಒಟ್ಟಾರೆ ಸಚಿವ ಸ್ಥಾನ ಸಿಗದ ಕೆಲವರು ಸಿಎಂ ವಿರುದ್ಧ ರೆಬೆಲ್ ಆಗಿದ್ದರೆ, ಸಚಿವ ಸ್ಥಾನ ಪಡೆದವರು ಕೂಡ ತಮಗೆ ಬೇಕಾದ ಖಾತೆ ಸಿಕ್ಕಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಇದನ್ನೂ ಓದಿ:ಎಷ್ಟು ವರ್ಷ ಆಯ್ತು ಅನ್ನೋದಕ್ಕಿಂತ ಏನ್ ಕೊಡ್ತೀವಿ ಅನ್ನೋದು ಮುಖ್ಯ: ಪೊಗರು ಧ್ರುವ ಮಾತು
ಮುಖ್ಯಮಂತ್ರಿಗಳ ಬಳಿ ಅಬಕಾರಿ ಇಲಾಖೆ ನನಗೆ ಬೇಡ ಅಂತ ಹೇಳಿ ಬಂದಿದ್ದೇನೆ. ಈ ಖಾತೆ ನಾನು ಕೆಲಸ ಮಾಡುವಂತದ್ದಲ್ಲ. ಜನರಿಗೆ, ಸಾರ್ವಜನಿಕರಿಗೆ ಉಪಯೋಗ ಆಗುವಂತಹ ಖಾತೆ ಬೇಕು. ವಸತಿ ಖಾತೆಗಿಂತ ಮುಖ್ಯವಾದ ಖಾತೆಗಳನ್ನು ನೀಡುವುದಾಗಿ ಸಿಎಂ ಐದಾರು ಬಾರಿ ಭರವಸೆ ನೀಡಿದ್ದರು, ಇದೀಗ ಅಬಕಾರಿ ಇಲಾಖೆ ನೀಡಿದ್ದು, ಬೇಡ ಅಂತ ಹೇಳಿದ್ದೇನೆ. ಅವರು ನೋಡೋಣ, ಮಾತನಾಡೋಣ ಎಂದು ಹೇಳಿದ್ದಾರೆ.
ಎಂಟಿಬಿ ನಾಗರಾಜ್, ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.