ಸರ್ಚಿಂಗ್ ನಿಷ್ಕ್ರಿಯಗೊಳಿಸ್ತೇವೆ: ಆಸ್ಟ್ರೇಲಿಯಾ ಸರ್ಕಾರ v\s ಗೂಗಲ್ ಜಟಾಪಟಿ!
ಆಸ್ಟ್ರೇಲಿಯಾದಲ್ಲಿ ತನ್ನ ಸೇವೆಗಳನ್ನು ಮಿತಿಗೊಳಿಸುವುದಾಗಿ ಕೆಲವು ಫ್ರೆಂಚ್ ಸುದ್ದಿ ಪ್ರಕಾಶಕರಿಗೆ ಗೂಗಲ್ ಬೆದರಿಕೆ
Team Udayavani, Jan 22, 2021, 2:24 PM IST
ಸಿಡ್ನಿ: ಬಿಗ್ ಟೆಕ್ ದೈತ್ಯರು, ಸ್ಥಳೀಯ ಪ್ರಕಾಶಕರು ಮತ್ತು ಸುದ್ದಿ ಪ್ರಸಾರಕರೊಂದಿಗೆ ವಿಷಯಗಳಿಗಾಗಿ ಪಾವತಿ ಮಾತುಕತೆ ನಡೆಸುವಂತಹ ಕಾನೂನುಗಳನ್ನು ಜಾರಿಗೆ ತರಲು ಮಾಧ್ಯಮ ಸಂಹಿತೆಯೊಂದಿಗೆ ಆಸ್ಟ್ರೇಲಿಯಾ ಸರ್ಕಾರ ಮುಂದುವರಿದರೇ, ಆಸ್ಟ್ರೇಲಿಯಾದಲ್ಲಿ ತನ್ನ ಸರ್ಚಿಂಗ್ ಕಾರ್ಯವನ್ನು ನಿಷ್ಕ್ರಿಯಗೊಳಿಸಲಿದೆ ಎಂದು ಗೂಗಲ್ ಹೇಳಿದೆ.
ಸ್ಥಳೀಯ ಮಾಧ್ಯಮ ಕಂಪನಿಗಳಿಗೆ ತಮ್ಮ ವಿಷಯವನ್ನು ಹಂಚಿಕೊಳ್ಳಲು ಫೇಸ್‌ಬುಕ್ ಇಂಕ್ ಪಾವತಿಸುವಂತೆ ಗೂಗಲ್ ಒತ್ತಾಯಿಸಿದೆ. “ಪಕ್ಷಪಾತದ ಮಾನದಂಡಗಳನ್ನು ಹೊಂದಿರುವ ಕೋಡ್ ನ ಮಧ್ಯಸ್ಥಿಕೆ ಮಾದರಿಯು ಗೂಗಲ್‌ಗೆ ನಿರ್ವಹಿಸಲಾಗದ ಆರ್ಥಿಕ ಮತ್ತು ಕಾರ್ಯಾಚರಣೆಯ ಅಪಾಯವನ್ನು ಒದಗಿಸುತ್ತದೆ”. ಹಾಗಾಗಿ “ಕೋಡ್‌ನ ಈ ಆವೃತ್ತಿಯು ಕಾನೂನಾಗಬೇಕಾದರೆ, ಆಸ್ಟ್ರೇಲಿಯಾದಲ್ಲಿ ಗೂಗಲ್ ಸರ್ಚಿಂಗ್ ಆಯ್ಕೆಯನ್ನು ನಿಷ್ಕ್ರೀಯಗೊಳಿಸುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆ ಇಲ್ಲ ಎಂದು ಗೂಗಲ್ ನ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳ ವ್ಯವಸ್ಥಾಪಕ ನಿರ್ದೇಶಕ ಮೆಲ್ ಸಿಲ್ವಾ ಸೆನೆಟ್ ಸಮಿತಿಯೊಂದಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ : ಅತ್ಯುತ್ತಮ ತಂತ್ರಜ್ಞಾನ ಕಂಡು ಹಿಡಿದ ಟ್ವಿಟ್ಟರ್ ಗೆ ಉದ್ಯಮಿ ಎಲೋನ್ ಮಸ್ಕ್ ಬಹುಮಾನ ಘೋಷಣೆ!
ಆಲ್ಫಾಬೆಟ್ ಇಂಕ್ ಒಡೆತನದ ಗೂಗಲ್ ಮತ್ತು ಸಾಮಾಜಿಕ ಜಾಲತಾಣಗಳ ದೈತ್ಯ ಫೇಸ್ ಬುಕ್ ಮಾಧ್ಯಮವು ಉದ್ಯಮದಲ್ಲಿ ಹೆಚ್ಚಿನ ಮಾರುಕಟ್ಟೆ ಸಾಮರ್ಥ್ಯವನ್ನು ಹೊಂದಿದೆಯೆಂದು ಅಧ್ಯಯನದ ನಂತರ ಆಸ್ಟ್ರೇಲಿಯಾ ಸರ್ಕಾರ ಕಳೆದ ತಿಂಗಳು ಈ ಶಾಸನವನ್ನು ಘೋಷಿಸಿತ್ತು. ಈ ಪರಿಸ್ಥಿತಿಯು ಉತ್ತಮವಾಗಿ ಕಾರ್ಯನಿರ್ವಹಿಸುವ ಪ್ರಜಾಪ್ರಭುತ್ವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದೂ ಹೇಳಿದೆ.
ರಾಜಕೀಯ ಬೆಂಬಲವನ್ನು ಹೊಂದಿರುವ ಪ್ರಸ್ತಾವಿತ ಕಾನೂನುಗಳನ್ನು ರದ್ದುಗೊಳಿಸುವಂತೆ ಮತ್ತು ಸ್ವಯಂಪ್ರೇರಿತ ಸಂಹಿತೆಯನ್ನು ಅನುಸರಿಸಬೇಕೆಂದು ಯುನೈಟೇಡ್ ಸ್ಟೇಟ್ಸ್ ಆಸ್ಟ್ರೇಲಿಯಾಕ್ಕೆ ಈಗಾಗಲೇ ಸೂಚಿಸಿದೆ.
ಇದನ್ನೂ ಓದಿ : ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ
ಆಸ್ಟ್ರೇಲಿಯಾದಲ್ಲಿ ತನ್ನ ಸೇವೆಗಳನ್ನು ಮಿತಿಗೊಳಿಸುವುದಾಗಿ ಕೆಲವು ಫ್ರೆಂಚ್ ಸುದ್ದಿ ಪ್ರಕಾಶಕರಿಗೆ ಗೂಗಲ್ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ,ಗೂಗಲ್ ನ ಧೋರಣೆಯು “ನಮ್ಮ ಪ್ರಜಾಪ್ರಭುತ್ವವನ್ನು ಗೌರವಿಸುವ ಯಾರಿಗಾದರೂ ತಣ್ಣಗಾಗುವಂತಹ ಬೆದರಿಕೆಯ ವರ್ತನೆಯ ಒಂದು ಭಾಗವಾಗಿದೆ” ಎಂದು ಕೇಂದ್ರೀಯ ಜವಾಬ್ದಾರಿಯುತ ತಂತ್ರಜ್ಞಾನ ಸಂಸ್ಥೆ ಆಸ್ಟ್ರೇಲಿಯಾದ ನಿರ್ದೇಶಕ ಪೀಟರ್ ಲೆವಿಸ್ ಹೇಳಿದ್ದಾರೆ.
ಇದನ್ನೂ ಓದಿ : ಸಚಿವರ ಅಸಮಾಧಾನಕ್ಕೆ ಮಣಿದ ಸಿಎಂ ಬಿಎಸ್ ವೈ: ಮತ್ತೆ ಖಾತೆ ಬದಲಾವಣೆ, ಎಂಟಿಬಿಗೆ ಸಕ್ಕರೆ ಸಿಹಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.