ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ 38ನೇ ಕೃತಿ ಬಿಡುಗಡೆ
Team Udayavani, Jan 22, 2021, 4:14 PM IST
ಮುಂಬಯಿ: ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ 38ನೇ ಕೃತಿ “ಸಮಾಜ ಬಂಧು ಆಯುರ್ವೇದ ಭೂಷಣ ಡಾಕ್ಟರ್ ಐ. ವಿ. ರಾವ್ ಜೋಕಟ್ಟೆ’ ಎಂಬ ಕೃತಿಯು ಜ. 24ರಂದು ಅಪರಾಹ್ನ 2.30ರಿಂದ ಕನ್ನಡ ಸಂಘ ಕಾಂತಾವರದ ಕೆ. ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನದಲ್ಲಿ ಜರಗುವ ಸಮಾರಂಭದಲ್ಲಿ ಬಿಡುಗಡೆಗೊಳ್ಳಲಿದೆ.
ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಗ್ರಂಥಮಾಲೆಯ ನೂತನ ಕೃತಿಗಳಲ್ಲಿ ಇದು 305ನೇ ಕುಸುಮ ಆಗಿದೆ. ಮುದ್ದಣ ಸಾಹಿತ್ಯೋತ್ಸವ 2021 ಮತ್ತು ನಾಡಿಗೆ ನಮಸ್ಕಾರ ಗ್ರಂಥಮಾಲೆಯ ನೂತನ ನಾಲ್ಕು ಕೃತಿಗಳ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ವಹಿಸಲಿದ್ದಾರೆ.
2020ನೇ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಡಾ| ಚಿಂತಾಮಣಿ ಕೊಡ್ಲೆಕೆರೆ ಅವರ “ಮೈಮರೆತು ಕುಣಿವೆ’ ಕೃತಿಗೆ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ಪುರಸ್ಕೃತರ ಅಭಿನಂದನೆಯನ್ನು ಡಾ| ರಾಜಶೇಖರ ಹಳೆಮನೆ, ಉಜಿರೆ ಮಾಡಲಿರುವರು. ಕೃತಿಗಳ ಬಿಡುಗಡೆಯನ್ನು ಎಂಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಚಂದ್ರಶೇಖರ್ ಮಾಡಲಿದ್ದಾರೆ. ನಾಡಿಗೆ ನಮಸ್ಕಾರ ಗ್ರಂಥ ಮಾಲೆಯ ಸಂಪಾದಕ ಡಾ| ಬಿ. ಜನಾರ್ದನ್ ಭಟ್ ಉಪಸ್ಥಿತರಿರುವರು.
ಡಾ| ಐ. ವಿ. ರಾವ್ ಜೋಕಟ್ಟೆ
ಡಾ| ಐ. ವಿ. ರಾವ್ ಜೋಕಟ್ಟೆ ಅವರು ವೈದ್ಯ ಗುರು ಡಾ| ಎಂ. ಆರ್. ಭಟ್ ಅವರ ಶಿಷ್ಯ. ಕೇಳು ನಂಬಿಯಾರ್ ಮತ್ತು ಡಾ| ಎಂ. ಗೋಪಾಲಕೃಷ್ಣರಾಯರ ಜತೆಗೆ ಹಲವು ವರ್ಷ ದುಡಿದು ಆಯುರ್ವೇದದ ಸೂಕ್ಷ್ಮಗಳನ್ನು ಅರಿತು ಸಂಶೋಧನೆಗಳನ್ನು ಮಾಡುತ್ತಿದ್ದರು. ಕಲಿಯುಗ ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯುತ್ತಿದ್ದರು. ಜಪ್ಪುನಲ್ಲಿ ಪ್ರೇಮ ಆಯುರ್ವೇದಿಕ್ ಫಾರ್ಮಸಿ ಮೂಲಕ ಆರೋಗ್ಯದ ಕಾಳಜಿಯನ್ನು ಜನರಲ್ಲಿ ಹುಟ್ಟಿಸುತ್ತಿದ್ದರು. ಐವತ್ತರ ದಶಕದಲ್ಲಿ ಕರ್ನಾಟಕ ಮತ್ತು ಕೇರಳ ಪ್ರಾಂತೀಯ ಗವರ್ನ್ ಮೆಂಟ್ ಟ್ರೈನ್ ಗ್ರಾಮ ವೈದ್ಯರ ಸಂಘ ಮಂಗಳೂರು ಇದರ ಕಾರ್ಯ ದರ್ಶಿಯಾಗಿದ್ದರು ಇವರ ಆನೆಕಾಲು ರೋಗ ಚಿಕಿತ್ಸೆಗೆ ಸಂಶೋಧಿಸಿದ ಔಷಧಕ್ಕೆ ಅಖೀಲ ಕರ್ನಾಟಕಆಯುರ್ವೇದ ಸಮ್ಮೇಳ ನದಲ್ಲಿ ಚಿನ್ನದ ಪದಕ ದೊರೆತಿದೆ.
ಇದನ್ನೂ ಓದಿ:ನಮ್ಮದು ನ್ಯಾಯೋಚಿತ ಹೋರಾಟ: ಕನಕ ಶ್ರೀ
ಐವತ್ತರ ದಶಕದ ಕೊನೆಗೆ ಜೋಕಟ್ಟೆ ಎಂಬ ಕುಗ್ರಾಮಕ್ಕೆ ಆಗಮಿಸಿ ನಾಲ್ಕು ದಶಕಗಳ ಕಾಲ ಇಲ್ಲಿ ತಮ್ಮದೇ ಆದ ದುರ್ಗಾ ಕ್ಲಿನಿಕ್ ಮೂಲಕ ಆಯುರ್ವೇದ ಸೇವೆ, ಕೆಂಜಾರು ಗ್ರಾ.ಪಂ.ನ ವೈಸ್ ಚೇರ್ಮನ್ ಆಗಿ, ಯುವಕ ಮಂಡಲ ಜೋಕಟ್ಟೆಯ ಸ್ಥಾಪಕ ಸದಸ್ಯರಾಗಿಆಯುರ್ವೇದ ಸೇವೆ ಮತ್ತು ಸಮಾಜಸೇವೆಯನ್ನು ಕೈಗೊಂಡಿದ್ದು, 1999ರಲ್ಲಿ ನಿಧನ ಹೊಂದಿದರು. ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶ್ರೀರಾಮ ನಿರ್ಯಾಣ ತಾಳಮದ್ದಳೆಯನ್ನು ಧೀ ಶಕ್ತಿ ಮಹಿಳಾ ಯಕ್ಷ ಬಳಗ ಪುತ್ತೂರು ಪ್ರಸ್ತುತಪಡಿಸಲಿದ್ದಾರೆ ಎಂದು ಸಾಹಿತಿ ಡಾ| ನಾ. ಮೊಗಸಾಲೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Kota: ರಾಷ್ಟ್ರೀಯ ಹೆದ್ದಾರಿಯಲ್ಲಿ ಸೌಲಭ್ಯ ಕೊರತೆ
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.