![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 23, 2021, 8:15 AM IST
ಉಡುಪಿ: ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ. ಬೆಂಗಳೂರಿನಲ್ಲಿ ಇಸ್ಕಾನ್ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ಉಡುಪಿ ಮೂಲದ ಬೆಂಗಳೂರು ನಿವಾಸಿ ಗಹನಾ ಮಾನಸಿ ತನಗಿಂತ 10 ವರ್ಷ ಹಿರಿಯ ವಯಸ್ಸಿನ ವಿದ್ಯಾರ್ಥಿಗಳನ್ನು ಸೋಲಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.
ಸ್ಪರ್ಧೆಯನ್ನು 6ರಿಂದ 14 ವರ್ಷದೊಳಗಿನ ಮಕ್ಕಳಿಗಾಗಿ ಆಯೋಜಿಸ ಲಾಗಿತ್ತು. ವಿವಿಧ ರಾಜ್ಯಗಳ 370 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ ಗಹನಾ ಮಾನಸಿ (5 ವರ್ಷ 10 ತಿಂಗಳು) ಅತ್ಯಂತ ಕಿರಿಯ ವಯಸ್ಸಿನ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ.
ನಿರರ್ಗಳ :
ಸ್ಪರ್ಧೆಗೆ ಗೀತೆಯ 9ನೇ ಅಧ್ಯಾಯದ ಶ್ಲೋಕವೊಂದನ್ನು ನಿಗದಿಪಡಿಸ ಲಾಗಿತ್ತು. ಶ್ಲೋಕ ಪೂರ್ಣಗೊಳಿಸಲು ಸಮಯ ಮಿತಿ ನೀಡಿತ್ತು. ಗಹನಾ
ಯಾವುದೇ ತಡವರಿಕೆ ಇಲ್ಲದೆ 6 ನಿಮಿಷದಲ್ಲಿ ಪೂರ್ಣಗೊಳಿಸಿದ್ದಾಳೆ.
ಗಹನಾ ಮಾನಸಿ ಬೆಳ್ಳಂಪಳ್ಳಿ ನಿವಾಸಿ ಶ್ವೇತಾ ಮತ್ತು ಮಧುರ್‌ರಾಜ್ ಶೆಟ್ಟಿಗಾರ್ ದಂಪತಿಯ ಪುತ್ರಿ. ಬೆಳ್ಳಂಪಳ್ಳಿಯ ಉದಯವಾಣಿ ಏಜೆಂಟ್ ಸಾವಿತ್ರಿ ಸೀತಾರಾಮ್ ಶೆಟ್ಟಿಗಾರ್ ಅವರ ಮೊಮ್ಮಗಳು. ಬಾಲಕಿಯ ತಂದೆ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಗಹನಾ ಬೆಂಗಳೂರಿನ ಶಾಲೆಯೊಂದರಲ್ಲಿ ಯುಕೆಜಿಯಲ್ಲಿ ಕಲಿಯುತ್ತಿದ್ದಾಳೆ. ಶೈಕ್ಷಣಿಕ ಸೇರಿದಂತೆ ಇತರ ಚಟುವಟಿಕೆಗಳಲ್ಲೂ ಮುಂದೆ ಇದ್ದಾಳೆ.
ಮನೆಯವರ ಸಂಸ್ಕಾರದಿಂದ ಗಹನಾ ಭಗವದ್ಗೀತೆಯನ್ನು ಯಾವುದೇ ಅಡಚಣೆಯಿಲ್ಲದೆ ಹೇಳುವಂತಾಗಿದೆ. ಮನೆ ಯಲ್ಲಿ ಸಂಜೆ ವೇಳೆ ಹೇಳುವ ಭಜನೆ, ಸಂಸ್ಕೃತ ಶ್ಲೋಕಗಳಿಗೆ ಧ್ವನಿ
ಗೂಡಿಸುತ್ತಾ ಭಗದ್ಗೀತೆಯ ಶ್ಲೋಕಗಳನ್ನು ಕಲಿಯುತ್ತಿದ್ದಾಳೆ. ಮನೆಗೆ ಸಂಸ್ಕೃತ ಶಿಕ್ಷಕರನ್ನು ಕರೆಸಿ ಸಂಸ್ಕೃತವನ್ನು ಕಲಿಸುತ್ತಿದ್ದಾರೆ. ಸ್ಪರ್ಧೆ 6 ವರ್ಷ ಮೇಲಿನ ಮಕ್ಕಳಿಗಾಗಿ ಆಯೋಜಿಸಿದ್ದರೂ 5 ವರ್ಷ 10 ತಿಂಗಳ ಗಹನಾಗೆ ಶ್ಲೋಕಗಳು ಕಂಠಸ್ಥವಾಗಿರುವ ಹಿನ್ನೆಲೆಯಲ್ಲಿ ಕಳುಹಿಸಿದೆವು. –ಸಾವಿತ್ರಿ ಸೀತಾರಾಮ ಶೆಟ್ಟಿಗಾರ್, ಬಾಲಕಿಯ ಅಜ್ಜಿ
You seem to have an Ad Blocker on.
To continue reading, please turn it off or whitelist Udayavani.