ಖಾಸಗೀಕರಣ ಸರ್ಕಾರದ ಉದ್ದೇಶ
Team Udayavani, Jan 23, 2021, 2:47 PM IST
ಮಂಡ್ಯ: ದೇಶವನ್ನು ಸಂಪೂರ್ಣ ಖಾಸಗೀಕರಣ ಮಾಡುವುದೇ ಕೇಂದ್ರ ಸರ್ಕಾರದ ಮೂಲ ಅಜೆಂಡವಾಗಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು. ದೇಶದ ನಾಗರಿಕರ ಹಕ್ಕು, ಸಂಪತ್ತನ್ನು ದೋಚಲು ಪ್ರಸ್ತುತ ಸರ್ಕಾರವೇ ಕಾರ್ಪೊàರೇಟ್, ಎಂಎನ್‌ಸಿ ಕಂಪನಿಗಳನ್ನು ತರುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ವಿಮಾನ ನಿಲ್ದಾಣ ಎಂದು ಮಾಡಿ ದ್ದಾರೆ. ರೈಲ್ವೇ ವ್ಯಾಗನ್‌ಗಳಿಗೆ ಅದಾನಿ ಹೆಸರಿಟ್ಟಿದ್ದಾರೆ. ಇದನ್ನು ಯಾರೂ ಪ್ರಶ್ನಿಸುತ್ತಿಲ್ಲ. ದೇಶದ ನಾಗರಿಕರ ಹಕ್ಕು, ಸಂಪತ್ತನ್ನು ಖಾಸಗಿ ಕಂಪನಿಗಳಿಗೆ ಕೊಡುತ್ತಿದ್ದಾರೆ. ಇದೇ ರೀತಿ ಆದರೆ ದೇಶ ಉಳಿಯುತ್ತದಾ ಎಂದು ಪ್ರಶ್ನಿಸಿದರು.
ಶ್ರೀಮಂತರ ಕೈಗೆ ಸರ್ಕಾರ: ಅದಾನಿ, ಅಂಬಾನಿಯಂಥ ಆಗರ್ಭ ಶ್ರೀಮಂತರ ಕೈಗೆ ದೇಶದ ಆಸ್ತಿ ನೀಡುವುದೇ ಸರ್ಕಾರದ ಅಜೆಂಡಾ ಆಗಿದೆ. ಎಲ್ಲವನ್ನೂ ವರ್ಗಾಯಿಸುವುದರ ಮೊದಲ ಹೆಜ್ಜೆಯಾಗಿ ಕೃಷಿ, ಕೃಷಿ ಮಾರುಕಟ್ಟೆಯನ್ನು ಕಂಪನಿಗಳಿಗೆ ವರ್ಗಾಯಿಸಿ, ಬಹುಸಂಖ್ಯಾತ ಜನರನ್ನು ಬರಿದು ಮಾಡುವುದೇ ಅವರ ಹಿಂದಿನ ಉದ್ದೇಶ. ಇದನ್ನು ವಾಪಸ್ ಪಡೆಯುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಜಲನೀತಿ ಸರಿ ಇಲ್ಲ: ಪ್ರಸ್ತುತ ಇರುವ ಜಲ ನೀತಿಗಳು ಸರಿಯಿಲ್ಲ. ಕಾವೇರಿ ನಿರ್ವಹಣಾ ಮಂಡಳಿ ಜಾರಿಗೆ ತಂದಿದ್ದಾರೆ. ಆದರೆ ಕೃಷ್ಣ ನಿರ್ವಹಣಾ ಮಂಡಳಿ ಏಕೆ ಜಾರಿಗೆ ತಂದಿಲ್ಲ. ಪ್ರಸ್ತುತ ಇರುವ ನೀತಿಗಳು ಅವೈಜಾnನಿಕವಾಗಿದೆ. ರಾಷ್ಟ್ರೀಯ ಜಲ ನೀತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಗ್ರಾಪಂ ಅಧಿಕಾರಕ್ಕಾಗಿ ಆಕಾಂಕ್ಷಿಗಳಿಂದ ಸದಸ್ಯರಿಗೆ ಪ್ರವಾಸ ಭಾಗ್ಯ
ಮೈಷುಗರ್ ಗುತ್ತಿಗೆ ಸಲ್ಲದು: ಮೈಷುಗರ್ ಕಾರ್ಖಾನೆಯನ್ನು 40 ವರ್ಷ ಗುತ್ತಿಗೆ ನೀಡಿರುವುದು ಸರಿಯಲ್ಲ. ಸರ್ಕಾರಿ ಸ್ವಾಮ್ಯ ದಲ್ಲಿರುವ ಕಾರ್ಖಾನೆಯನ್ನು ಎಂದಿಗೂ ಖಾಸಗೀಕರಣ ಮಾಡಬಾರದು. ದುಡ್ಡು ಬಾಚಿಕೊಂಡ ಕಳ್ಳರ ವಿರುದ್ಧ ತನಿಖೆ ನಡೆಸಿ ಜೈಲಿಗೆ ಕಳುಹಿಸಬೇಕು. ಆದರೆ, ಸರ್ಕಾರ ಕಳ್ಳರನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಎಫ್‌ಆರ್‌ಪಿ ಜಾರಿಗೆ ತರಲಿ: ಸರ್ಕಾರ ಕಬ್ಬು ಬೆಳೆಗಾರರ ಬಗ್ಗೆ ಹಿತಾಸಕ್ತಿ ಇದ್ದರೆ ಎಫ್‌ಆರ್‌ಪಿ ಜತೆಗೆ ಎಸ್‌ಎಪಿಯನ್ನು ಜಾರಿಗೆ ತರುತ್ತಿತ್ತು. ಆದರೆ, ಇಲ್ಲಿಯವರೆಗೂ ಅದನ್ನು ಮಾಡಿಲ್ಲ. ಖಾಸಗಿ ಬಂಡವಾಳದ ಅಸ್ತ್ರ ಜಾರಿಗೆ ತರುವುದೇ ಸರ್ಕಾರದ ಮುಖ್ಯ ಉದ್ದೇಶ. ಖಾಜಿ ನ್ಯಾಯ ಮಾಡಿ ಅಧಿ ಕಾರ ಉಳಿಸಿಕೊಳ್ಳಲು ಸೀಮಿತ ಕಾರ್ಯಕ್ರಮಗಳನ್ನು ಮಾತ್ರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ಪ್ರಧಾನ ಕಾರ್ಯ ದರ್ಶಿ ಭೈರೇಗೌಡ, ರೈತ ಮುಖಂಡ ರಾದ ಸಿದ್ದಲಿಂಗಸ್ವಾಮಿ, ಕವಿತಾ, ರಮೇಶ್, ಕೃಷ್ಣ, ಮಹೇಶ್, ಆನಂದ್ ಪಟೇಲ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ
Maddur; ಕೆಲಸದ ಒತ್ತಡ: ಎಂಜಿನಿಯರ್ ಆತ್ಮಹ*ತ್ಯೆ
Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
MUST WATCH
ಹೊಸ ಸೇರ್ಪಡೆ
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.