ಮಕ್ಕಳಲ್ಲಿ ವಿಜ್ಞಾನಾಸಕ್ತಿ ಬೆಳೆಸಿ: ಹೆಗಡೆ
ರಾಜ್ಯಮಟ್ಟದ ವಿಜ್ಞಾನ ವಿಷಯದ ಉಪನ್ಯಾಸ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.
Team Udayavani, Jan 23, 2021, 4:31 PM IST
ಚಿತ್ರದುರ್ಗ: ಮೂಲ ವಿಜ್ಞಾನ ಅಧ್ಯಯನ ಮಾಡಲು ಪ್ರತಿಯೊಬ್ಬರೂ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು. ಮೂಲ ವಿಜ್ಞಾನದ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಬದುಕನ್ನು ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ ಎಂದು ಚಳ್ಳಕೆರೆಯ ಕುದಾಪುರ ಐಐಎಸ್‌ಸಿ ವಿಜ್ಞಾನಿ ಎಂ.ಎಸ್.ಹೆಗಡೆ ಅಭಿಪ್ರಾಯಪಟ್ಟರು.
ನಗರದಲ್ಲಿ ರಾಜ್ಯ ವಿಜ್ಞಾನ ಪರಿಷತ್ತು, ವಿಶ್ವ ವಿದ್ಯಾಲಯಗಳ ಪದವಿ ಮತ್ತು ಬಿ.ಇಡಿ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಕಾಲ ಆಯೋಜಿಸಿದ್ದ ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆಯ ಸಮಾರೋಪದಲ್ಲಿ ಮಾತನಾಡಿದ ಅವರು, ಮಕ್ಕಳು ಯಾವುದೇ ವಿಷಯವನ್ನು ಪರೀಕ್ಷೆಗಾಗಿ ಅಧ್ಯಯನ ಮಾಡುವುದು ಒಳ್ಳೆಯದಲ್ಲ. ಅಧ್ಯಯನ ಆಳಕ್ಕಿಳಿಯಬೇಕು. ಒಮ್ಮೆ ಓದಿದ ವಿಷಯ ಶಾಶ್ವತವಾಗಿ ನಮ್ಮಲ್ಲಿ ಉಳಿಯಬೇಕು. ಆ ರೀತಿ ನಮ್ಮ ಅಧ್ಯಯನಇರಬೇಕು ಎಂದು ತಿಳಿಸಿದರು.
ಇದನ್ನೂಓದಿ:ಟೆಲಿಮೆಡಿಸನ್ ಕೇಂದ್ರ ಉದ್ಘಾಟನೆ
ಇಂದು ವಿಜ್ಞಾನ ಅಭಿವೃದ್ಧಿ ಹೊಂದಿರದಿದ್ದರೆ ಜಗತ್ತು ಇಷ್ಟೊಂದು ವೇಗವಾಗಿ ಸಾಗುತ್ತಿರಲಿಲ್ಲ. ನಾವು ವಿಜ್ಞಾನವನ್ನು ತಿಳಿಯುತ್ತಾ, ವಿಜ್ಞಾನಿಗಳ ಸಾಧನೆಯ ಜತೆ ಸೇರಿದಾಗ ಮಾತ್ರ ಸಮಾಜ ಅಭಿವೃದ್ಧಿಯಾಗುತ್ತದೆ.ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿದಾಗ ಮಾತ್ರ ವೈಜ್ಞಾನಿಕವಾಗಿ ಬೆಳೆಯಲು ಸಹಕಾರಿಯಾಗಲಿದೆ. ವಿಜ್ಞಾನಿಗಳ ಸಾಧನೆ ಹಾಗೂ ಆದರ್ಶಗಳನ್ನು ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ರಾಜ್ಯ ವಿಜ್ಞಾನ ಪರಿಷತ್ತಿನ ಖಜಾಂಚಿ ಈ.ಬಸವರಾಜು ಮಾತನಾಡಿ, ವಿಜ್ಞಾನ ಪರಿಷತ್ತು ನಿರಂತರವಾಗಿ ಅನೇಕ ಶೈಕ್ಷಣಿಕ, ವೈಜ್ಞಾನಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ವಿಜ್ಞಾನ ಪರಿಷತ್ತಿನ ಸದಸ್ಯರಾಗುವ ಮೂಲಕ ಸಕ್ರಿಯವಾಗಿ ವಿಜ್ಞಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಎಂದು ತಿಳಿಸಿದರು.
ಇದನ್ನೂಓದಿ:·ಮನುಷ್ಯನ ಬಾಲಿಶ ಮನಸ್ಸು
ಅಧ್ಯಕ್ಷತೆ ವಹಿಸಿದ್ದ ಕರಾವಿಪ ಸದಸ್ಯ ಹುಲಿಕಲ್ ನಟರಾಜ್ ಮಾತನಾಡಿ, ಜೀವನದಲ್ಲಿ ಎಂದೂ ಅಧೀರರಾಗಬೇಡಿ, ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಿ, ಮೂಢನಂಬಿಕೆಗಳ ದಾಸರಾಗಬೇಡಿ ಎಂದು ಕಿವಿಮಾತು ಹೇಳಿದರು.
ರಾಜ್ಯ ಸಂಚಾಲಕ ಎಚ್.ಎಸ್.ಟಿ ಸ್ವಾಮಿ, ಗೌರವ ಕಾರ್ಯದರ್ಶಿ ಪ್ರೊ.ಸಿ.ಕೃಷ್ಣೇಗೌಡ, ರಾಜ್ಯ ವಿಜ್ಞಾನ ಪರಿಷತ್ತಿನ ಸದಸ್ಯರಾದ ಫ್ರಾನ್ಸಿಸ್ ಬೆಂಜಮಿನ್, ಮಂಜುನಾಥ್, ಲತೀಫ್, ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯಮಟ್ಟದ ವಿಜ್ಞಾನ ವಿಷಯದ ಉಪನ್ಯಾಸ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಭೌತ ವಿಜ್ಞಾನ: ಶುಭಶ್ರೀ ಎಸ್.ಶೆಣೈ (ಉಡುಪಿಯ ಪೂರ್ಣಪ್ರಜ್ಞ ಕಾಲೇಜು)- ಪ್ರಥಮ, ವಿ.ವಿಜಯಲಕ್ಷ್ಮೀ (ಹುಬ್ಬಳ್ಳಿಯ ಕೆಎಲ್‌ಇ ಶಿಕ್ಷಣ ಮಹಾವಿದ್ಯಾಲಯ)- ದ್ವಿತೀಯ ಸ್ಥಾನ ಗಳಿಸಿದರು. ರಸಾಯನ ವಿಜ್ಞಾನ: ಸೌಜನ್ಯ (ಉಡುಪಿಯ ಪೂರ್ಣಪ್ರಜ್ಞ ಕಾಲೇಜು)- ಪ್ರಥಮ, ಎಚ್.ಸಿ.ತೇಜಸ್ವಿನಿ (ತುಮಕೂರಿನ ಯುನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್)- ದ್ವಿತೀಯ ಸ್ಥಾನ ಪಡೆದರು. ಜೀವ ವಿಜ್ಞಾನ: ವೈ.ಪಿ.ಸೌಮ್ಯಾ (ದಾವಣಗೆರೆಯ ಎಂ.ಎಂ.ಶಿಕ್ಷಣ ಮಹಾವಿದ್ಯಾಲಯ)- ಪ್ರಥಮ, ಕೀರ್ತಿ ಗೋಖಲೆ (ಕಾರ್ಕಳದ ಭುವನೇಂದ್ರ ಕಾಲೇಜು)- ದ್ವಿತೀಯ ಸ್ಥಾನ ಗಳಿಸಿದರು. ಗಣಿತ: ಡಿ.ಎಲ್.ಕಾವ್ಯಾ (ಶಿವಮೊಗ್ಗದ ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜು)- ಪ್ರಥಮ,ತೇಜಸ್ವಿನಿ ಹೆಗಡೆ (ಕುಮಟಾದ ಕಮಲಾ ಬಾಳಿಗಾ ಮಹಾವಿದ್ಯಾಲಯ)- ದ್ವಿತೀಯ ಸ್ಥಾನ ಪಡೆದರು.
ಇದನ್ನೂಓದಿ:ಸರಕಾರದ ಕೆಲಸಗಳನ್ನು ಜನರಿಗೆ ಮುಟ್ಟಿಸುವುದು ‘ಡೊಡ್ಡ ಟಾಸ್ಕ್’: ಡಿಸಿಎಂ ಅಶ್ವತ್ಥನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.