ಪಂಚ ಲಕ್ಷ ಹೆಜ್ಜೆ ಪಾದಯಾತ್ರೆ ಸ್ವಾಗತಕ್ಕೆ ಸಿದ್ಧತೆ
ಬಸವ ಜಯಮೃತ್ಯುಂಜಯ ಶ್ರೀ ಸಾರಥ್ಯದಲ್ಲಿ ತಾಲೂಕಿನಲ್ಲಿ 3 ದಿನಗಳ ಕಾಲ ಪಾದಯಾತ್ರೆ
Team Udayavani, Jan 23, 2021, 5:46 PM IST
ಹರಪನಹಳ್ಳಿ: ಕೂಡಲಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಾರಥ್ಯದಲ್ಲಿ ಕೂಡಲ ಸಂಗಮ ಪೀಠದಿಂದ ಬೆಂಗಳೂರಿನ ವಿಧಾನಸೌಧದವರೆಗೂ ಪಂಚಲಕ್ಷ ಹೆಜ್ಜೆಗಳ ಬೃಹತ್ ಐತಿಹಾಸಿಕ ಪಾದಯಾತ್ರೆ ಸ್ವಾಗತಿಸಲು ತಾಲೂಕಿನಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪಂಚಮಸಾಲಿ ಲಿಂಗಾಯಿತ 2ಎ ಮೀಸಲಾತಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಪೂಜಾರ ತಿಳಿಸಿದರು.
ಪಟ್ಟಣದ ಹೊಸಪೇಟೆ ರಸ್ತೆಯ ಸಮಾಜದ ಹಿರಿಯ ಮುಖಂಡ ಕುಂಚೂರು ವೀರಣ್ಣನವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯಿತ ಪಂಚಮಸಾಲಿ ಮಕ್ಕಳ ಶಿಕ್ಷಣ, ಉದ್ಯೋಗಕ್ಕಾಗಿ 2ಎ ಮೀಸಲಾತಿಗಾಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಹಾಗೂ ಕೇಂದ್ರ ಸರ್ಕಾರಓಬಿಸಿ ಮೀಸಲಾತಿಗೆ ಸೇರ್ಪಡೆಗೊಳಿಸುವಂತೆ ಆರಂಭವಾಗಿರುವ ಪಾದಯಾತ್ರೆಯು ಜ. 25ರಂದು ತಾಲೂಕಿನ ನಂದಿಬೇವೂರು ಗ್ರಾಮಕ್ಕೆ ಆಗಮಿಸಲಿದ್ದು, ಸಮಾಜದ ಹಿರಿಯರು, ಮುಖಂಡರು ಮತ್ತಮಹಿಳೆಯರ ಕಳಸ ಹಾಗೂ ಸಕಲ ವಾದ್ಯಗಳೊಂದಿಗೆ ಅದ್ದೂರಿಯಾಗಿ ಸ್ವಾಗತ ಕೋರಲಾಗುವುದು ಎಂದರು.
ಇದನ್ನೂ ಓದಿ : ಹಂಪಿಗೆ ರಜನೀಶ್ ಗೋಯಲ್ ಭೇಟಿ
ಪಾದಯಾತ್ರೆಯು ನಂದಿಬೇವೂರು ಮೂಲಕ ಕಣಿವಿಹಳ್ಳಿ ಗ್ರಾಮಕ್ಕೆ ಆಗಮಿಸಿ ಮಧ್ಯಾಹ್ನದ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕೋಡಿಹಳ್ಳಿ, ಬಾಗಳಿ, ಶೃಂಗಾರತೋಟ ಗ್ರಾಮಗಳ ಮಾರ್ಗದ ಮೂಲಕ ಹರಪನಹಳ್ಳಿಗೆ ಪಾದಯಾತ್ರೆ ಸಂಜೆ ವೇಳೆಗೆ ಆಗಮಿಸಲಿದ್ದು, ಹೊಸಪೇಟೆ ರಸ್ತೆಯಲ್ಲಿರುವ ತರಳಬಾಳು ಕಲ್ಯಾಣ ಮಂಟಪದಲ್ಲಿ ಜನ ಜಾಗೃತಾ ಸಮಾವೇಶ ನಡೆಯಲಿದೆ. ನಂತರ ಶ್ರೀಗಳ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿಸಿದರು.
ಜ. 26ರಂದು ಮದ್ಯಾಹ್ನ ಪಾದಯಾತ್ರೆಯು ಬಸ್ ನಿಲ್ದಾಣದ ಇಜಾರಿ ಶಿರಸಪ್ಪ ವೃತ್ತದಲ್ಲಿ ಬಹಿರಂಗಸಭೆ ನಡೆಯಲಿದೆ. ಇದಾದ ಬಳಿಕ ಪಾದಯಾತ್ರೆಯೊಂದಿಗೆ ನೀಲಗುಂದಕ್ಕೆ ತೆರಳಿ ವಾಸ್ತವ್ಯ ಹಾಗೂ ಜನಜಾಗೃತಿ ಸಭೆ ಹಮ್ಮಿಕೊಳ್ಳಲಾಗಿದೆ. ಜ.27ರಂದು ಚಿರಸ್ತಹಳ್ಳಿ ಮಾರ್ಗದ ಮೂಲಕ ತೆಲಿಗಿಯಲ್ಲಿ ಜನಜಾಗೃತಿ ಸಮಾವೇಶ ನಡೆಸಿ ರಾತ್ರಿ ವಾಸ್ತವ್ಯ, ಜ. 28ರಂದು ದುಗ್ಗಾವತಿ ಮೂಲಕ ಹರಿಹರಕ್ಕೆ ಪಾದಯಾತ್ರೆ ತಲುಪಲಿದೆ. ಪಾದಯಾತ್ರೆ ಹೋರಾಟಕ್ಕೆ ರಸ್ತೆಯುದ್ದಕ್ಕೂ ಸಮಾಜದ ಬಾಂಧವರು ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳುತ್ತಿದ್ದು, ಇದಕ್ಕಾಗಿ ಎಲ್ಲ ಸಿದ್ಧತೆ ನಡೆಯುತ್ತಿದೆ. ಆದ್ದರಿಂದ ಸಮಸ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿಸಿಕೊಂಡರು.
ಹಡಗಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿ, ಪಾದಯಾತ್ರೆಯು ಬೆಂಗಳೂರಿಗೆ ತಲುಪುವ ಮಾರ್ಗದಲ್ಲಿ ಸರ್ಕಾರದಿಂದ 2ಎ ಮೀಸಲಾತಿ ಘೋಷಣೆಯಾಗುವ ಭರವಸೆ ಇದೆ ಎಂದ ಅವರು ಹರಪನಹಳ್ಳಿ ಜನಜಾಗೃತಿ ಸಮಾವೇಶದಲ್ಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು, ಅಖೀಲ ಭಾರತ ಲಿಂಗಾಯಿತ ಪಂಚಮಸಾಲಿ ಅಧ್ಯಕ್ಷ ಡಾ| ವಿಜಯನಂದ ಕಾಶಪ್ಪನವರ್ ಸೇರಿದಂತೆ ವಿವಿಧ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹರಿಹರ ಪಂಚಮಸಾಲಿ ಪೀಠದ ಶ್ರೀಗಳು ಕೂಡ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಈ ಸಂದರ್ಭದಲ್ಲಿ ಕುಂಚೂರು ವೀರಣ್ಣ, ಹೋರಾಟ ಸಮಿತಿಯ ಗೌರವಾಧ್ಯಕ್ಷ ಎಂ.ಪರಮೇಶ್ವರಪ್ಪ, ಸಾರಿಗೆ ನಿಗಮದ ನಿರ್ದೇಶಕ ಅರುಂಡಿ ನಾಗರಾಜ್, ಮುಖಂಡರಾದ ಶಶಿಧರ ಪೂಜಾರ, ಎಂ.ಅಜ್ಜಣ್ಣ, ಎಂ.ಟಿ.ಬಸವನಗೌಡ, ಮಂಜುನಾಥ ಪೂಜಾರ, ಬಿ.ಎಸ್.ಲಿಂಗರಾಜ್, ಪ್ರಚಾರ ಸಮಿತಿ ಅಧ್ಯಕ್ಷ ಪಿ.ಕರಿಬಸಪ್ಪ, ಕಾರ್ಯದರ್ಶಿ ಬಸವರಾಜ ಅಡವಿಹಳ್ಳಿ, ತಿಮ್ಲಾಪುರ ನಾಗರಾಜ್, ಹಾರಕನಾಳು ಪ್ರಕಾಶಗೌಡ, ವಿರೇಶ್, ನೀಲಗುಂದ ಸಿದ್ದೇಶ್, ಆರ್. ರೇವಣ್ಣ, ಬಸವರಾಜ, ಕೆಇಬಿ ಕರಿಬಸಪ್ಪ, ಪರಮೇಶ್, ಎ.ಜಿ.ಕೊಟ್ರಗೌಡ, ಕೊಟ್ರೇಶ್ ಉಪಸ್ಥಿತರಿದ್ದರು.
ಇದನ್ನೂ ಓದಿ : ಹುಣಸೋಡು ದುರಂತ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ : ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
MUST WATCH
ಹೊಸ ಸೇರ್ಪಡೆ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.