ರೈತರಿಗೆ ಬೆಳೆ ಉಳಿಸಿಕೊಳ್ಳುವ ಸವಾಲು; ಪಂಪ್‌ಸೆಟ್‌ಗಳಿಗೆ ಕರೆಂಟ್ ಶಾಕ್
ವ್ಯಾಟ್ ಟ್ರಾನ್ಸ್‌ಫಾರ್ಮರ್ ಸುಟ್ಟು ನಾಲ್ಕು ದಿನ ಕಳೆದರೂ ಹೊಸ ಟ್ರಾನ್ಸ್‌ಫಾರ್ಮರ್ ಜೋಡಣೆಯಾಗಿಲ್ಲ.
Team Udayavani, Jan 23, 2021, 5:53 PM IST
ಸಿಂಧನೂರು: ತಾಲೂಕಿನ ತುರುವಿಹಾಳ ಪಟ್ಟಣದಲ್ಲಿ ಉಪಕೇಂದ್ರದಲ್ಲಿ 10 ಮೆಗಾ ವ್ಯಾಟ್ ಸಾಮರ್ಥ್ಯದ ಬೃಹತ್ ಪರಿವರ್ತಕ ಸುಟ್ಟ ಪರಿಣಾಮ ಪಂಪ್‌ಸೆಟ್
ಅವಲಂಬಿತ ಕೃಷಿಕರಿಗೆ ಸಮಸ್ಯೆಯಾಗಿದ್ದು, ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಬೋರ್‌ವೆಲ್ ಆಧರಿತ ನೀರಾವರಿ ಅವಲಂಬಿಸಿರುವ ರೈತರು ಬೆಳೆಗೆ ನೀರುಣಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ್ದು, ಹೊಸ ಪರಿವರ್ತಕ ಅಳವಡಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಹಾಕಿದ ಬೆಳೆಗಳಿಗೆ ಸಕಾಲದಲ್ಲಿ ನೀರು ಪೂರೈಸದ್ದರಿಂದ ಒಣಗಲಾರಂಭಿಸಿದ್ದು, ತುರ್ತಾಗಿ ಕೆಪಿಟಿಸಿಎಲ್ ರೈತರ ನೆರವಿಗೆ ಧಾವಿಸಬೇಕಿದೆ. ವಿದ್ಯುತ್ ಕೈ ಕೊಟ್ಟು ಆರು ದಿನ ಕಳೆದಿದ್ದು, 1.50 ಕೋಟಿ ವೆಚ್ಚದ ಟ್ರಾನ್ಸ್ ಫಾರ್ಮರ್ ತರಿಸುವ ಪ್ರಯತ್ನ ಮುಂದುವರಿದಿದೆ.
ಎಲ್ಲೆಲ್ಲಿ ಸಮಸ್ಯೆ?: ತುರುವಿಹಾಳ ಉಪಕೇಂದ್ರದಿಂದ ತಾಲೂಕಿನ ವಿರೂಪಾಪುರ, ಕಲ್ಮಂಗಿ, ಚಿಕ್ಕಬೇರಿ, ಕೆ. ಹೊಸಳ್ಳಿ, ಏಳುಮೈಲ್ ಕ್ಯಾಂಪ್, ಉಮಲೂಟಿ
ಸೇರಿದಂತೆ ಇತರ ಗ್ರಾಮಗಳಿಗೆ ವಿದ್ಯುತ್ ಪೂರೈಸಬೇಕಿದೆ. ಉಪಕೇಂದ್ರದಲ್ಲಿನ 10ಮೆ. ವ್ಯಾಟ್ ಟ್ರಾನ್ಸ್‌ಫಾರ್ಮರ್ ಸುಟ್ಟು ನಾಲ್ಕು ದಿನ ಕಳೆದರೂ ಹೊಸ ಟ್ರಾನ್ಸ್‌ಫಾರ್ಮರ್ ಜೋಡಣೆಯಾಗಿಲ್ಲ.
ತಾಲೂಕು ಮಟ್ಟದಲ್ಲಿ ದೊಡ್ಡ ಟ್ರಾನ್ಸ್‌ಫಾರ್ಮರ್‌ಗಳ ಪೂರೈಕೆ ಇಲ್ಲವಾಗಿದ್ದು, ಬೇರೆ ಕಡೆಯಲ್ಲಿ ಹುಡುಕಾಟ ನಡೆದಿದೆ. ಕಡಲೆ, ಹತ್ತಿ, ಸಜ್ಜಿ, ಶೇಂಗಾ ಸೇರಿದಂತೆ
ಸೀತಾಫಲ, ಮೋಸಂಬಿ, ದಾಳಿಂಬೆ ತೋಟಗಳು ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು, ಪಂಪ್‌ಸೆಟ್ ಆರಂಭವಾದರಷ್ಟೇ ನೀರು ಪೂರೈಕೆಯಾಗುತ್ತದೆ.
ನಿರಂತರ ವಿದ್ಯುತ್ ಫೂರೈಕೆ ಇದ್ದಾಗಲೂ ತ್ರಿಫೇಸ್ ನಂತೆ 3 ತಾಸು ಪಂಪ್‌ಸೆಟ್ ಚಾಲ್ತಿಯಲ್ಲಿರುತ್ತವೆ. ಇದೇ ಲೆಕ್ಕದ ಮೇಲೆ ಜಮೀನಿನಲ್ಲಿ ಬೆಳೆ ಹಾಕಿದ ರೈತರಿಗೆ ರೋಟೇಶನ್ ಪ್ರಕಾರ ಎಲ್ಲ ಜಮೀನಿಗೆ ನೀರು ಪೂರೈಸುವಲ್ಲಿ ಸಮಸ್ಯೆಯಾಗಿದೆ. ತಾತ್ಕಾಲಿಕ ವ್ಯವಸ್ಥೆಯಾದರೂ ತ್ರಿಫೇಸ್ ವಿದ್ಯುತ್ ಸಮರ್ಪಕವಾಗಿ ದೊರೆಯದ್ದರಿಂದ ಗೊಂದಲ ಏರ್ಪಟ್ಟಿದೆ.
ಕೆಪಿಟಿಸಿಎಲ್ ಜತೆ ಚರ್ಚೆ: ಜೆಸ್ಕಾಂ ವ್ಯವಸ್ಥಾಪಕ
ನಿರ್ದೇಶಕ ಪಾಂಡ್ವೆ ರಾಹುಲ್ ತುಕಾರಾಂ ತಾಲೂಕಿಗೆ ಭೇಟಿ ನೀಡಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು. ಆದರೆ, ತಾಲೂಕಿನ ರೈತರಿಗೆ ಉಂಟಾಗಿರುವ ಸಮಸ್ಯೆ ಬಗ್ಗೆ ಗಮನ ಸೆಳೆದಾಗ, ಈ ವಿಷಯ ಗೊತ್ತಿರಲಿಲ್ಲ ಎಂದರು. ನಾಲ್ಕು ದಿನ ವಿಳಂಬ ಏಕೆ? ಎಂದು ಅಧಿ ಕಾರಿಗಳಿಗೆ ಪ್ರಶ್ನಿಸಿದ ಅವರು, ತುರ್ತಾಗಿ ಕರೆಂಟ್ ವ್ಯವಸ್ಥೆ ಮಾಡುವಂತೆ ಸ್ಥಳದಲ್ಲಿದ್ದ ಅಧಿ ಕಾರಿಗಳಿಗೆ ಸೂಚಿಸಿದರು. ಈ ನಡುವೆ ಶಾಸಕ ಪ್ರತಾಪ್‌ಗೌಡ ಪಾಟೀಲ್ ಕೂಡ ಜೆಸ್ಕಾಂ ಎಂಡಿಯವರ ಜತೆ ಚರ್ಚಿಸಿದ್ದು, 10 ಮೆ.ವ್ಯಾ. ಟ್ರಾನ್ಸ್‌ಫಾರ್ಮರ್ ಅಳವಡಿಕೆಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ತ್ವರಿತವಾಗಿ ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಕೆಯಾದರೆ ಮಾತ್ರ ರೈತರ ಬೆಳೆಗಳು ಉಳಿಯಲಿದ್ದು, ಮೇಲಧಿ ಕಾರಿಗಳು ಈ ಬಗ್ಗೆ ತುರ್ತು ಕಾರ್ಯಪ್ರವೃತ್ತರಾಗಬೇಕಿದೆ.
*ಯಮನಪ್ಪ ಪವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.